ಸಾರಾಂಶ
ಸಮಾಜದಲ್ಲಿ ಶಿಕ್ಷಣ ಕಲಿಸುವಂಥ ಸಂಸ್ಥೆಗಳು ಅಧಿಕ. ಆದರೆ ಸಂಸ್ಕಾರ ಹೇಳಿ ಕೊಡುವ ಪಾಠ ಶಾಲೆ ವಿರಳ. ಆದ್ದರಿಂದ ಮನುಷ್ಯನ ಸಾರ್ಥಕ ಬದುಕಿಗೆ ಕಾರಣವಾಗುವ ಸಂಸ್ಕಾರ, ಸಂಸ್ಕೃತಿ ಬಗೆಗಿನ ನೀತಿಯನ್ನು ಬೋಧಿಸುವ ಸಂಸ್ಥೆಗಳು ಸಮಾಜದಲ್ಲಿ ಪ್ರಸ್ತುತವಾಗಬೇಕು. ಮನುಷ್ಯನಿಗೆ ಕೇವಲ ಶಿಕ್ಷಣ ಒಂದಿದ್ದರೆ ಸಾಲದು, ಸಂಸ್ಕಾರವೂ ಬೇಕಾಗುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮೂಲಕ ಮಹಿಳೆಯರನ್ನು ಸಂಘಟಿಸಿ, ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಿ, ಜ್ಞಾನದ ಜತೆಗೆ ಸಂಸ್ಕಾರ ಕಲಿಸುತ್ತಿದ್ದಾರೆ. ಇದು ಕುಟುಂಬದಲ್ಲಿನ ಒಗ್ಗಟ್ಟು ಮತ್ತು ಸ್ವಾವಲಂಬಿ ಬದುಕಿಗೆ ನೆರವಾಗುತ್ತದೆ ಎಂದು ಗೇರುಕೊಪ್ಪ ಮತ್ತು ಬಪ್ಪಗೊಂಡನಕೊಪ್ಪ ಗ್ರಾಮಗಳ ಇಂದೂಧರ ಮಠದ ಶಿವಲಿಂಗೇಶ್ವರ ಮಹಾಸ್ವಾಮೀಜಿ ಸೊರಬದ ಮಂಚಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಸೊರಬ
ಸಮಾಜದಲ್ಲಿ ಶಿಕ್ಷಣ ಕಲಿಸುವಂಥ ಸಂಸ್ಥೆಗಳು ಅಧಿಕ. ಆದರೆ ಸಂಸ್ಕಾರ ಹೇಳಿ ಕೊಡುವ ಪಾಠ ಶಾಲೆ ವಿರಳ. ಆದ್ದರಿಂದ ಮನುಷ್ಯನ ಸಾರ್ಥಕ ಬದುಕಿಗೆ ಕಾರಣವಾಗುವ ಸಂಸ್ಕಾರ, ಸಂಸ್ಕೃತಿ ಬಗೆಗಿನ ನೀತಿಯನ್ನು ಬೋಧಿಸುವ ಸಂಸ್ಥೆಗಳು ಸಮಾಜದಲ್ಲಿ ಪ್ರಸ್ತುತವಾಗಬೇಕು ಎಂದು ಗೇರುಕೊಪ್ಪ ಮತ್ತು ಬಪ್ಪಗೊಂಡನಕೊಪ್ಪ ಗ್ರಾಮಗಳ ಇಂದೂಧರ ಮಠದ ಶಿವಲಿಂಗೇಶ್ವರ ಮಹಾಸ್ವಾಮೀಜಿ ನುಡಿದರು.ಬುಧವಾರ ತಾಲೂಕಿನ ಮಂಚಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಮ್ಮಿಕೊಂಡಿದ್ದ ಮಾವಲಿ ವಲಯಮಟ್ಟದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪದಗ್ರಹಣ ಕಾರ್ಯಕ್ರಮದಲ್ಲಿ ದಿವ್ಯಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮನುಷ್ಯನಿಗೆ ಕೇವಲ ಶಿಕ್ಷಣ ಒಂದಿದ್ದರೆ ಸಾಲದು, ಸಂಸ್ಕಾರವೂ ಬೇಕಾಗುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮೂಲಕ ಮಹಿಳೆಯರನ್ನು ಸಂಘಟಿಸಿ, ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಿ, ಜ್ಞಾನದ ಜತೆಗೆ ಸಂಸ್ಕಾರ ಕಲಿಸುತ್ತಿದ್ದಾರೆ. ಇದು ಕುಟುಂಬದಲ್ಲಿನ ಒಗ್ಗಟ್ಟು ಮತ್ತು ಸ್ವಾವಲಂಬಿ ಬದುಕಿಗೆ ನೆರವಾಗುತ್ತದೆ ಎಂದರು.ಮಾವಲಿ ವಲಯದ 10 ಒಕ್ಕೂಟಗಳ ಪದಗ್ರಹಣ ನಡೆಸಿಕೊಟ್ಟು ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಎ. ಬಾಬು ನಾಯ್ಕ ಮಾತನಾಡಿ, ಧರ್ಮಸ್ಥಳ ಸಂಸ್ಥೆ ಆರ್ಥಿಕ ಸ್ವಾವಲಂಬನೆ ಮಾತ್ರವಲ್ಲದೇ, ಕೃಷಿ ಕಾರ್ಮಿಕರು, ವಿದ್ಯಾರ್ಥಿಗಳು, ಇಂಗುಗುಂಡಿ, ಕೆರೆ ಅಭಿವೃದ್ಧಿಪಡಿಸುವಂಥ ಮಹತ್ಕಾರ್ಯದಲ್ಲಿ ತೊಡಗಿದೆ. ಧರ್ಮಸ್ಥಳ ಒಕ್ಕೂಟದ ಪ್ರಾಮುಖ್ಯತೆ, ಪದಾಧಿಕಾರಿಗಳ ಜವಾಬ್ದಾರಿ ಹಾಗೂ ಯೋಜನೆ ಜನಪರ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಉದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಮಾಜಿ ಅಧ್ಯಕ್ಷೆ ಮನಸ್ವಿನಿ, ಮಂಚಿ ಆಂಜನೇಯಸ್ವಾಮಿ ದೇವಸ್ಥಾನ ಕಮಿಟಿ ಅಧ್ಯಕ್ಷ ಎಚ್.ಶೇಖರಪ್ಪ, ಗ್ರಾಪಂ ಉಪಾಧ್ಯಕ್ಷೆ ತಾರಾ, ಯೋಜನಾಧಿಕಾರಿ ಸುಬ್ರಾಯ ನಾಯ್ಕ, ಮೇಲ್ವಿಚಾರಕರಾದ ರಾಧಾ, ಉಮೇಶ್ ಸೇರಿದಂತೆ 10 ಒಕ್ಕೂಟಗಳ ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳು, ಪ್ರಗತಿಬಂಧು ಸ್ವಸಹಾಯ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ದರು.- - - -01ಕೆಪಿಸೊರಬ02:
ಸೊರಬ ತಾಲೂಕಿನ ಮಂಚಿ ಗ್ರಾಮದಲ್ಲಿ ಶಿವಲಿಂಗೇಶ್ವರ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಮಾವಲಿ ವಲಯಮಟ್ಟದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪದಗ್ರಹಣ ಕಾರ್ಯಕ್ರಮ ನಡೆಯಿತು.