ಸಾರಾಂಶ
ಜಾನುವಾರುಗಳ ಉತ್ತಮ ತಳಿ ಅನುಸರಿಸಿದಾಗ ಹೈನುಗಾರಿಕೆ ಲಾಭದಾಯಕವಾಗಲಿದೆ.
ಮಿಶ್ರ ತಳಿ ಕರುಗಳ ಪ್ರದರ್ಶನ
ಕನ್ನಡಪ್ರಭ ವಾರ್ತೆ ಹನುಮಸಾಗರಜಾನುವಾರುಗಳ ಉತ್ತಮ ತಳಿ ಅನುಸರಿಸಿದಾಗ ಹೈನುಗಾರಿಕೆ ಲಾಭದಾಯಕವಾಗಲಿದೆ ಎಂದು ಹಿರಿಯ ಪಶುವೈದ್ಯಾಧಿಕಾರಿ ಡಾ. ಸಿದ್ದಲಿಂಗಯ್ಯ ಶಂಕೀನ್ ಹೇಳಿದರು.
ಸಮೀಪದ ಹನುಮನಾಳ ಪಶುಆಸ್ಪತ್ರೆ ವ್ಯಾಪ್ತಿಯ ಕೋನಾಪುರ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ನಡೆದ ಮಿಶ್ರ ತಳಿ ಕರುಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದಿನ ದಿನಮಾನಗಳಲ್ಲಿ ನಿರುದ್ಯೋಗ ಯುವಕ, ಯುವತಿಯರಿಗೆ ಹೈನುಗಾರಿಕೆ ಉದ್ಯೋಗ ಲಾಭದಾಯಕವಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ರೈತರು ಆಧುನಿಕ ಪಶುಪಾಲನಾ ಚಟುವಟಿಕೆಗಳನ್ನು ಉಳಿಸಿಕೊಂಡಾಗ ಮಾತ್ರ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ. ಕರುಗಳಿಗೆ ಮತ್ತು ಗರ್ಭ ಧರಿಸಿದ ಆಕಳುಗಳಿಗೆ ಅಗತ್ಯತೆಗೆ ತಕ್ಕಂತೆ ಪೋಷಕಾಂಶ ಆಹಾರ ನೀಡಲಾಗುತ್ತದೆ.ಇದೇ ವೇಳೆ ಉತ್ತಮ ಕರುಗಳಿಗೆ ಬಹುಮಾನ ವಿತರಿಸಲಾಯಿತು. ರೈತರಿಗೆ ಜಂತು ನಿವಾರಕ ಔಷಧ ಮತ್ತು ಲಿವರ್ ಟಾನಿಕ್ ವಿತರಿಸಲಾಯಿತು.
ಕೃಷಿ ಯೋಜನೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು.ತಾಲೂಕು ಮುಖ್ಯ ಪಶುವೈದ್ಯಾಧಿಕಾರಿ ಡಾ. ಆನಂದ, ಪಶು ವೈದ್ಯ ಡಾ. ಸಂತೋಷ, ಗ್ರಾಪಂ ಅಧ್ಯಕ್ಷ ದಾನೇಶ ಸಣ್ಣವಾಲಿಕಾರ, ಸಂಗಮೇಶ, ಸಿಬ್ಬಂದಿಗಳಾದ ಯಮನಪ್ಪ ತುಂಬಿದ, ನೀಲಪ್ಪ ತುಂಬಿದ, ಯಲ್ಲಪ್ಪ, ಸಿದ್ದಲಿಂಗಪ್ಪ, ಮಣಿಶಂಕರ, ಕಳಕಪ್ಪ, ಇರ್ಫಾನ, ಪಶುಸಖಿ ಸರೋಜಾ, ದೇವಮ್ಮ, ಸಂಗಮೇಶ ಗಾಣದ ಗ್ರಾಮಸ್ಥರು ಇದ್ದರು.