ಬಿಳಿಯೂರು ಅಣೆಕಟ್ಟು ಪ್ರಭಾವ: ಉಪ್ಪಿನಂಗಡಿ ‘ಜಲಸಮೃದ್ಧ’ನೇತ್ರಾವತಿ ನದಿಗೆ ಬಿಳಿಯೂರು ಎಂಬಲ್ಲಿ ನಿರ್ಮಿಸಲಾಗಿರುವ ಅಣೆಕಟ್ಟಿನಿಂದಾಗಿ ನದಿಯ ಮೇಲ್ಭಾಗದಲ್ಲಿ ತುಂಬಿರುವ ಹಿನ್ನೀರು ಪರಿಸರದಲ್ಲಿ ಅಂತರ್ಜಲ ವೃದ್ಧಿಸಲು ಕಾರಣವಾಗಿದೆ. ಕೊಳವೆಬಾವಿ, ಕೆರೆ ಬಾವಿಗಳಲ್ಲಿ ನೀರಿನ ಸಂಗ್ರಹದಲ್ಲಿ ವೃದ್ಧಿ ಕಾಣಿಸಿದ್ದು, ಸುತ್ತಮುತ್ತಲ ನಾಗರಿಕರಿಗೆ ಸಂತಸ ಮೂಡಿದೆ. ಆದರೆ ಮೀನು ಬೇಟೆಯಿಂದ ನೀರು ಕಲುಷಿತವಾಗುವ ಆತಂಕ ಮೂಡಿದೆ.