ಸಾರಾಂಶ
ಡಾ. ಅಂಬೇಡ್ಕರ್ ಪ್ರತಿಮೆಯಂತೆ ಡಾ. ಬಾಬು ಜಗಜೀವನರಾಮ್ ಅವರ ಕಂಚಿನ ಪ್ರತಿಮೆ ನಿರ್ಮಿಸಬೇಕು ಎಂದು ದಲಿತ ಮುಖಂಡರು ಒತ್ತಾಯಿಸಿದರು.
ದೇವನಹಳ್ಳಿ: ಮಿನಿ ವಿಧಾನ ಸೌಧ ಮುಂಭಾಗದಲ್ಲಿರುವ ಡಾ. ಅಂಬೇಡ್ಕರ್ ಪ್ರತಿಮೆಯಂತೆ ಡಾ. ಬಾಬು ಜಗಜೀವನರಾಮ್ ಅವರ ಕಂಚಿನ ಪ್ರತಿಮೆ ನಿರ್ಮಿಸಬೇಕು ಎಂದು ದಲಿತ ಮುಖಂಡರು ತಾಲೂಕು ಆಡಳಿತಕ್ಕೆ ಹಾಗೂ ಸರ್ಕಾರಕ್ಕೆ ಒತ್ತಾಯ ಮಾಡಿದರು.
ತಾಲೂಕು ಕಚೇರಿಯಲ್ಲಿ ನಡೆದ ಬಾಬೂಜಿರವರ ಜಯಂತಿ ಸಮಾರಂಭದಲ್ಲಿ ಮಾದಿಗ ದಂಡೋರ ರಾಜ್ಯ ಮುಖಂಡ ಬುಳ್ಳಹಳ್ಳಿ ರಾಜಪ್ಪ, ಲೋಕೇಶ್, ಜಿ. ಮಾರಪ್ಪ ಮಾಜಿ ಪುರಸಭಾಧ್ಯಕ್ಷ ಡಾ.ಎಂ. ಮೂರ್ತಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿದರು. ತಾಲೂಕು ಪಂಚಾಯಿತಿ ಇಒ ಶ್ರೀನಾಥಗೌಡ ಉಪಸ್ಥಿತರಿದ್ದರುಜೆಡಿಯು ತಾಲೂಕು ಅಧ್ಯಕ್ಷ ಕುಮಾರ್ ಮಾತನಾಡಿ, ನೂತನವಾಗಿ ಕಂಚಿನ ಪ್ರತಿಮೆ ನಿಲ್ಲಿಸುವುದಾದರೆ ತಾವು ವೈಯುಕ್ತಿಕವಾಗಿ ಒಂದು ಲಕ್ಷ ರು. ನೀಡುವುದಾಗಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಬಾಲಕೃಷ್ಣ ಡಾ. ಬಾಬೂಜಿರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.ಫೋಟೋ: ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಬಾಬೂಜಿರವರ ಜಯಂತಿ ಸಮಾರಂಭ ನಡೆಯಿತು. ಮಾದಿಗ ದಂಡೋರ ರಾಜ್ಯ ಮುಖಂಡ ಬುಳ್ಳಹಳ್ಳಿ ರಾಜಪ್ಪ, ಲೋಕೇಶ್, ಜಿ. ಮಾರಪ್ಪ ಮಾಜಿ ಪುರಸಭಾಧ್ಯಕ್ಷ ಡಾ.ಎಂ. ಮೂರ್ತಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕಾರಹಳ್ಳಿ ಶ್ರೀನಿವಾಸ್ ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))