ಡಿವಿಜಿ ಅವರು ಕನ್ನಡ ಕಂಡ ಮಹಾನ್ ಸಾಹಿತಿ, ಚಿಂತಕ, ತತ್ವಜ್ಞಾನಿ ಇವರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಡಿವಿಜಿಯವರು ಸ್ವತ: ತಾವು ಸಂಕಷ್ಟದಲ್ಲಿದ್ದರೂ ತಮಗೆ ಒದಗಿಬಂದಂತಹ ಗೌರವ ಧನವನ್ನು ಸಮಾಜ ಸೇವೆಗಾಗಿ ನಿಸ್ವಾರ್ಥ ಭಾವದಿಂದ ನೀಡಿದ್ದು ಅವರ ವನಸುಮದೊಳೆನ್ನ ಮನವು ವಿಕಸಿಸುವಂತೆ ಎಂಬ ಅವರ ಕವನಕ್ಕೆ ಅವರ ಜೀವನವೇ ಸಾಕ್ಷಿಯಾಗಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಡಿ.ವಿ.ಗುಂಡಪ್ಪ ಅವರು ನುಡಿದಂತೆ ನಡೆದ ವ್ಯಕ್ತಿತ್ವವುಳ್ಳವರು ಹಾಗೂ ಅವರು ಮಾಡಿದ್ದೆಲ್ಲ ಪೂಜೆ ಬಂದಿದ್ದೆಲ್ಲ ಪ್ರಸಾದ ಎಂದು ತಮ್ಮನ್ನು ತಾವು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು, ನಾವು ಕೂಡ ಅದೇ ದಾರಿಯಲ್ಲಿ ಸಾಗಬೇಕು ಎಂಬುದನ್ನು ವಿಜಯವಿಠಲ ವಿದ್ಯಾಶಾಲೆಯ ಗೌರವ ಕಾರ್ಯದರ್ಶಿ ಸಿ.ಎ.ವಿಶ್ವನಾಥ ತಿಳಿಸಿದರು.ನಗರದ ವಿಜಯವಿಠಲ ವಿದ್ಯಾಶಾಲೆಯಲ್ಲಿ ಕನ್ನಡ ಸಾರಸ್ವತ ಲೋಕದ ಭೀಷ್ಮ ಹಾಗೂ ಕನ್ನಡದ ಆಧುನಿಕ ಸರ್ವಜ್ಞ ಎಂದು ಹೆಸರಾದಂತಹ ಡಿ.ವಿ.ಗುಂಡಪ್ಪನವರ ಹುಟ್ಟುಹಬ್ಬ ಆಚರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಡಿವಿಜಿ ಅವರು ಕನ್ನಡ ಕಂಡ ಮಹಾನ್ ಸಾಹಿತಿ, ಚಿಂತಕ, ತತ್ವಜ್ಞಾನಿ ಇವರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಡಿವಿಜಿಯವರು ಸ್ವತ: ತಾವು ಸಂಕಷ್ಟದಲ್ಲಿದ್ದರೂ ತಮಗೆ ಒದಗಿಬಂದಂತಹ ಗೌರವ ಧನವನ್ನು ಸಮಾಜ ಸೇವೆಗಾಗಿ ನಿಸ್ವಾರ್ಥ ಭಾವದಿಂದ ನೀಡಿದ್ದು ಅವರ ವನಸುಮದೊಳೆನ್ನ ಮನವು ವಿಕಸಿಸುವಂತೆ ಎಂಬ ಅವರ ಕವನಕ್ಕೆ ಅವರ ಜೀವನವೇ ಸಾಕ್ಷಿಯಾಗಿದೆ ಎಂದು ಅವರ ಜೀವನದ ಮೌಲ್ಯಯುತ ವ್ಯಕ್ತಿತ್ವವನ್ನು ನಿದರ್ಶನಗಳ ಮೂಲಕ ತಿಳಿಸಿದರು.ವಿಜಯವಿಠಲ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್. ಸತ್ಯಪ್ರಸಾದ್ ಮಾತನಾಡಿ, ಡಿ.ವಿ.ಜಿ ಅವರ ಮಂಕುತಿಮ್ಮನ ಕಗ್ಗ ಮಾತ್ರವಲ್ಲ ಅವರೇ ಬರೆದ ಬೇರೆ ಬೇರೆ ಕೃತಿಗಳು ಶ್ರೇಷ್ಠವಾಗಿದ್ದು ಅವರ ವ್ಯಕ್ತಿತ್ವ ವಿಕಸನವನ್ನು ತಿಳಿಸುವಂತಿವೆ ಎಂಬುದನ್ನು ತಿಳಿಸುತ್ತಾ ಅವರು ಬರೆದಂತಹ ಕೃತಿಗಳನ್ನು ಓದುವಂತೆ ಸಲಹೆ ನೀಡಿದರು.
ಡಿ.ವಿ.ಜಿ ಅವರು ತಮ್ಮ ಜೀವನದಲ್ಲಿ ಮಾಡಿದಂತಹ ಸಮಾಜ ಸೇವೆ ಹಾಗೂ ಅವರ ಆದರ್ಶ ಜೀವನವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.ವಿಜಯವಿಠಲ ವಿದ್ಯಾ ಶಾಲೆಯ ಪ್ರಾಂಶುಪಾಲೆ ಎಸ್.ಎ.ವೀಣಾ ಹಾಗೂ ಶಿಕ್ಷಕ, ಶಿಕ್ಷಕಿಯರು ಭಾಗವಹಿಸಿದ್ದರು.ಶಾರದಾ ವಿಲಾಸ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿನಿಯರ ಸಾಧನೆ
ಕನ್ನಡಪ್ರಭ ವಾರ್ತೆ ಮೈಸೂರುಶಾರದಾ ವಿಲಾಸ ಫಾರ್ಮಸಿ, ಮೈಸೂರು ವಿದ್ಯಾರ್ಥಿಗಳು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯ, ಬೆಂಗಳೂರು ನಡೆಸಿದ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿ ವಿಶ್ವವಿದ್ಯಾನಿಲಯದ ರ್‍ಯಾಂಕ್‌ಗಳನ್ನು ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.ಎ.ಫಾರ್ಮ್(ಫಾರ್ಮಕೋಗ್ನೋಸಿ) ವಿಭಾಗದಲ್ಲಿ ಎನ್. ನೆಹಾ ಅವರು 5ನೇ ರ್‍ಯಾಂಕ್ ಹಾಗೂ ಎಸ್.ಎ. ರಂಜನಿ ಅವರು 9ನೇ ರ್‍ಯಾಂಕ್ ಪಡೆದಿದ್ದಾರೆ. ಡಿ. ಫಾರ್ಮ್ ವಿಭಾಗದಲ್ಲಿ ವಿಯೋಲಾ ವಿನಿತಾ ಅವರು 4ನೇ ರ್‍ಯಾಂಕ್ ಹಾಗೂ ಎಂ.ಎನ್. ಅಮಿತ್ ಅವರು 5ನೇ ಫಾರ್ಮ್ ಡಿ ಪರೀಕ್ಷೆಯಲ್ಲಿ 6ನೇ ರ್‍ಯಾಂಕ್ ಗಳಿಸಿದ್ದಾರೆ. ಅದೇ ರೀತಿ ಬಿ. ಫಾರ್ಮ್ ವಿಭಾಗದ ಮೊದಲ ಸೆಮಿಸ್ಟರ್ ಪರೀಕ್ಷೆಯಲ್ಲಿ ಎಸ್. ಅಂಜು ಅವರು 10ನೇ ರ್‍ಯಾಂಕ್ ಪಡೆದಿದ್ದಾರೆ.ಈ ಸಾಧನೆಗಾಗಿ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.