ಸಾರಾಂಶ
ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಿತರಕ್ಷಣಾ ಸಮಿತಿಯ ಮುಂದುವರಿದ ಸಭೆಯನ್ನು ಏರ್ಪಡಿಸಲಾಗಿತ್ತು,
ಕನ್ನಡಪ್ರಭ ವಾರ್ತೆ ಕುಣಿಗಲ್
ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಿತರಕ್ಷಣಾ ಸಮಿತಿಯ ಮುಂದುವರಿದ ಸಭೆಯನ್ನು ಏರ್ಪಡಿಸಲಾಗಿತ್ತು,ಸಭೆಗೆ ದಲಿತರ ಜೊತೆಗೆ ಸವರ್ಣೀಯರು ಭಾಗವಹಿಸಿದ್ದು, ದಲಿತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸವರ್ಣೀಯರನ್ನು ಕರೆದಿದ್ದಾರೆ ಎಂದು ಪ್ರತಿಭಟನೆಗೆ ಮುಂದಾದರು.
ದಲಿತರ ಸಮಸ್ಯೆಗಳನ್ನು ಬಗೆ ಹರಿಸುವಲ್ಲಿ ತಾಲೂಕು ಆಡಳಿತ ವಿಫಲ ರಾಗಿರುವುದಲ್ಲದೆ ದಲಿತರ ಜಮೀನು ಮತ್ತು ರಸ್ತೆ ವಿವಾದಗಳಲ್ಲಿ ದಲಿತರ ವಿರುದ್ಧವಾಗಿ ನಿಂತಿರುವ ಸವರ್ಣೀಯ ಮುಖಂಡರನ್ನು ಸಭೆಗೆ ಅಹ್ವಾನಿಸಿ ದಲಿತರ ಮೇಲೆ ಸವರ್ಣೀಯರನ್ನು ಎತ್ತಿ ಕಟ್ಟುತ್ತಿದ್ದಾರೆಂದು ಆರೋಪಿಸಿ, ದಲಿತ ಮುಖಂಡರಾದ ಶಿವಶಂಕರ್, ಚಿಕ್ಕಣ್ಣ, ಭಕ್ತರಹಳ್ಳಿ ಕುಮಾರ್, ಎಸ್. ಟಿ. ರಾಜು, ರಾಮಲಿಂಗಯ್ಯ, ತೀವ್ರ ಅಕ್ರೋಶ ವ್ಯಕ್ತಪಡಿಸಿದರು.ತಹಸೀಲ್ದಾರ್ ಪ್ರತಿಭಟನಾಕಾರರ ಸಮಸ್ಯೆ ಆಲಿಸಲು ಬಂದಾಗ ಪ್ರತಿಭಟನಾಕಾರರು ವಿರೋಧ ವ್ಯಕ್ತಪಡಿಸಿ, ಸಭಾ ನಡವಳಿಯಲ್ಲಿ ಇನ್ನೂರಕ್ಕೂ ಹೆಚ್ಚು ಸಮಸ್ಯೆಗಳಿವೆ. ವರ್ಷಗಳೇ ಕಳೆದರೂ ಸಭೆ ನಡೆಸಿಲ್ಲ,ಬೆಣಚಕಲ್ಲು, ಚಾಕೇನಹಳ್ಳಿ, ಹೆಗ್ಗಡತಿಹಳ್ಳಿ, ಗ್ರಾಮಗಳಲ್ಲಿ ದಲಿತರು ತೀವ್ರ ಸಮಸ್ಯೆ ಎದುರಿಸುತ್ತಿದ್ದರೂ ಬಗೆಹರಿಸದಿರುವುದು ನಿಮ್ಮ ದಲಿತ ವಿರೋಧಿ ನೀತಿಗೆ ಕಾರಣವಾಗಿದೆ, ಸಮಸ್ಯೆಗಳನ್ನು ಬಗೆಹರಿಸದೆ ಆ ಗ್ರಾಮದ ಸವರ್ಣೀಯರನ್ನು ಸಭೆಗೆ ಕರೆದಿಸಿದ್ದೀರಿ, ನಾವು ನಿಮ್ಮ ಸಭೆಗೆ ಭಾಗವಹಿಸುವುದಿಲ್ಲ ಎಂದು ಘೋಷಣೆಗಳನ್ನು ಕೂಗಿ ವಾಪಸ್ ಕಳುಹಿಸಿದರು.
ತಹಸೀಲ್ದಾರ್ ರವರ ವಿರುದ್ಧ ದಲಿತ ಮುಖಂಡರು ಧಿಕ್ಕಾರ ಕೂಗುತ್ತಿದ್ದಂತೆ ಸಭೆಗೆ ಆಗಮಿಸಿದ್ದ ಸವರ್ಣೀಯರು ಮತ್ತು ದಲಿತರ ಮಧ್ಯೆ ಮಾತಿನ ಚಕಮಕಿ ಉಂಟಾಯಿತು. ಮಧ್ಯ ಪ್ರವೇಶಿಸಿದ ಇನ್ಸ್‌ಪೆಕ್ಟರ್ ನವೀನ್ ಗೌಡ ಸವರ್ಣೀಯ ಮುಖಂಡರನ್ನು ಸಭೆಯಿಂದ ಹೊರ ಕಳಿಸಿದರು.---------ಪೋಟೋ ಇದೆ : 13 ಕೆಜಿಎಲ್ 1 : ತಾಲೂಕು ಪಂಚಾಯ್ತಿ ಮುಂದೆ ತಹಸೀಲ್ದಾರ್ ವಿರುದ್ದ ಪ್ರತಿಭಟನೆ ನಡೆಸಿದ ದಲಿತರು.