ಸಾರಾಂಶ
ಕರ್ನಾಟಕದಲ್ಲಿ ಬೇರೆ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಹೋಲಿಸಿದರೆ, ದಾವಣಗೆರೆ ಕಚೇರಿ ಉತ್ತಮ ಸೇವೆ ನೀಡುತ್ತ ಮೊದಲ ಸ್ಥಾನದಲ್ಲಿದೆ. ಹೀಗಿದ್ದೂ ದಾವಣಗೆರೆಯಲ್ಲಿ ಇಲಾಖೆಯ ಕೆಲವು ಅಧಿಕಾರಿಗಳ ವಿರುದ್ಧ ಕಚೇರಿ ಆವರಣದಲ್ಲಿ ಪ್ರತಿಭಟಿಸಿ, ವರ್ಗಾವಣೆಗೆ ಒತ್ತಾಯಿಸಿದ್ದಾರೆ. ಇದು ಹಾಸ್ಯಾಸ್ಪದ ನಡೆದ ಎಂದು ಜಿಲ್ಲಾ ಲಾರಿ ಮಾಲೀಕರು ಮತ್ತು ಟ್ರಾನ್ಸ್‌ಪೋರ್ಟ್ ಏಜೆಂಟರ ಅಸೋಸಿಯೇಷನ್, ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘ ಹಾಗೂ ಜಿಲ್ಲಾ ವಾಹನ ಚಾಲನಾ ತರಬೇತಿ ಸಂಸ್ಥೆಗಳ ಸಂಘ ಅಭಿಪ್ರಾಯಪಟ್ಟಿವೆ.
- ಕೆಲ ಅಧಿಕಾರಿಗಳ ವರ್ಗಾವಣೆಗೆ ಒತ್ತಾಯ ಖಂಡನೀಯ: ಸೈಫುಲ್ಲಾ
- - - ದಾವಣಗೆರೆ: ಕರ್ನಾಟಕದಲ್ಲಿ ಬೇರೆ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಹೋಲಿಸಿದರೆ, ದಾವಣಗೆರೆ ಕಚೇರಿ ಉತ್ತಮ ಸೇವೆ ನೀಡುತ್ತ ಮೊದಲ ಸ್ಥಾನದಲ್ಲಿದೆ. ಹೀಗಿದ್ದೂ ದಾವಣಗೆರೆಯಲ್ಲಿ ಇಲಾಖೆಯ ಕೆಲವು ಅಧಿಕಾರಿಗಳ ವಿರುದ್ಧ ಕಚೇರಿ ಆವರಣದಲ್ಲಿ ಪ್ರತಿಭಟಿಸಿ, ವರ್ಗಾವಣೆಗೆ ಒತ್ತಾಯಿಸಿದ್ದಾರೆ. ಇದು ಹಾಸ್ಯಾಸ್ಪದ ನಡೆದ ಎಂದು ಜಿಲ್ಲಾ ಲಾರಿ ಮಾಲೀಕರು ಮತ್ತು ಟ್ರಾನ್ಸ್‌ಪೋರ್ಟ್ ಏಜೆಂಟರ ಅಸೋಸಿಯೇಷನ್, ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘ ಹಾಗೂ ಜಿಲ್ಲಾ ವಾಹನ ಚಾಲನಾ ತರಬೇತಿ ಸಂಸ್ಥೆಗಳ ಸಂಘ ಅಭಿಪ್ರಾಯಪಟ್ಟಿವೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸಿಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಸಾರಿಗೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದು, ವಾಹನ ನಿರೀಕ್ಷಕರ ಕೊರತೆ ತೀವ್ರ ಕಾಡುತ್ತಿದೆ ಎಂಬುದನ್ನು ಮರೆಯಬಾರದು ಎಂದರು.
ಆರ್‌ಟಿಒ ಕಚೇರಿಯಲ್ಲಿ ವಾಹನ ನಿರೀಕ್ಷಕರು ದಾವಣಗೆರೆಯಲ್ಲಿ ಕರ್ತವ್ಯ ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಿರುವಾಗ ಇರುವ ಅಧಿಕಾರಿಗಳನ್ನೇ ವರ್ಗಾವಣೆ ಮಾಡಿದರೆ ಸಾರ್ವಜನಿಕರಿಗೆ ತೊಂದರೆ ಆಗುವುದು. ಇತ್ತೀಚಿನ ದಿನಗಳಲ್ಲಿ ವಾಹನ್ 4 ತಂತ್ರಾಂಶ ಅಳವಡಿಸಿರುವುದರಿಂದ ಅದಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಇದರಿಂದ ಸಣ್ಣಪುಟ್ಟ ಕೆಲಸಗಳು ವಿಳಂಬವಾಗುತ್ತಿವೆ. ಅದಕ್ಕೆ ಸಿಬ್ಬಂದಿ ಕಾರಣವಲ್ಲ. ಅದರಲ್ಲೂ ಕರ್ನಾಟಕದಲ್ಲಿ ಬೇರೆ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಹೋಲಿಸಿದರೆ, ದಾವಣಗೆರೆ ಕಚೇರಿ ಉತ್ತಮ ಸೇವೆ ಲಭ್ಯವಾಗುತ್ತಿದೆ. ಅಂತಹದ್ದರಲ್ಲಿ ಇಲ್ಲಿನ ಅಧಿಕಾರಿಗಳನ್ನು ವರ್ಗಾಯಿಸುವಂತೆ ಪ್ರತಿಭಟಿಸಿದ್ದು ಸರಿಯಲ್ಲ ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿದ್ದಾಗ ಯಾವುದೇ ಕಚೇರಿಯಲ್ಲಿ ಭ್ರಷ್ಟಾಚಾರ ಕಾಣಿಸುತ್ತಿಲ್ಲ. ಕೆಲ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಸಾರ್ವಜನಿಕರು ಕಿವಿಗೊಡದೇ ದೈನಂದಿನ ಕೆಲಸಗಳನ್ನು ಆಯಾ ಕಚೇರಿಗಳಲ್ಲಿ ಸುಲಭವಾಗಿ ಮಾಡಿಸಿಕೊಳ್ಳಬೇಕು. ಕೆಲ ಸಂಘಟನೆಗಳು ನಡೆಸಿದ ಹೋರಾಟವನ್ನು ವಿರೋಧಿಸುತ್ತಿದ್ದೇವೆ ಎಂದು ಸೈಯದ್ ತಿಳಿಸಿದರು.
ಖಾಸಗಿ ಬಸ್ ಮಾಲೀಕರ ಸಂಘ ಅಧ್ಯಕ್ಷ ಕೆ.ಎಸ್. ಮಲ್ಲೇಶಪ್ಪ, ಜಿಲ್ಲಾ ಲಾರಿ ಮಾಲೀಕರು ಮತ್ತು ಟ್ರಾನ್ಸ್‌ಪೋರ್ಟ್ ಏಜೆಂಟರ ಅಸೋಸಿಯೇಷನ್ ಕಾರ್ಯದರ್ಶಿ ಎಸ್.ಕೆ.ಮಲ್ಲಿಕಾರ್ಜುನ, ಎಂ.ಆರ್.ಮಹೇಶ, ಜಿಲಾನ್ ಬೇಗ್, ಎಸ್.ಬಸವರಾಜ, ಸತೀಶ, ಖಾಸಗಿ ವಾಹನ ಚಾಲನಾ ತರಬೇತಿ ಶಾಲೆಗಳ ಸಂಘದ ಈಶ್ವರ, ಬಿ.ಎಚ್.ಭೀಮಪ್ಪ ಇತರರು ಇದ್ದರು.- - -
(ಸಾಂದರ್ಭಿಕ ಚಿತ್ರ);Resize=(128,128))
;Resize=(128,128))
;Resize=(128,128))
;Resize=(128,128))