ಸಾರಾಂಶ
ಕನ್ನಡಪ್ರಭ ವಾರ್ತೆ ಸುಳ್ಯಭಾರಿ ಮಳೆಯ ಪರಿಣಾಮ ಕೊಯನಾಡು ಶಾಲೆಯ ಹಿಂಬದಿಯ ಬರೆ ಜರಿದು ಶಾಲೆಯ ಮೇಲೆ ಬೀಳುತ್ತಿದ್ದು, ಮಳೆಗಾಲ ಮುಗಿಯುವ ತನಕ ಶಾಲೆಯನ್ನು ಮುಚ್ಚಲು ಆದೇಶಿಸಲಾಗಿದೆ. ಕೊಯನಾಡು ಶಾಲೆ ಮಕ್ಕಳಿಗೆ ಪಕ್ಕದ ಸಂಪಾಜೆ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಕೊಡಿಸಲು ಇಲಾಖೆ ನಿರ್ಧರಿಸಿರುವುದಾಗಿ ತಿಳಿದುಬಂದಿದೆ.ಕೊಯನಾಡು ಶಾಲೆಯ ಹಿಂಬದಿ ದೊಡ್ಡ ಗಾತ್ರದ ಬರೆ ಇದ್ದು, ಕಳೆದ ವರ್ಷವೇ ಇದು ಜರಿದು ಶಾಲೆಯ ಮೇಲೆ ಬಿದ್ದಿತ್ತು. ಈ ಬಾರಿ ಮಳೆಗಾಲದ ಆರಂಭದಲ್ಲೇ ಬರೆ ಜರಿದು ಶಾಲೆಯ ಮೇಲೆ ಬಿದ್ದಿತ್ತು. ಇದೀಗ ಭಾರಿ ಮಳೆಗೆ ಮತ್ತಷ್ಟು ಜರಿದಿದ್ದು, ಅಲ್ಲಿ ಮಕ್ಕಳು ಕುಳಿತುಕೊಳ್ಳುವುದು ಅಪಾಯವೆಂದರಿತ ಇಲಾಖೆ, ಮುಂದಿನ ಮೂರು ತಿಂಗಳು ಶಾಲೆ ಮುಚ್ಚಲು ನಿರ್ಧರಿಸಿದೆ. ಅಲ್ಲಿಯ ವರೆಗೆ ಕೊಯನಾಡು ಶಾಲೆಯಲ್ಲಿ ಇರುವ ಮಕ್ಕಳಿಗೆ ಪಕ್ಕದ ಸಂಪಾಜೆ ಶಾಲೆಯಲ್ಲಿ ಶಿಕ್ಷಣಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.-------ರಾಷ್ಟ್ರೀಯ ಹೆದ್ದಾರಿಯ ಮದೆನಾಡು ಬಳಿ ರಸ್ತೆಯಲ್ಲಿ ಬಿರುಕುಸುಳ್ಯ: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಡಿಕೇರಿಯ ಮದೆನಾಡಿನಲ್ಲಿ ಮುಖ್ಯರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ರಸ್ತೆ ಬದಿಯ ಗುಡ್ಡ ಕುಸಿಯುವ ಭೀತಿ ಎದುರಾಗಿದೆ.ಕಳೆದ ಎರಡು ಮೂರು ದಿನಗಳಿಂದ ಕೊಡಗು ಭಾಗದಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಮದೆನಾಡಿನ ಎರಡನೇ ಮೊಣ್ಣಂಗೇರಿ ಬಳಿ ಹೆದ್ದಾರಿಯ ಒಂದು ಬದಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ವಾಹನ ಸವಾರರು ಎಚ್ಚರ ವಹಿಸುವಂತೆ ಸೂಚಿಸಲಾಗಿದೆ.----ರಾಜಾರಾಂಪುರ: ಬೃಹತ್ ಹೊಂಡ ಮುಚ್ಚಿದ ಗ್ರಾ.ಪಂ.ಸುಳ್ಯ: ಭಾರಿ ಮಳೆಯ ಮಧ್ಯೆ ಸಂಪಾಜೆ ಗ್ರಾಮದ ರಾಜಾರಾಂಪುರ ಕಾಲನಿಯ ಒಳಗೆ ಬೃಹತ್ ಗಾತ್ರದ ಹೊಂಡ ನಿರ್ಮಾಣವಾಗಿ ಆತಂಕ ಸೃಷ್ಟಿಯಾಗಿದ್ದು, ಸಂಪಾಜೆ ಪಂಚಾಯಿತಿ ಇದನ್ನು ಮುಚ್ಚುವ ಕಾರ್ಯ ಮಾಡಿದೆ. ಹೊಂಡದಿಂದ ಭೂಮಿ ಒಳಗೆ ನೀರು ಹರಿಯುವ ಶಬ್ದ ಕೇಳಿ ಬರುತ್ತಿದ್ದು, ಪಕ್ಕದಲ್ಲೇ ಇರುವ ಬಾಳಪ್ಪ ಎಂಬವರ ಮನೆ ಅಪಾಯದಲ್ಲಿತ್ತು.