ಸಾರಾಂಶ
ಕೊಟ್ಟೂರು: ಆಗಸದಲ್ಲಿ ಸೂರ್ಯ ಮೆಲ್ಲನೆ ಮುಳುಗುವ ಹೊತ್ತಿನಲ್ಲಿ ಇತ್ತ ಕೊಟ್ಟೂರಿನಲ್ಲಿ ಸೋಮವಾರ ಸಂಜೆ 6.05ರ ಸುಮಾರಿಗೆ ಕೊಟ್ಟೂರೇಶ್ವರ ಮಹಾಕಾರ್ತಿಕೋತ್ಸವ ಹಣತೆಗಳಲ್ಲಿನ ಬತ್ತಿಗಳಿಗೆ ದೀಪ ಹಚ್ಚುವ ಮೂಲಕ ಚಾಲನೆ ಪಡೆದುಕೊಂಡಿತು.ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಶ್ರೀಸ್ವಾಮಿಯ ಕ್ರಿಯಾ ಮೂರ್ತಿ, ಪ್ರಕಾಶ್ ಕೊಟ್ಟೂರು ದೇವರು, ಉತ್ತಂಗಿ ಸೋಮಶಂಕರ ಸ್ವಾಮೀಜಿ ಮಹಾಕಾರ್ತಿಕೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಕಿಕ್ಕಿರಿದು ಸೇರಿದ್ದ ಸಾವಿರಾರು ಭಕ್ತರು ಕೊಟ್ಟೂರೇಶ್ವರ ಸ್ವಾಮಿಗೆ ಜಯಕಾರಗಳನ್ನು ಕೂಗಿ ನಮಸ್ಕರಿಸಿದರು.ಪಟ್ಟಣದ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದ ಆವರಣದಲ್ಲಿ ಮಹಾಕಾರ್ತಿಕೋತ್ಸವ ಆರಂಭವಾಗುತ್ತಿದ್ದಂತೆ ತೇರುಗಡ್ಡೆ ಬಳಿಯ ಕೊಟ್ಟೂರೇಶ್ವರ ಕಲ್ಯಾಣ ಸಮಿತಿಯವರು ಮುಖ್ಯ ರಸ್ತೆಯುದ್ದಕ್ಕೂ ಅಳವಡಿಸಿದ್ದ ಕಟಕಟೆಯಲ್ಲಿ 32ನೇ ವರ್ಷದ ಲಕ್ಷ ದೀಪೋತ್ಸವು ಚಾಲನೆ ಪಡೆಯಿತು. ಭಕ್ತರು ಶ್ರೀ ಸ್ವಾಮಿಯ ನಾಲ್ಕು ಮಠಗಳಲ್ಲಿ ಬೆಳಗುತ್ತಿದ್ದ ದೀಪಗಳ ಪ್ರಣತಿಗಳಿಗೆ ಭಕ್ತರು ಎಣ್ಣೆ ಎರೆದು ಭಕ್ತಿ ಸಮರ್ಪಿಸಿದರು.ಭಕ್ತರು ದೇವಸ್ಥಾನ ಮುಂಭಾಗದಲ್ಲಿ ನಿರ್ಮಿಸಲಾಗಿದ್ದ ತೊಟ್ಟಿಯಲ್ಲಿ ಕೊಬ್ಬರಿಗಳನ್ನು ಸುಟ್ಟು ಭಕ್ತಿ ತೊರಿದರು.ಎಎಸ್‌ಪಿ ಸಲೀಂಪಾಷ, ದೇವಸ್ಥಾನದ ಇಒ ಹನುಮಂತಪ್ಪ, ಧರ್ಮಕರ್ತ ಎಂ.ಕೆ. ಶೇಖರಯ್ಯ, ಮುಖಂಡರಾದ ಕೆ.ಮಂಜುನಾಥ ಗೌಡ, ನಾಗರಾಜ ಗೌಡ, ಕೆ.ಗುರುಸಿದ್ದನ ಗೌಡ, ಪ್ರೇಮಾನಂದ ಗೌಡ, ಅಜ್ಜನಗೌಡ, ದೇವಸ್ಥಾನ ಸಿಬ್ಬಂದಿ ದೀಪು, ಕಾರ್ತಿಕ, ಪ್ರಶಾಂತ, ರೇವಣ್ಣ, ನಾಗರಾಜ, ಕೊಟ್ರಮ್ಮ ಇದ್ದರು.