ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಸಿದ್ಧಗಂಗಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಮಾರ್ಚ್ 24 ರಂದು ನಡೆಯಲಿರುವ ಕಿಡ್ನಿ ಆರೋಗ್ಯಕ್ಕಾಗಿ ಸೈಕ್ಲೋಥಾನ್ ಆನ್‌ಲೈನ್ ನೋಂದಣಿಗೆ ಚಾಲನೆ ನೀಡಲಾಯಿತು.ಮೊದಲ ನೋಂದಣಿ ಮಾಡಿ ಮಾತನಾಡಿದ ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್, ಸಿದ್ಧಗಂಗಾ ಆಸ್ಪತ್ರೆ ಸಾರ್ವಜನಿಕ ಕಾಳಜಿಗಾಗಿ ಪ್ರತಿ ವರ್ಷ ಸೈಕ್ಲೋಥಾನ್ ಏರ್ಪಡಿಸುತ್ತಾ ಬಂದಿದ್ದು, ಕಿಡ್ನಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವ ಈ ಸಮಯದಲ್ಲಿ ಸಾರ್ವಜರಿಕರು ಎಚ್ಚೆತ್ತುಕೊಂಡು ಜಾಗೃತಿಗಾಗಿ ನಮ್ಮ ಸೈಕ್ಲಥಾನ್‌ನಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸಿದ್ಧಗಂಗಾ ಸೂಪರ್ ಸ್ಪೆಷಾಲಿಟಿ ವಿಭಾಗದ ಮುಖ್ಯಸ್ಥ ಡಾ.ಭಾನುಪ್ರಕಾಶ್ ಮಾತನಾಡಿ ಮನುಷ್ಯ ಪ್ರತಿನಿತ್ಯ ತನ್ನ ಆರೋಗ್ಯಕ್ಕಾಗಿ ಕೆಲ ಸಮಯ ಮೀಸಲಿಟ್ಟರೆ ಆನಾರೋಗ್ಯದಿಂದ ಆಸ್ಪತ್ರೆಗಳಲ್ಲಿ ದೀರ್ಘಾವಧಿ ಚಿಕಿತ್ಸೆ ಪಡೆಯುವುದು ತಪ್ಪುತ್ತದೆ. ಸದಾ ಆರೋಗ್ಯಕ್ಕೆ ತುತ್ತಾಗುವ ಹೃದಯ, ಮೂತ್ರಪಿಂಡ, ಶ್ವಾಸಕೋಸ ಸಮಸ್ಯೆಗಳ ಬಗ್ಗೆ ಎಚ್ಚರದಿಂದ ಇರಬೇಕು. ಸೈಕ್ಲೋಥಾನ್ ನಲ್ಲಿ ಭಾಗವಹಿಸುವ ಮೂಲಕ ಆರೋಗ್ಯ ಜಾಗೃತಿ ಸಾರಬೇಕು ಎಂದರು.ಮೂತ್ರಪಿಂಡ ವಿಭಾಗದ ಮುಖ್ಯಸ್ಥ ಡಾ.ಕುಶಾಲ್ ಡಿ.ಪಿ ಮಾತನಾಡಿ, ಮಾ. 24ರ ಬೆಳಗ್ಗೆ 6 ಗಂಟೆಗೆ ಆರಂಭವಾಗುವ ಸೈಕ್ಲಥಾನ್‌ಗೆ ಸಿದ್ಧಗಂಗಾ ಆಸ್ಪತ್ರೆಯಿಂದ ಟೌನ್‌ಹಾಲ್, ಅಶೋಕ ರಸ್ತೆ, ಕೋಟೆ ಆಂಜನೇಯ ದೇವಸ್ಥಾನ, ಅಮಾನಿಕೆರೆ, ಕೋತಿತೋಪು ರಸ್ತೆ, ಎಸ್‌ಎಸ್ ಸರ್ಕಲ್, ಎಸ್‌ಐಟಿ ರಸ್ತೆ, ಗಂಗೋತ್ರಿ ನಗರ ರಸ್ತೆ, ಸೋಮವೇಶ್ವರ, ಭದ್ರಮ್ಮ ವೃತ್ತದ ಮಾರ್ಗವಾಗಿ ಸಿದ್ಧಗಂಗಾ ಆಸ್ಪತ್ರೆಗೆ ವೈದ್ಯಕೀಯ ಮೇಲ್ವಿಚಾರಕ ಡಾ.ನಿರಂಜನಮೂರ್ತಿ ಹಾಗೂ ಸಿಇಓ ಡಾ.ಸಂಜೀವ್ ಕುಮಾರ್, ಸೈಕ್ಲಿಸ್ಟ್ ಹಾಗೂ ರೆಡಿಯಾಲಜಿಸ್ಟ್ ಡಾ.ಅಶ್ವಿನ್ ಇದ್ದರುತಲುಪಲಿದೆ ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ ೭೬೨೪೯೮೧೮೭೯ ಎಂದರು.