ವಿದ್ಯೆಯ ಜತೆ ಸಂಸ್ಕಾರ ಕಲಿಕೆ: ಡಾ. ವೂಡೇ ಪಿ.ಕೃಷ್ಣ

| Published : Apr 05 2024, 01:06 AM IST

ಸಾರಾಂಶ

ದೇಶದ ಭವಿಷ್ಯಕ್ಕಾಗಿ ಮಕ್ಕಳನ್ನು ಸಿದ್ಧಗೊಳಿಸಿ. ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಸುಸಂಸ್ಕೃತರಾದರೆ ಮಾತ್ರ ವಿದ್ಯೆಗೆ ಬೆಲೆ ಎಂದು ನಾಡೋಜ ಡಾ. ವೂಡೇ ಪಿ.ಕೃಷ್ಣ ಹೇಳಿದರು. ಅರಸೀಕೆರೆಯ ಅನಂತ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.

ಅನಂತ್‌ ಶಾಲಾ ವಾರ್ಷಿಕೋತ್ಸವ

ಕನ್ನಡಪ್ರಭ ವಾರ್ತೆ ಅರಸೀಕೆರೆ

ಮಕ್ಕಳು ಹಣ ಸಂಪಾದನೆಯ ಯಂತ್ರಗಳಲ್ಲ, ಪೋಷಕರು ಮುಂದಿನ ತಮ್ಮ ಭವಿಷ್ಯಕ್ಕಾಗಿ ಮಕ್ಕಳನ್ನು ಬೆಳಸದೇ ದೇಶದ ಭವಿಷ್ಯಕ್ಕಾಗಿ ಮಕ್ಕಳನ್ನು ಸಿದ್ಧಗೊಳಿಸಿ. ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಸುಸಂಸ್ಕೃತರಾದರೆ ಮಾತ್ರ ವಿದ್ಯೆಗೆ ಬೆಲೆ ಎಂದು ನಾಡೋಜ ಡಾ. ವೂಡೇ ಪಿ.ಕೃಷ್ಣ ಹೇಳಿದರು

ನಗರದ ಅನಂತ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿ ಈ ಶಾಲೆಯು ಮಕ್ಕಳಲ್ಲಿ ಸಂಸ್ಕೃತಿಯನ್ನು ಬಿತ್ತುವ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ವಿಜ್ಞಾನಿಗಳಾದ ಪ್ರಾಪ್ತಿ ಮಿತ್ತಲ್ ಅವರು ಚಂದ್ರಯಾನ-೩ ರ ಸಾಧನೆಯ ವಿಚಾರಧಾರೆಯನ್ನು ಮಕ್ಕಳೊಂದಿಗೆ ಹಂಚಿಕೊಂಡರು.

ಅನಂತ್ ಇಂಟರ್‌ನ್ಯಾಷನಲ್ ಶಾಲೆಯ ಅಧ್ಯಕ್ಷ ಆರ್ ಅನಂತಕುಮಾರ್ ಮಾತನಾಡಿ ಮಕ್ಕಳಿಗೆ ಒತ್ತಡದೊಂದಿಗೆ ವಿದ್ಯಾಭ್ಯಾಸ ಮಾಡಿಸದೆ ಆಸಕ್ತಿಯುತ ಕಲಿಕೆಗೆ ಒತ್ತು ನೀಡುವ ಉದ್ದೇಶದಿಂದ ಹಲವಾರು ಪಠ್ಯಪೂರಕ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದೇವೆ. ಅದರಲ್ಲಿ ಸಾಧನೆಗೈದ ಮಕ್ಕಳನ್ನು ಬಹುಮಾನ ನೀಡುವ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ನಾವು ಶ್ರಮಿಸಲು ಸದಾ ಸಿದ್ಧ ಎಂದು ತಿಳಿಸಿದರು.

ಇಸ್ರೋ ವಿಜ್ಞಾನಿಗಳಾದ ಪ್ರಾಪ್ತಿ ಮಿತ್ತಲ್ ಹಾಗೂ ಎಸ್. ರಾಮಯ್ಯ ಎಜ್ಯುಕೇಷನ್ ಟ್ರಸ್ಟ್ ನ ಅಧ್ಯಕ್ಷರಾದ ಶಾರದ ಅನಂತಕುಮಾರ್ ಉಪಸ್ಥಿತರಿದ್ದರು. ಮಕ್ಕಳ ಪಠ್ಯ ಪೂರಕ ಚಟುವಟಿಕೆಗಳ ಸಾಧನೆಗೆ ಬಹುಮಾನಗಳನ್ನು ವಿತರಿಸಿ ಪ್ರೋತ್ಸಾಹ ನೀಡಲಾಯಿತು. ಮಕ್ಕಳೇ ಸ್ವತಃ ಸಂಗೀತೋಪಕರಣಗಳನ್ನು ಬಳಸಿ ಗೀತಗಾಯನದೊಂದಿಗೆ ಸಂಗೀತ ಸಂಜೆ ನಡೆಸಿದರು. ಜಾನಪದ, ರಾಷ್ಟ್ರೀಯ, ಅಂತಾರಾಷ್ಟ್ರೀಯ ನೃತ್ಯ ಪ್ರಕಾರಗಳ ಮೂಲಕ ಮಕ್ಕಳು ವೀಕ್ಷಕರನ್ನು ರಂಜಿಸಿದರು. ಶಾಲೆಯ ಮೂಲಕ ನೀರನ್ನು ಸಂರಕ್ಷಿಸುವ ಸಂದೇಶವನ್ನು ವೀಕ್ಷಕರಿಗೆ ತಲುಪಿಸುವ ಕಾರ್ಯ ನಡೆಸಲಾಯಿತು.ಅರಸೀಕೆರೆ ನಗರದ ಅನಂತ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ನಾಡೋಜ ಡಾ. ವೂಡೇ ಪಿ.ಕೃಷ್ಣ ಅವರನ್ನು ಅಭಿನಂದಿಸಲಾಯಿತು.