ಯಕ್ಷಗಾನದಿಂದ ಸಂಸ್ಕೃತಿಯ ಶಿಕ್ಷಣ: ಡಾ. ತುಕಾರಾಮ ಪೂಜಾರಿ

| Published : Jan 21 2024, 01:35 AM IST

ಸಾರಾಂಶ

ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ – ಐರೋಡಿ ಇವರ ಯಕ್ಷಗಾನ ಸಪ್ತಾಹ ಹಾಗೂ ಹಿರಿಯರ ನೆನಪು ಕಾರ್ಯಕ್ರಮ ನಡೆಯಿತು. ಎಂದು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಬಂಟ್ವಾಳ ಇದರ ಅಧ್ಯಕ್ಷರಾದ ಡಾ. ತುಕಾರಾಮ ಪೂಜಾರಿ ಯಕ್ಷಗಾನದ ಬಗ್ಗೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹಂಗಾರಕಟ್ಟೆ

ಯಕ್ಷಗಾನ ಕಲಾವಿದರಲ್ಲಿ ಶಾಲಾ ಶಿಕ್ಷಣದ ಕೊರತೆ ಇದ್ದರೂ ಕೂಡಾ ಪುರಾಣಗಳಲ್ಲಿನ ಸಂಸ್ಕಾರಯುತ ಸಂದೇಶವನ್ನು ಇವತ್ತಿಗೂ ಸಮಾಜಕ್ಕೆ ನೀಡುತ್ತಿರುವುದು ಅಭಿನಂದನೀಯ ವಿಚಾರ ಎಂದು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಬಂಟ್ವಾಳ ಇದರ ಅಧ್ಯಕ್ಷರಾದ ಡಾ. ತುಕಾರಾಮ ಪೂಜಾರಿ ಹೇಳಿದರು.

ಅವರು ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ – ಐರೋಡಿ ಇವರ ಯಕ್ಷಗಾನ ಸಪ್ತಾಹ ಹಾಗೂ ಹಿರಿಯರ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದರು.

ಬದುಕನ್ನು ಕಟ್ಟುವ ಶಿಕ್ಷಣ ನೀಡುವುದರೊಂದಿಗೆ ಯಕ್ಷಗಾನ ಸಮಾಜದ ಸ್ವಾಸ್ಯ ಕಾಪಾಡುತ್ತಿರುವುದು ಅದರ ಹಿರಿಮೆ. ಅದರೊಂದಿಗೆ ಕನ್ನಡವನ್ನು ಬೆಳೆಸುವಲ್ಲಿ ಯಕ್ಷಗಾನದ ಪಾತ್ರ ಬಹುದೊಡ್ಡದು. ಕನಿಷ್ಠ ವಿದ್ಯಾಭ್ಯಾಸವಿರುವ ಕಲಾವಿದನೂ ಕೂಡ ವಿಶ್ವ ವಿದ್ಯಾಲಯಯದ ಪದವೀಧರರಿಗಿಂತಲೂ ಶುದ್ಧ ಕನ್ನಡ ಆಡಬಲ್ಲರು. ಅವರ ಸಾಹಿತ್ಯವೂ ಅದ್ಬುತ ಹಾಗಾಗಿ ಯಕ್ಷಗಾನ ಸಮಾಜಕ್ಕೆ ನೀಡುವ ಶಿಕ್ಷಣ ಯಾವ ಕಲೆಯೂ, ಯಾವ ರಂಗದಲ್ಲೂ ಸಿಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆಯನ್ನು ಕಲಾಕೇಂದ್ರದ ಅಧ್ಯಕ್ಷರಾದ ಆನಂದ ಸಿ ಕುಂದರ್ ವಹಿಸಿದ್ದರು. ವೇದಿಕೆಯಲ್ಲಿ ಬೆಳ್ವೆ ಗಣೇಶ ಕಿಣಿ, ಸಾಸ್ತಾನ ವ್ಯವಸಾಯಕ ಸಂಘದ ಅಧ್ಯಕ್ಷರಾದ ಸುರೇಶ ಅಡಿಗ, ವಡ್ಡರ್ಸೆ ಮಹಾಲಿಂಗೇಶ್ವರ ಕಲಾರಂಗದ ಅಧ್ಯಕ್ಷರಾದ ಸಚಿನ್ ಶೆಟ್ಟಿ ಹಾಗೂ ಸಾಂಸ್ಕೃತಿಕ ಸಮಿತಿಯ ವಾಸುದೇವ ಕಾರಂತ ಉಪಸ್ಥಿತರಿದ್ದರು. ಹಿರಿಯರ ನೆನಪು ಕಾರ್ಯಕ್ರಮದಲ್ಲಿ ಕಲಾಕೇಂದ್ರದ ಸ್ಥಾಪಕ ಮದ್ದಳೆ ಗುರುಗಳಾದ ಬೇಳಂಜೆ ತಿಮ್ಮಪ್ಪ ನಾಯಕರ ಸ್ಮರಣೆ ಯನ್ನು ಬೇಳಂಜೆ ಸತೀಶ ನಾಯಕರು ಮಾಡುವುದರೊಂದಿಗೆ ಅವರ ನೆನಪಿನಲ್ಲಿ ಅವರ ಶಿಷ್ಯ ಖ್ಯಾತ ಮದ್ದಳೆವಾದಕ ಕಲಾಕೇಂದ್ರದ ಶಿಷ್ಯರಾದ ಶಂಕರ ಭಾಗವತ ಎಲ್ಲಾಪುರ ಇವರನ್ನು ಗೌರವಿಸಲಾಯಿತು.

ಕಾರ್ಯದರ್ಶಿ ರಾಜಶೇಖರ ಹೆಬ್ಬಾರ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ವೈಕುಂಠ ಹೇರ್ಳೆ ಕಾರ್ಯಕ್ರಮ ನಿರ್ವಹಣೆ ಮಾಡಿದರು. ರಾಘವೇಂದ್ರ ಮಯ್ಯ ವಂದಿಸಿದರು.

ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಅಮೃತ ಮಯ್ಯ ತಂಡದಿಂದ ನೃತ್ಯ ಸಿಂಚನ, ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷಗಾನ ಪೂರ್ವರಂಗ ಪ್ರದರ್ಶನ, ಸಭಾ ಕಾರ್ಯಕ್ರಮದ ನಂತರ ಪಟ್ಟಾಭಿಷೇಕ ಭಂಗ ಯಕ್ಷಗಾನ ಪ್ರದರ್ಶನ ನಡೆಯಿತು.