ದತ್ತಪೀಠ ಭಾಗಶಃ ಹಿಂದೂಗಳಿಗೆ ಸಿಕ್ಕಂತಾಗಿದೆ: ಶೋಭಾ ಕರಂದ್ಲಾಜೆ

| Published : Dec 26 2023, 01:30 AM IST / Updated: Dec 26 2023, 01:05 PM IST

ಸಾರಾಂಶ

ಎಲ್ಲ ರೀತಿಯ ವಿರೋಧಗಳನ್ನು ಎದುರಿಸಿ ದತ್ತಾತ್ರೇಯರ ಪೂಜೆಗೆ ಅವಕಾಶ ದೊರೆತಿದೆ ದತ್ತಪಾದುಕೆಗಳಿಗೆ ಇಂದು ನಿರಂತರ ಪೂಜೆಯಾಗುತ್ತಿದೆ ದತ್ತಪೀಠ ನೂರಕ್ಕೆ ನೂರರಷ್ಟು ನಮ್ಮ ದಾಗಬೇಕು ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು: ಹಿಂದೂಗಳ ಪೀಠವಾಗಿರುವ ದತ್ತಪೀಠ ಈಗಾಗಲೇ ಭಾಗಶಃ ಹಿಂದೂಗಳಿಗೆ ಸಿಕ್ಕಂತಾಗಿದೆ ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ನಗರದಲ್ಲಿ ಸೋಮವಾರ ನಡೆದ ಶೋಭಾಯಾತ್ರೆಯಲ್ಲಿ ಭಾಗಿಯಾಗಿ ಮಾತ ಡಿದ ಅವರು, ಎಲ್ಲ ರೀತಿಯ ವಿರೋಧಗಳನ್ನು ಎದುರಿಸಿ ದತ್ತಾತ್ರೇಯರ ಪೂಜೆಗೆ ಅವಕಾಶ ಸಿಕ್ಕಿದೆ. ದತ್ತಪಾದುಕೆಗಳಿಗೆ ಇಂದು ನಿರಂತರ ಪೂಜೆಯಾಗುತ್ತಿದೆ. ದತ್ತಪೀಠ ನೂರಕ್ಕೆ ನೂರರಷ್ಟು ನಮ್ಮ ದಾಗಬೇಕು. ದತ್ತಪೀಠದ ಜಾಗದಲ್ಲಿ ಮಂದಿರ ನಿರ್ಮಾಣವಾಗಬೇಕು ಹಾಗೂ ಎಲ್ಲ ಸೌಕರ್ಯ ಗಳು ಭಕ್ತರಿಗೆ ಸಿಗುವಂತಾಗಬೇಕು ಎಂದರು. ದತ್ತಾತ್ರೇಯರು ಹಿಂದೂಗಳ ಆರಾಧ್ಯ ದೈವ: ಆರ್‌. ಅಶೋಕ್‌

ಚಿಕ್ಕಮಗಳೂರು: ಶ್ರೀ ದತ್ತಾತ್ರೇಯರು ಹಿಂದುಗಳ ಆರಾಧ್ಯ ದೈವ. ಮುಂದಿನ ದಿನಗಳಲ್ಲಿ ದತ್ತಪೀಠ. ಸಾವಿರಾರು ವರ್ಷಗಳ ಇತಿಹಾಸದ ದತ್ತಪೀಠ ಹಿಂದುಗಳಿಗೆ ಸೇರಲಿದೆ. ಆಗ ದತ್ತಪೀಠ ಮುಸ್ಲಿಮರ ಪಾಲಿಗೆ ಪಳೆಯುಳಿಕೆಯಾಗಲಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.ನಗರದಲ್ಲಿ ಸೋಮವಾರ ನಡೆದ ಶೋಭಾಯಾತ್ರೆಯಲ್ಲಿ ಮಾತನಾಡಿದ ಅವರು, ದತ್ತಪೀಠ ಹಿಂದುಗಳಿಗೆ ಸೇರಬೇಕೆಂಬ ನಮ್ಮ ಹೋರಾಟ ನ್ಯಾಯ ಸಿಗುವವರೆಗೆ ನಡೆಯಲಿದೆ ಎಂದರು. ಮುಸ್ಲಿಮರ ದಾಳಿಯಿಂದ ಹಿಂದುಗಳ ಲಕ್ಷಾಂತರ ದೇವಾಲಯಗಳು ಧ್ವಂಸವಾಗಿವೆ. ಟಿಪ್ಪು ಸುಲ್ತಾನ್ ಸೇರಿದಂತೆ ತಮ್ಮ ಮತಾಂಧತೆಯಿಂದಲೇ ದೇವಾಲಯಗಳನ್ನು ಹಾಳು ಮಾಡಿದ್ದಾರೆ. 

ರಾಮ ಮಂದಿರ ದಿಂದ ಹಿಡಿದು ದತ್ತಪೀಠದವರೆಗೂ ಹೋರಾಟ ನಡೆದು ರಾಮ ಮಂದಿರ ಹಿಂದೂಗಳ ಭಾವನೆಯಂತೆ ಸಾಕಾರಗೊಳ್ಳುತ್ತಿದೆ. ಅದೇ ರೀತಿ ದತ್ತಪೀಠವೂ ಹಿಂದುಗಳಿಗೆ ಸೇರಲಿದೆ ಎಂದು ಭವಿಷ್ಯ ನುಡಿದರು. ದತ್ತಭಕ್ತರಿಗೆ ಜಾತಿ ಭೇದ ಇಲ್ಲ: ಸಿ.ಟಿ. ರವಿಚಿಕ್ಕಮಗಳೂರು: ದತ್ತ ಭಕ್ತರಿಗೆ ಜಾತಿ -ಪಕ್ಷ ಭೇದ ಇಲ್ಲ. ಆದರೆ, ಕೆಲವರು ಪಕ್ಷ ಬದಲಾದಾಕ್ಷಣ ದತ್ತ ಜಯಂತಿಯಲ್ಲಿ ಭಾಗಿಯಾದರೆ ನಮ್ಮ ಜಾತ್ಯತೀತತೆಗೆ ಭಂಗ ಬರುತ್ತದೆ ಎಂಬ ಮನಸ್ಥಿತಿಯಲ್ಲಿದ್ದಾರೆ. ಪಕ್ಷ ಬದಲಾದಾಕ್ಷಣ ಹುಟ್ಟಿದ ಧರ್ಮ ಬದಲಾಗುತ್ತದೆಯೇ ಎಂದು ಮಾಜಿ ಸಚಿವ ಸಿ.ಟಿ.ರವಿ ಕಾಂಗ್ರೆಸ್ ಸಿಎಂ ಸೇರಿದಂತೆ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದತ್ತಜಯಂತಿ ಅಂಗವಾಗಿ ಸೋಮವಾರ ಚಿಕ್ಕಮಗಳೂರಿನಲ್ಲಿ ನಡೆದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಹುಟ್ಟಿದ ಧರ್ಮವನ್ನು ಬಿಟ್ಟು ಬೇರೆ ಧರ್ಮವನ್ನು ಆಚರಣೆ ಮಾಡುತ್ತಾರೆ. 

ಟೋಪಿ ಹಾಕಿಕೊಂಡು ನಮಾಜ್ ಮಾಡುತ್ತಾರೆ. ಆದರೆ ದತ್ತ ಜಯಂತಿಗೆ ಬರು ವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಕ್ಷ ಬದಲಾದ ಕೂಡಲೇ ಅಪ್ಪ, ಅಮ್ಮ, ಅಣ್ಣ, ತಮ್ಮ, ಜಾತಿ ಧರ್ಮ, ಭಕ್ತಿ ಭಾವ ಯಾವುದೂ ಬದಲಾಗು ವುದಿಲ್ಲ ಎಂಬುದನ್ನು ಕೆಲ ನಾಯಕರು ಅರಿತುಕೊಳ್ಳಬೇಕು ಎಂದು ತಾಕೀತು ಮಾಡಿದರು.