ಕಾಂಗ್ರೆಸ್‌ಗೆ ದಲಿತ ಸಮುದಾಯವೇ ದೊಡ್ಡ ಶಕ್ತಿ : ಧರ್ಮಸೇನಾ

| Published : Oct 16 2025, 02:00 AM IST

ಕಾಂಗ್ರೆಸ್‌ಗೆ ದಲಿತ ಸಮುದಾಯವೇ ದೊಡ್ಡ ಶಕ್ತಿ : ಧರ್ಮಸೇನಾ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಭಾರತದಲ್ಲಿ ದಲಿತ ಸಮುದಾಯವೇ ಕಾಂಗ್ರೆಸ್‌ಗೆ ದೊಡ್ಡಶಕ್ತಿ. ಜಗತ್ತಿನಲ್ಲಿ ಸೂರ್ಯ ಚಂದ್ರ ಹಾಗೂ ದಲಿತ ಸಮಾಜ ಇರುವವರೆಗೆ ಕಾಂಗ್ರೆಸ್ ಪಕ್ಷವನ್ನು ಅಲುಗಾಡಿಸಲಾಗದು. ಒಂದು ವೇಳೆ ಪರಿಶಿಷ್ಟ ಸಮಾಜ ಇಲ್ಲವಾದರೆ ಪಕ್ಷ ನಶಿಸಲಿದೆ ಎಂದು ಕೆಪಿಸಿಸಿ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಆರ್.ಧರ್ಮಸೇನಾ ಹೇಳಿದರು.

- ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಎಸ್ಸಿ ಘಟಕದ ಕಾರ್ಯಕರ್ತರ ಸಭೆ,

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಭಾರತದಲ್ಲಿ ದಲಿತ ಸಮುದಾಯವೇ ಕಾಂಗ್ರೆಸ್‌ಗೆ ದೊಡ್ಡಶಕ್ತಿ. ಜಗತ್ತಿನಲ್ಲಿ ಸೂರ್ಯ ಚಂದ್ರ ಹಾಗೂ ದಲಿತ ಸಮಾಜ ಇರುವವರೆಗೆ ಕಾಂಗ್ರೆಸ್ ಪಕ್ಷವನ್ನು ಅಲುಗಾಡಿಸಲಾಗದು. ಒಂದು ವೇಳೆ ಪರಿಶಿಷ್ಟ ಸಮಾಜ ಇಲ್ಲವಾದರೆ ಪಕ್ಷ ನಶಿಸಲಿದೆ ಎಂದು ಕೆಪಿಸಿಸಿ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಆರ್.ಧರ್ಮಸೇನಾ ಹೇಳಿದರು.ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಎಸ್ಸಿ ಘಟಕದಿಂದ ಬುಧವಾರ ಆಯೋಜಿಸಿದ್ಧ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ವಿರೋಧ ಪಕ್ಷಗಳ ಮಾತು ಹಾಗೂ ಮಂಕುಬೂದಿಗೆ ಬೆರಗಾಗದೇ ಪಕ್ಷ ಸಂಘಟನೆಯಲ್ಲಿ ಕಾರ್ಯಕರ್ತರು ತೊಡಗಿಸಿಕೊಳ್ಳಬೇಕು ಎಂದರು.ದೇಶದಲ್ಲಿ ಅತಿ ಹೆಚ್ಚು ದಲಿತ ಸಮಾಜ ದೌರ್ಜನ್ಯ, ಶೋಷಣೆಗೆ ಒಳಗಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಶ್ನಿಸುವ ಗುಣ ಬೆಳೆಸಿಕೊಂಡಾಗ ಬಹುಸಂಖ್ಯಾತ ದಲಿತರು ಮುಂಚೂಣಿಗೆ ಬರಲು ಸಾಧ್ಯ. ಆ ನಿಟ್ಟಿನಲ್ಲಿ ಮುಂದಿನ ಚುನಾವಣೆಗಳಲ್ಲಿ ಜನಾಂಗ ಕಾಂಗ್ರೆಸ್‌ನತ್ತ ಒಲವು ಹೊಂದಬೇಕು ಎಂದು ಹೇಳಿದರು.ರಾಷ್ಟ್ರದ ಪ್ರಥಮ ಪ್ರಜೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಅವಮಾನಿಸಿರುವ ವಕೀಲನನ್ನು ಬಿಜೆಪಿ ಪರೋಕ್ಷವಾಗಿ ಬೆಂಬಲಿಸುತ್ತಿದೆ. ಅದೇ ರಾಜ್ಯದಲ್ಲಿ ಉಪ ಮುಖ್ಯಮಂತ್ರಿಗಳು ಶಾಸಕರಿಗೆ ಕರಿಟೋಪಿ ಎಂದಾಕ್ಷಣ ರಾಷ್ಟ್ರಭಕ್ತಿ ಉಕ್ಕಿ ಹರಿ ಯುತ್ತಿದೆ. ಆದರೆ ನ್ಯಾಯಾಧೀಶರ ವಿಚಾರದಲ್ಲಿ ಮಾತನಾಡುವುದಿಲ್ಲ ಯಾಕೆ ಎಂದು ಪ್ರಶ್ನಿಸಿದರು. ದೇಶದಲ್ಲಿ ಬಿಜೆಪಿ, ಅಧಿಕಾರಕ್ಕಾಗಿ ಇವಿಎಂ ಮೂಲಕ ಮತಗಳ್ಳತನ ಮಾಡಿದೆ. ಈ ವಿರುದ್ಧ ರಾಹುಲ್ ಗಾಂಧಿ ಬೃಹತ್‌ ಮಟ್ಟದಲ್ಲಿ ಚಳುವಳಿ ರೂಪಿಸಿ ಸತ್ಯಾ ಸತ್ಯತೆ ಜನರ ಮುಂದಿಡಲು ಪ್ರಯತ್ನಿಸುತ್ತಿದ್ದಾರೆ. ಮತಗಳ್ಳನದಲ್ಲಿ ಚುನಾವಣೆ ಆಯೋಗ, ಅಧಿಕಾರಿ ವೃಂದ ಹಾಗೂ ರಾಜಕೀಯ ಕುತಂತ್ರ ನಡೆದಿದ್ದು ಜನತೆ ಧೈರ್ಯದಿಂದ ರಾಹುಲ್‌ಗಾಂಧಿ ಕೈ ಬಲಪಡಿಸಬೇಕು ಎಂದರು.ಪರಿಶಿಷ್ಟ ಒಗ್ಗೂಡಿಸಲು ಹಾಗೂ ಪಕ್ಷ ಸಂಘಟಿಸಲು ಜಿಲ್ಲಾ ಮಟ್ಟದಲ್ಲಿ ಕಾರ್ಯಕರ್ತರು, ಮುಖಂಡರು ಪ್ರತಿ ತಾಲೂಕಿನಲ್ಲಿ ಮತಗಳ್ಳತನದ ಸಹಿ ಸಂಗ್ರಹ ಅಭಿಯಾನ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಆ ಸಹಿ ಸಂಗ್ರಹ ದೆಹಲಿಗೆ ರವಾನಿಸಲಾಗುವುದು ಎಂದು ತಿಳಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಮಾತನಾಡಿ, ಅಂಬೇಡ್ಕರ್ ಸಂವಿಧಾನದಡಿ ಕಾಂಗ್ರೆ ಸ್ ಪಕ್ಷ ಕಟಿಬದ್ಧ ವಾಗುವ ಜೊತೆಗೆ ಗೌರವಿಸುವ ಕೆಲಸ ಮಾಡಿದೆ. ಹಿಂದಿನ ಯುಪಿಎ ಸರ್ಕಾರದಲ್ಲಿ ನಿರುದ್ಯೋಗರಿಗೆ ಉದ್ಯೋಗ, ಆರೋಗ್ಯ ಸವಲತ್ತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ ಪರಿಣಾಮ ಇಂದು ರಾಷ್ಟ್ರ ಪ್ರಗತಿ ಹೊಂದಲು ಸಾಧ್ಯ ಎಂದು ಹೇಳಿದರು.

ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಮೂಲ ಕಾರಣವೇ ದಲಿತ ಸಮುದಾಯ. ಹೀಗಾಗಿ ಆ ಸಮುದಾಯಕ್ಕೆ ಸಮಾನತೆ, ಅವಕಾಶ ಹಾಗೂ ಅಧಿಕಾರ ನೀಡಬೇಕು. ಆಗ ಮಾತ್ರ ಕಾರ್ಯಕರ್ತರು ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಉತ್ಸಾಹಕರಾಗಿ ಕೆಲಸ ಮಾಡುತ್ತಾರೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಎಂ.ಮಲ್ಲೇಶ್ ವಹಿಸಿದ್ದರು. ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಮಂಜೇಗೌಡ, ಕೆಪಿಸಿಸಿ ವಕ್ತಾರ ರವೀಶ್ ಕ್ಯಾತನಬೀಡು, ಮುಖಂಡರಾದ ತನೋಜ್‌ನಾಯ್ಡು, ಜಿಲ್ಲಾ ಕಾರ್ಯದರ್ಶಿ ಹಿರೇಮಗಳೂರು ರಾಮಚಂದ್ರ, ಲಕ್ಷ್ಮಣ್, ವಿವಿಧ ತಾಲುಕು, ಹೋಬಳಿ ಅಧ್ಯಕ್ಷರು ಉಪಸ್ಥಿತರಿದ್ದರು. 15 ಕೆಸಿಕೆಎಂ 1ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಎಸ್ಸಿ ಘಟಕದಿಂದ ಬುಧವಾರ ಆಯೋಜಿಸಿದ್ಧ ಕಾರ್ಯಕರ್ತರ ಸಭೆಯಲ್ಲಿ ಕೆಪಿಸಿಸಿ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಆರ್.ಧರ್ಮಸೇನಾ ಮಾತನಾಡಿದರು.