ಸಾರಾಂಶ
ಬುಳ್ಳಸಂದ್ರ ಗ್ರಾಮದಲ್ಲಿ ವಾಂತಿ, ಭೇದಿ ಪ್ರಕರಣಗಳು ಎಂದೂ ನಡೆದಿರಲಿಲ್ಲ, ಆದರೆ ಗ್ರಾಮದಲ್ಲಿನ ಊರ ಹಬ್ಬಕ್ಕೆಂದು ಆಂಧ್ರದಿಂದ ತವರು ಮನೆಗೆ ಬಂದ ಮೃತ ಕಾಟಮ್ಮನಿಂದಲೇ ಈ ಸಮಸ್ಯೆ ಉಲ್ಬಣವಾಗಿರಬಹುದೆಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ಮಧುಗಿರಿ: ಬುಳ್ಳಸಂದ್ರ ಗ್ರಾಮದಲ್ಲಿ ವಾಂತಿ, ಭೇದಿ ಪ್ರಕರಣಗಳು ಎಂದೂ ನಡೆದಿರಲಿಲ್ಲ, ಆದರೆ ಗ್ರಾಮದಲ್ಲಿನ ಊರ ಹಬ್ಬಕ್ಕೆಂದು ಆಂಧ್ರದಿಂದ ತವರು ಮನೆಗೆ ಬಂದ ಮೃತ ಕಾಟಮ್ಮನಿಂದಲೇ ಈ ಸಮಸ್ಯೆ ಉಲ್ಬಣವಾಗಿರಬಹುದೆಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ಮಂಗಳವಾರ ವಿಷಯ ತಿಳಿದ ತಕ್ಷಣ ಸಹಕಾರ ಸಚಿವ ಕೆ.ಎನ್.ರಾಜಣ್ಣ ಬುಳ್ಳಸಂದ್ರ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರಿಂದ ಮಾಹಿತಿ ಪಡೆದ ನಂತರ ಜನರು ಯಾರು ಆತಂಕ ಪಡಬೇಕಿಲ್ಲ, ಆಂಧ್ರದ ರಾಯಪುರದಲ್ಲಿ ವಾಂತಿ, ಭೇದಿ ಪ್ರಕರಣಗಳು ನಡೆದಿರುವ ಬಗ್ಗೆ ಮಾಹಿತಿಯಿದ್ದು, ಅಲ್ಲಿಂದ ಬಂದಿದ್ದ ಕಾಟಮ್ಮ ಎಂಬ ಮಹಿಳೆಯಿಂದ ವಾಂತಿ ಭೇದಿ ಪ್ರಕರಣ ಸಂಭವಿಸಿರಬಹುದು ಎಂದು ಶಂಕೆ ವ್ಯಕ್ತಪಡಿಸಿದರು. ಗ್ರಾಮದಲ್ಲಿ ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಗ್ರಾಮದ ಸುತ್ತಮುತ್ತ ಸ್ವಚ್ಛತೆಗೆ ಆದ್ಯತೆ ನೀಡಲಿದ್ದು, ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದರು.ನಂತರ ಮಧುಗಿರಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು, ರೋಗಿಗಳಿಗೆ ಎಲ್ಲ ರೀತಿಯ ವೈದ್ಯಕೀಯ ಸೌಲಭ್ಯ ನೀಡುವಂತೆ ವೈದ್ಯರಿಗೆ ಸೂಚಿಸಿದರು. ಡೀಸಿ ಶುಭಕಲ್ಯಾಣ್, ಸಿಇಒ ಜಿ.ಪ್ರಭು, ಡಿಎಚ್‌ಒ ಡಾ.ಮಂಜುನಾಥ್ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.