ವಚನ ಸಾಹಿತ್ಯಕ್ಕೆ ಅಡಿಪಾಯ ಇಟ್ಟವರು ದಾಸಿಮಯ್ಯ

| Published : Feb 15 2024, 01:15 AM IST

ಸಾರಾಂಶ

ನನಗೆ ಕೊಳ್ಳೇಗಾಲ, ಚಾಮರಾಜನಗರ ಹೊಸತೇನೂ ಅಲ್ಲ, ಕಂದಾಯ ಸಚಿವನಾಗಿದ್ದ ವೇಳೆ ಹಾಗೂ ಹಲವು ಬಾರಿ ಇಲ್ಲಿಗೆ ಭೇಟಿ ನೀಡಿದ್ದೆನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲನನಗೆ ಕೊಳ್ಳೇಗಾಲ, ಚಾಮರಾಜನಗರ ಹೊಸತೇನೂ ಅಲ್ಲ, ಕಂದಾಯ ಸಚಿವನಾಗಿದ್ದ ವೇಳೆ ಹಾಗೂ ಹಲವು ಬಾರಿ ಇಲ್ಲಿಗೆ ಭೇಟಿ ನೀಡಿದ್ದೆನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.

ಪಟ್ಟಣದ ದೇವಲ ಮಹರ್ಷಿ ಮಹಾದ್ವಾರದಲ್ಲಿ ಅಯೋಜಿಸಿದ್ದ ದೇವಲ ಮಹರ್ಷಿ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿ, ವಚನ ಸಾಹಿತ್ಯಕ್ಕೆ 11ನೇ ಶತಮಾನದಲ್ಲಿ ವಚನ ಸಾಹಿತ್ಯ ಮೂಲ ಹಾಕಿಕೊಟ್ಟವರೇ ದೇವರ ದಾಸಿಮಯ್ಯ , ಬಳಿಕ 12ನೇ ಶತಮಾನದಲ್ಲಿ ವಚನಗಳ ಸಾಹಿತ್ಯಕ್ಕೆ ಮಹತ್ವ ಬಂತು. ದೇವರ ದಾಸಿಮಯ್ಯ ಅವರು ಪುಣ್ಯ ಪುರುಷರು, ಆದ್ಯ ವಚನಕಾರರು, ಅವರು ತಪಸ್ವಿ ಪುರುಷರು, ಇಂದು ಅವರ ಪುತ್ಥಳಿ ಅನಾವರಣಗೊಂಡಿದೆ. ಆ ಮೂಲಕ ಅವರ ಚಿಂತನೆಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕಿದೆ ಎಂದರು.

ಪ್ರತಿಯೊಬ್ಬ ಮಾನವನು ಸಂಸ್ಕಾರವಂತ ಜೀವನ ಸಾಗಿಸಿ ಎಂಬ ಸಂದೇಶವನ್ನು ದೇವರ ದಾಸಿಮಯ್ಯ ಸಾರಿದ್ದಾರೆ. ಇಂತಹ ಮಹಾ ಪುರುಷನನ್ನು ಪಡೆದ ದೇವಾಂಗ ಸಮಾಜವೇ ಧನ್ಯ ಎಂದರು. ಶರಣರ ವಚನ ಸಾಹಿತ್ಯ ಓದಿ ಅರಿಯಬೇಕು, ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ದೇವಾಂಗ ಸಮಾಜ ಹೆಚ್ಚು ರಾಜಕೀಯ ಪ್ರಾತಿನಿಧ್ಯ ಪಡೆದುಕೊಳ್ಳಬೇಕು, ಈ ನಿಟ್ಟಿನಲ್ಲಿ ಚಿಂತನೆ ಮಾಡಬೇಕಿದೆ. ಗಿರೀಶ್ ಬಾಬು ಎನ್ ಮಹೇಶ್‌ಗೆ ಬಲಗೈಯಾಗಿ ಕೆಲಸ ಮಾಡಿ ಈ ಭಾಗದ ಸಮಸ್ಯೆ ಅರಿತು ಮುನ್ನಡೆದಿದ್ದಾರೆ. ಇವರಿಂದ ಹೆಚ್ಚು ಹೆಚ್ಚು ಸಮಾಜ ಮುಖಿ ಸೇವೆ ಜರುಗಲಿ, ಅವರ ಕೋರಿಕೆ ಮೇರೆಗೆ ಇಂದಿನ ಕಾರ್ಯಕ್ರಮಕ್ಕೆ ಆಗಮಿಸಿರುವೆ. ಶೋಷಿತ ಜನಾಂಗದ ಪರವಾಗಿ ಧ್ವನಿ ಎತ್ತಿ ಮಾತನಾಡುವ ಶಕ್ತಿ ಎನ್. ಮಹೇಶ್ ಅವರಿಗಿದೆ ಎಂದರು.

ನಾನು ಬಸವ ತತ್ವ ಪಾಲಿಸುವ ವ್ಯಕ್ತಿ,. ಈ ಹಿಂದೆ ಸ್ಪೀಕರ್, ಕಂದಾಯ ಸಚಿವರಿದ್ದಾಗಲೂ ಜಿಲ್ಲೆಗೆ ಬಂದಿದ್ದೆ, ಸಿಎಂ ಆಗಿದ್ದಾಗಲೂ ಸಹಾ ಜಿಲ್ಲೆಯ ಮಹದೇಶ್ವರ ಬೆಟ್ಟದಲ್ಲಿ ಪ್ರಾಧಿಕಾರ ರಚನೆ ವೇಳೆ ಆಗಮಿಸಿದ್ದೆ. ದೇವರ ದಾಸಿಮಯ್ಯ ಅವರು ದೇಹಕ್ಕೆ ರಕ್ಷಣೆ ನೀಡುವ ವೃತ್ತಿಯನ್ನು ಕರತಗಮಾಡಿಕೊಂಡವರು. ನೇಕಾರ ಸಮಾಜ, ನೇಕಾರ ಬಂಧುಗಳು ಗೌರವಕ್ಕೆ ಮೂಲ ಅಡಿಪಾಯ ಹಾಕಿದವರು ದಾಸಿಮಯ್ಯ, ಹಾಗಾಗಿ ಅವರ ತತ್ವಾದರ್ಶಗಳಡಿ ನಾವೆಲ್ಲರೂ ಸಾಗಬೇಕಿದೆ ಎಂದರು.

ಈ ವೇಳೆ ಡಾ. ಶ್ರೀ ಶ್ರೀ ಈಶ್ವರಾನಂದಸ್ವಾಮಿಗಳು, ಪೂಲಾ ಕುಮಾರಸ್ವಾಮಿಗಳು, ಪರಸಂ ಮಹೇಶ್ ಸ್ವಾಮಿಗಳು, ಮೇಡಂ ಮಲ್ಲಿಕಾರ್ಜುನಸ್ವಾಮಿಗಳು, ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ಮಾಜಿ ಶಾಸಕರುಗಳಾದ ಹರ್ಷವರ್ಧನ್, ಎಸ್.ಬಾಲರಾಜು, ವಿ.ಪ. ಮಾಜಿ ಸದಸ್ಯ ಎಂ.ಡಿ. ಲಕ್ಷ್ಮೀನಾರಾಯಣ್, ದೇವರ ದಾಸಿಮಯ್ಯ ಪುತ್ಥಳಿ ನಿರ್ಮಾತೃ ಎನ್. ಗಿರೀಶ್ ಬಾಬು, ನಗರಸಭೆ ಸದಸ್ಯರ ಎ ಪಿ ಶಂಕರ್, ಪವಿತ್ರ ರಮೇಶ್, ಇಸ್ರೋ ವಿಜ್ಞಾನಿ ರೂಪ ಮತ್ತಿತರರಿದ್ದರು. ಏಪ್ರಿಲ್ 13ರಂದು ನಿಮ್ಮ ನಿಮ್ಮ ಮನೆ ಊರುಗಳಲ್ಲಿ ದಾಸಿಮಯ್ಯ ಅವರನ್ನು ಸ್ಮರಿಸಿ, ಅವರ ವಚನ ಪಠಿಸಿ, ಸಾಮಾಜಿಕ ಕಳಕಳಿಯುಳ್ಳ ಗಿರೀಶ್ ಬಾಬು ಈ ಪ್ರತಿಮೆ ನಿರ್ಮಿಸಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮೂಲಕ ಪುತ್ಥಳಿ ಉದ್ಘಾಟಿಸಿದ್ದು ಇತಿಹಾಸದ ಪುಟ ಸೇರಲಿದೆ . ಗಿರೀಶ್ ಸಾಮಾಜಿಕ ಸೇವೆ ನಿರಂತರವಾಗಿ ಸಾಗಲಿ. ದೇವರ ದಾಸಿಮಯ್ಯ ಅವರು ತಮ್ಮ 176 ವಚನಗಳಲ್ಲಿ ಬದುಕಿಗೆ ಬೇಕಾದ ಎಲ್ಲವನ್ನು ವಿವರಿಸಿದ್ದಾರೆ. ದಾಸಿಮಯ್ಯ ಅವರ ಚಿಂತನೆಗಳಡಿ ಯುವ ಪೀಳಿಗೆ ಸಾಗಬೇಕಿದೆ.

ಡಾ. ಈಶ್ವರಾನಂದ ಸ್ವಾಮಿಜಿಗಳು ಮದ್ದನೂರು ಸಂಸ್ಥಾನ ಮಠ ಯಾದಗಿರಿ

ನಾನು ಜಿಲ್ಲಗೆ ಮೊದಲು ಬಂದ ನಂತರವೆ ಬೇರೆ ಸಿಎಂಗಳು ಇಲ್ಲಿಗೆ ಬಂದದ್ದು: ಶೆಟ್ಟರ್‌ಕೊಳ್ಳೇಗಾಲ: ನಾನು ಚಾಮರಾಜನಗರ ಜಿಲ್ಲೆಯತ್ತ ಮುಖ ಮಾಡಿದ ಬಳಿಕವೇ ಇನ್ನಿತರೆ ಮುಖ್ಯಮಂತ್ರಿಗಳ ಚಾಮರಾಜನಗರ ಜಿಲ್ಲೆಗೆ ಆಗಮಿಸಿದ್ದು, ಅದೇ ರೀತಿಯಲ್ಲಿ ಮಾಜಿ ಸಚಿವ ವಿ ಸೋಮಣ್ಣ ಚಾಮರಾಜನಗರ ಜಿಲ್ಲೆ ಅಭಿವೃದ್ಧಿಗೆ ಅನೇಕ ಉತ್ತಮ ಕೆಲಸ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.

ದೇವಲ ಮಹರ್ಷಿ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದ ಅವರು, ಈ ಹಿಂದೆ ಸ್ಪೀಕರ್, ಕಂದಾಯ ಸಚಿವರಿದ್ದಾಗಲೂ ಜಿಲ್ಲೆಗೆ ಬಂದಿರುವೆ. ಸಿಎಂ ಆಗಿದ್ದಾಗಲೂ ಸಹಾ ಜಿಲ್ಲೆಯ ಮಲೆಮಹದೇಶ್ವರಬೆಟ್ಟದಲ್ಲಿ ಪ್ರಾಧಿಕಾರ ಅಭಿವೃದ್ಧಿ ಕಾರ್ಯ ಅನುಷ್ಠಾನ ಮಾಡಿದ್ದೆನೆ, ಮುಖ್ಯಮಂತ್ರಿಯಾದ ಬಳಿಕ ಜಿಲ್ಲೆಗೆ ಮೂರು ಬಾರಿ ಜಿಲ್ಲೆಗೆ ಬಂದಿರುವೆ, ನಾನು ಚಾಮರಾಜನಗರ ಜಿಲ್ಲೆಗೆ ಬಂದ ಬಳಿಕ ನನಗೆ 1ತಿಂಗಳ ಕಾಲ ಅಧಿಕಾರ ಹೆಚ್ಚಾಯಿತು. ನಾನು ಬಂದ ಬಳಿಕವೇ ಇತರೆ ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸಿದರು. ಈ ಜಿಲ್ಲೆಗೆ ಬಂದರೆ ಅಧಿಕಾರ ಹೋಗುತ್ತೆ ಎಂಬುದು ಮೂಢನಂಬಿಕೆ, ಇದು ಸರಿಯಾದುದಲ್ಲ ಎಂದರು. ನನ್ನ ಅಧಿಕಾರಾವಧಿಯಲ್ಲಿ ಮಹದೇಶ್ವರ ಬೆಟ್ಟದಲ್ಲಿ ಹಲವು ಅಭಿವೃದ್ಧಿ ಕಾರ್ಯ ಕೈಗೊಂಡ ತೃಪ್ತಿ ನನಗಿದೆ. ಜಿಲ್ಲೆಯ ಬಗ್ಗೆ ಮೂಢನಂಬಿಕೆ ಸರಿಯಲ್ಲ ಎಂದರು.ಚಾಮರಾಜನಗರ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಗೆ ಬಿಟ್ಟಿದ್ದು: ಶೆಟ್ಟರ್ಕೊಳ್ಳೇಗಾಲ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಯಾರಾಗಬೇಕು ಎಂಬುದನ್ನ ಪಕ್ಷದ ಹಿರಿಯರು ತೀರ್ಮಾನಿಸಿದ್ದಾರೆ, ಅವರ ತೀರ್ಮಾನವೇ ಅಂತಿಮ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು. ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಯಾವ ಲೋಕಸಭೆಗೆ ಅಭ್ಯರ್ಥಿ ಯಾರಾಗಬೇಕು ಎಂಬುದನ್ನ ಪಕ್ಷವೇ ತೀರ್ಮಾನಿಸುತ್ತೆ, ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಬೇಕಿದೆ ಎಂದರು.

ಬಿಜೆಪಿ ನನ್ನ ಮನೆ : ಬಿಜೆಪಿ ಪಕ್ಷ ನನ್ನ ಮನೆ ಇದ್ದಂತೆ ಹಾಗಾಗಿ ಬದಲಾದ ರಾಜಕೀಯ ಸನ್ನಿವೇಶದಿಂದಾಗಿ ಕಾಂಗ್ರೆಸ್ ನಿಂದ ವಾಪಸ್ಸು ಬಂದೆ, ಪಕ್ಷದ ವರಿಷ್ಠರು ನನ್ನನ್ನು ಯಾವುದೇ ಲೋಕಸಭೆಗೆ ಸ್ಪರ್ಧಿಸಲು ಹೇಳಿಲ್ಲ, ಪಕ್ಷ ಸ್ಪರ್ಧೆಗೆ ಸೂಚಿಸಿದರೆ ಸ್ಪರ್ಧಿಸುವೆ, ಇಲ್ಲ ಪಕ್ಷ ಸಂಘಟನೆಯತ್ತ ಮುಂದಾಗಿ ಎಂದರೂ ಪಕ್ಷದ ವರಿಷ್ಠರ ಸೂಚನೆ ಪಾಲಿಸುವೆ ಒಟ್ಟಾರೆ ಪಕ್ಷ ಹೇಳಿದ ಸೂಚನೆ ಪಾಲಿಸುವೆ ಎಂದರು.

ಕಾಂಗ್ರೆಸ್ ಲೋಕಸಭೆ ಚುನಾವಣೆ ಹಿನ್ನೆಲೆ ರಾಜಕೀಯ ಲಾಭಕ್ಕಾಗಿ ಅನುದಾನ ತಾರತಮ್ಯ ನೀತಿ ಎಂಬ ಸಂದೇಶ ರವಾನಿಸುತ್ತಿದೆ. ಇದೆಲ್ಲಾ ತೀರ್ಮಾನವಾಗಬೇಕಾದ್ದು ನೀತಿ ಅಯೋಗದಲ್ಲಿ ಅಷ್ಟಕ್ಕೂ ರಾಜ್ಯಸಭೆ, ಲೋಕಸಭೆಯಲ್ಲಿ ಈ ಕುರಿತು ಪ್ರಶ್ನಿಸುವುದನ್ನ ಮಲ್ಲಿಕಾರ್ಜುನ ಖರ್ಗೆ ಬಿಟ್ಟು ಈಗೇಕೆ ರಾಜಕೀಯ ಮಾಡುತ್ತಿದ್ದಾರೆ, ಮುಖ್ಯಮಂತ್ರಿಗಳು ಸಹಾ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದರು.

ಸರ್ಕಾರ ನೀತಿ, ನಿಯಮ, ಮೂಲ ಉದ್ದೇಶ ಹಾಗೂ ಮುಂದಿನ ಗುರಿಯನ್ನು ರಾಜ್ಯಪಾಲರು ತಮ್ಮ ಭಾಷಣದಲ್ಲಿ ವಿವರಿಸಬೇಕಿತ್ತು, ಆದರೆ ಭಾಷಣದಲ್ಲಿ ಅಂಥಾದ್ದೆನೂ ಹೇಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.