ಹಿರಿಯರಿಂದ ಸಂಸ್ಕೃತಿ, ಸಂಸ್ಕಾರ ದೊರೆಯುತ್ತದೆ: ಶಂಭುನಾಥ ಸ್ವಾಮೀಜಿ

| Published : Feb 20 2024, 01:46 AM IST

ಹಿರಿಯರಿಂದ ಸಂಸ್ಕೃತಿ, ಸಂಸ್ಕಾರ ದೊರೆಯುತ್ತದೆ: ಶಂಭುನಾಥ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿ ಮನೆಯಲ್ಲಿ ಹಿರಿಯರಿದ್ದರೆ ಸಂಸ್ಕೃತಿ ಮತ್ತು ಸಂಸ್ಕಾರಗಳು ತಾವಾಗಿಯೇ ದೊರೆಯುತ್ತವೆ. ಅದಕ್ಕಾಗಿ ಮಕ್ಕಳನ್ನು ಹಿರಿಯರ ಸಮ್ಮುಖದಲ್ಲಿ ಬೆಳೆಸಬೇಕು ಎಂದು ಆದಿಚುಂಚನಗಿರಿಯ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಹೇಳಿದರು. ಅರಸೀಕೆರೆಯ ಆದಿಚುಂಚನಗಿರಿ ಆಂಗ್ಲ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಚುಂಚಸುರಭಿ ೨೦೨೪ರ ಕಾರ್ಯಕ್ರಮದಲ್ಲಿ ಮಾತಬನಾಡಿದರು.

ಚುಂಚಸುರಭಿ ೨೦೨೪ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಅರಸೀಕೆರೆ

ಪ್ರತಿ ಮನೆಯಲ್ಲಿ ಹಿರಿಯರಿದ್ದರೆ ಸಂಸ್ಕೃತಿ ಮತ್ತು ಸಂಸ್ಕಾರಗಳು ತಾವಾಗಿಯೇ ದೊರೆಯುತ್ತವೆ. ಅದಕ್ಕಾಗಿ ಮಕ್ಕಳನ್ನು ಹಿರಿಯರ ಸಮ್ಮುಖದಲ್ಲಿ ಬೆಳೆಸಬೇಕು ಎಂದು ಆದಿಚುಂಚನಗಿರಿಯ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಹೇಳಿದರು.

ನಗರದ ಲಕ್ಷ್ಮೀಪುರದಲ್ಲಿರುವ ಆದಿಚುಂಚನಗಿರಿ ಆಂಗ್ಲ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಚುಂಚಸುರಭಿ ೨೦೨೪ರ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ಹಿರಿಯರ ಕೊರತೆ ಕಾಣುತ್ತಿದೆ. ಹಿರಿಯರು ಮಕ್ಕಳ ಬೆಳವಣಿಗೆಯ ಬಗ್ಗೆ, ಅವರ ಚಟುವಟಿಕೆಗಳ ಬಗ್ಗೆ ಪರೀಕ್ಷೆ ಮಾಡುತ್ತಿದ್ದರು. ಅದು ಈಗ ಇಲ್ಲವಾಗಿದೆ. ಮನೆಯಲ್ಲಿ ಕೊಟ್ಟ ಸಂಸ್ಕಾರ ಜೀವನವನ್ನು ಕಾಯುತ್ತವೆ ಎಂದು ಹೇಳಿದರು.

ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರು ಶಿಕ್ಷಣ ನೀಡಲು ಮುಂದಾಗಿ ಶಾಲೆಗಳನ್ನು ಪ್ರಾರಂಭಿಸಿದರು. ಇಂದು ಖಾಸಗಿ ಶಾಲೆಗಳು ಪ್ರಾರಂಭವಾಗದಿದ್ದರೆ ಶೇಕಡ ೨೦ ರಷ್ಟು ಮಂದಿಯೂ ವಿದ್ಯಾವಂತರಾಗುವುದು ಕಷ್ಟವಾಗುತ್ತಿತ್ತು ಎಂದರು.

ತಾಯಿ ಮಕ್ಕಳಿಗೆ ರಕ್ಷಾ ಕವಚವಿದ್ದಂತೆ, ತಾಯಿ ನಿಶ್ಚಯಿಸಿದರೆ ಮಕ್ಕಳನ್ನು ಯಾವ ಸ್ಥಾನಕ್ಕೆ ಬೇಕಾದರೂ ಕೊಂಡೊಯ್ಯುವ ಶಕ್ತಿ ಇದೆ. ಮಕ್ಕಳಲ್ಲಿರುವ ಪ್ರತಿಭೆಗೆ ಬೆಳಕನ್ನು ನೀಡಿ ಪೋಷಕರು ಮಾರ್ಗದರ್ಶನ ನೀಡಬೇಕಿದೆ. ಇಂದು ವಿವೇಕವುಳ್ಳ ಶಿಕ್ಷಣ ಅಗತ್ಯವಿದೆ. ವಿದ್ಯಾವಂತರಾದರೆ ಸಾಲದು ಹೃದಯವಂತರಾಗಬೇಕಿದೆ ಎಂದರು.

ನಗರ ಸಬ್‌ ಇನ್‌ಸ್ಪೆಪೆಕ್ಟರ್ ಲತಾ ಮಾತನಾಡಿ, ಮಕ್ಕಳಿಗೆ ಮೂರ್ತಿ ರೂಪ ನೀಡುವುದು ಶಿಕ್ಷಕರು ಮತ್ತು ಪೋಷಕರದ್ದಾಗಿದೆ. ಮಕ್ಕಳು ಕೆಟ್ಟ ವಿಚಾರಗಳ ಬಗ್ಗೆ ಗಮನಹರಿಸದಂತೆ ಹಾಗೂ ಮೊಬೈಲ್ ಬಳಕೆಯನ್ನು ಮಾಡದಂತೆ, ಅವರ ಚಲನವಲನಗಳ ಬಗ್ಗೆ ಅರಿವಿರಲಿ. ಶಿಕ್ಷಣದ ಪ್ರಮಾಣಪತ್ರಕ್ಕೆ ಮಾತ್ರ ಸೀಮಿತವಾಗಬಾರದು, ಸಾಮಾಜಿಕ ಜ್ಞಾನದ ಅವಶ್ಯಕತೆಯೂ ಸಹ ಹೊಂದಬೇಕು, ಮನೆಯೇ ಮೊದಲ ಪಾಠಶಾಲೆಯಾಗಿರುವುದರಿಂದ ಅವರ ಮುಂದೆ ಉತ್ತಮ ಮಾತುಗಳನ್ನಾಡಬೇಕು ಎಂದು ಹೇಳಿದರು.

ಅನಂತ ಸದ್ವಿದ್ಯ ಸಂಸ್ಥೆಯ ಅಧ್ಯಕ್ಷ ಆರ್.ಅನಂತಕುಮಾರ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಅನಕ್ಷರತೆಯನ್ನು ಹೋಗಲಾಡಿಸಲು ಶಾಲೆಗಳನ್ನು ಶ್ರೀಗಳು ಪ್ರಾರಂಭಿಸಿದರು. ಇದರಿಂದ ಬಡ ಮಕ್ಕಳ ಶಿಕ್ಷಣಕ್ಕೆ ದಾರಿದೀಪವಾಯಿತು. ಪೋಷಕರಿಗೆ ಮಕ್ಕಳ ಮೇಲೆ ಪ್ರೀತಿ, ವಿಶ್ವಾಸವಿರಲಿ, ವ್ಯಾಮೋಹ ಬೇಡ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಹೊಸೂರು ಗಂಗಾಧರ್, ವಿಜಯ್‌ ವಿಕ್ರಂ, ಆದಿಚುಂಚನಗಿರಿ ಕಾಲೇಜಿನ ಪ್ರಾಂಶುಪಾಲ ಡಾ.ಲಿಂಗರಾಜು, ಶಾಲೆಯ ಮುಖ್ಯ ಶಿಕ್ಷಕಿ ಜ್ಞಾನೇಶ್ವರಿ, ಸಿಆರ್‌ಪಿ ವಿಷ್ಣುವರ್ಧನ್ ಉಪಸ್ಥಿತರಿದ್ದರು.ಆದಿಚುಂಚನಗಿರಿ ಆಂಗ್ಲ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಚುಂಚಸುರಭಿ ೨೦೨೪ ರ ಕಾರ್ಯಕ್ರಮವನ್ನು ಆದಿಚುಂಚನಗಿರಿಯ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಉದ್ಘಾಟಿಸಿದರು.