ತಂತ್ರಜ್ಞಾನ ಯುಗದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗದೆ ನಮ್ಮ ದೇಸಿ ಪರಂಪರೆ ಮತ್ತು ನೆಲಮೂಲ ಸಂಸ್ಕೃತಿ ಉಳಿಸುವ ಜವಾಬ್ದಾರಿ ನಮ್ಮದಾಗಬೇಕು. ರೈತ ಸಾಂಸ್ಕೃತಿಕ ಹಬ್ಬಗಳಿಂದ ದೇಸಿ ಪರಂಪರೆ ಶ್ರೀಮಂತವಾಗಿದೆ ಎಂದು ಅಭಿನವ ಒಪ್ಪತ್ತೇಶ್ವರ ಶ್ರೀಗಳು ಹೇಳಿದರು.
ಕನ್ನಡಪ್ರ ವಾರ್ತೆ ಗುಳೇದಗುಡ್ಡ
ತಂತ್ರಜ್ಞಾನ ಯುಗದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗದೆ ನಮ್ಮ ದೇಸಿ ಪರಂಪರೆ ಮತ್ತು ನೆಲಮೂಲ ಸಂಸ್ಕೃತಿ ಉಳಿಸುವ ಜವಾಬ್ದಾರಿ ನಮ್ಮದಾಗಬೇಕು. ರೈತ ಸಾಂಸ್ಕೃತಿಕ ಹಬ್ಬಗಳಿಂದ ದೇಸಿ ಪರಂಪರೆ ಶ್ರೀಮಂತವಾಗಿದೆ ಎಂದು ಅಭಿನವ ಒಪ್ಪತ್ತೇಶ್ವರ ಶ್ರೀಗಳು ಹೇಳಿದರು.ತಾಲೂಕಿನ ತೆಗ್ಗಿ ಗ್ರಾಮದ ದಿ.ಮುತ್ತಪ್ಪ ಕಾಳನ್ನವರ ಹೊಲದಲ್ಲಿ ಉತ್ತರ ಕರ್ನಾಟಕ ವಿಶ್ವಕರ್ಮ ಯುವ ಬರಹಗಾರರ ಮತ್ತು ಸಂಶೋಧಕರ ವೇದಿಕೆ ಕಮಾಲಾಪೂರ (ಬೆಣ್ಣೂರು) ಹಾಗೂ ತೆಗ್ಗಿ ಗ್ರಾಮದ ಕಾಳನ್ನವರ ಪರಿವಾರದವರ ಸಹಯೋಗದಲ್ಲಿ ಶುಕ್ರವಾರ 2025ರ ಎಳ್ಳ ಅಮಾವಾಸ್ಯೆ ಚೆರಗ ಚೆಲ್ಲುವ ಸಂಭ್ರಮ ಹಾಗೂ ಕನ್ನಡ ವಿವಿ ಹಂಪಿಯ ಪ್ರಾಧ್ಯಾಪಕ ಡಾ.ವೀರೇಶ ಬಡಿಗೇರ ಅವರ ಜಾನಪದ ಗೊಂಚಲು ಪುಸ್ತಕ ಲೋಕಾರ್ಪಣೆ ಹಾಗೂ ಜಾನಪದ ಗೀತ ಗಾಯನ ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ ಬಸವರಾಜೇಶ್ವರ ಕುಬಕಡ್ಡಿ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ರೈತರು ಆಚರಿಸುವ ಹಬ್ಬಗಳು ವೈಶಿಷ್ಟ್ಯಪೂರ್ಣವಾಗಿವೆ. ಬಗೆಬಗೆಯ ಆಹಾರ ಪದಾರ್ಥ ಮನೆಯಲ್ಲಿ ತಯಾರಿಸಿ ಭೂತಾಯಿಗೆ ಎಡೆ ಮಾಡಿ ಚೆರಗ ಚೆಲ್ಲುವ ನೆಲಮೂಲ ಸಂಸ್ಕೃತಿಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ನೀಡುವ ಜವಾಬ್ದಾರಿ ನಮ್ಮದಾಗಬೇಕೆಂದು ಹೇಳಿದರು.ವಿಶ್ರಾಂತ ಉಪ ನಿರ್ದೇಶಕ ಸಿದ್ದರಾಮ ಮನಹಳ್ಳಿ ಅವರು ಡಾ.ವೀರೇಶ ಬಡಿಗೇರ ಅವರ ಜಾನಪದ ಗೊಂಚಲು ಪುಸ್ತಕ ಲೋಕಾರ್ಪಣೆ ಮಾಡಿದರು. ಜಾನಪದ ವಿದ್ವಾಂಸ ಡಾ.ಪ್ರಕಾಶ ಖಾಡೆ ಅವರು ಜಾನಪದ ಗೊಂಚಲು ಪುಸ್ತಕ ಪರಿಚಯ ಮಾಡಿದರು. ಮುಖ್ಯ ಅತಿಥಿಗಳಾದ ಪ್ರಾಂಶುಪಾಲ ಡಾ.ಶರಣಗೌಡ ಪಾಟೀಲ, ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಡಾ.ಅರುಣಕುಮಾರ ಗಾಳಿ ಮಾತನಾಡಿ, ಮನುಷ್ಯನ ಸುಂದರ ಜೀವನಕ್ಕೆ ಬೇಕಾದ ಜ್ಞಾನ ಸಂಪತ್ತು, ಅರಿವು ನಮ್ಮ ಮಣ್ಣಿನ ಗುಣಧರ್ಮದಲ್ಲಿದೆ. ನಾವೆಲ್ಲರೂ ಪರಸ್ಪರ ಕೂಡಿಕೊಂಡು ಹಬ್ಬಗಳನ್ನು ಆಚರಿಸುವುದರಿಂದ, ಸಂಭ್ರಮಿಸುವುದರಿಂದ ಆನಂದಮಯ ಬದುಕು ನಮ್ಮದಾಗುವುದು ಎಂದು ಹೇಳಿದರು. ಡಾ.ಚಂದ್ರಶೇಖರ ಕಾಳನ್ನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಾನಪದ ಸಂಜೀವಿನ ಗವಿಸಿದ್ದಯ್ಯ ಹಳ್ಳಿಕೇರಿಮಠ ಅವರು ಭೂತಾಯಿ ಕುರಿತಾದ ಜಾನಪದ ಗೀತಗಾಯನ ಚೆರಗ ಚೆಲ್ಲುವ ಸಂಭ್ರಮಕ್ಕೆ ಮೆರುಗೆ ತಂದಿತು. ರಾಜ್ಯಮಟ್ಟದ ಅತ್ಯತ್ತಮ ಅಂಗನಾವಡಿ ಕಾರ್ಯಕರ್ತ ಪ್ರಶಸ್ತಿ ಪುರಷ್ಕೃತೆ ಬಸವರಾಜೇಶ್ವರಿ ಕುಬಕಡ್ಡಿ ಅವರಿಗೆ ಪುಜ್ಯರು, ಗಣ್ಯರು, ಬಂಧುಗಳು ಗೌರವ ಸನ್ಮಾನಿಸಿ ಅಭಿನಂದಿಸಿದರು. ಪ್ರೊ.ಸಂಗಮೇಶ ಬ್ಯಾಳಿ ಕಾರ್ಯಕ್ರಮ ನಿರೂಪಿಸಿದರು, ಶೇಖರ ಗೊಳಸಂಗಿ ವಂದಿಸಿದರು.
ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಆನಂದ ದಲಬಂಜನ್, ಸಾಹಿತಿ ಡಾ.ಸಣ್ಣವೀರಣ್ಣ ದೊಡ್ಡಮನಿ, ಪಾಂಡುರಂಗ ಸಣ್ಣಪ್ಪನವರ, ಹಿರಿಯ ರೈತರಾದ ಕೃಷ್ಣಾ ಯಡಹಳ್ಳಿ, ಸಿ.ಎನ್.ಬಾಳಕ್ಕನವರ, ಸಂಜಯ ನಡುವಿನಮನಿ, ಎಚ್.ಎನ್.ಮೊಕಾಶಿ, ಮಲ್ಲಿಕಾರ್ಜುನ ಸಜ್ಜನ, ಡಾ.ಎಚ್.ಎಸ್ ಘಂಟಿ, ಶಿವುಕುಮಾರ ರಾಂಪೂರ, ವಕೀಲರಾದ ವೀರಯ್ಯ ಮಣ್ಣೂರಮಠ, ಸಂಗಮೇಶ ಬಡಿಗೇರ, ಶ್ರೀಹರಿ ದೂಪದ ಸೇರಿದಂತೆ ಇತರರು ಇದ್ದರು.