ಸಾರಾಂಶ
ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿ, ವೈದ್ಯರು ಡಾಲ್ಫಿನ್‌ನ ಮರಣೋತ್ತರ ಪರೀಕ್ಷೆ ಮಾಡಿದರು.
ಹೊನ್ನಾವರ: ಕಳೆದ ವಾರದಿಂದ ಅರಬ್ಬಿ ಸಮುದ್ರದಲ್ಲಿ ಆದ ಅನಿರೀಕ್ಷಿತ ಬದಲಾವಣೆಯಿಂದ ಎದ್ದ ಬಾರಿ ತೆರೆ, ಗಾಳಿಗೆ ಸಿಕ್ಕಿ ಅಳಿವಿನಂಚಿನಲ್ಲಿರುವ ಹಬ್ ಬ್ಯಾಕ್ ಪ್ರಭೇದದ ಡಾಲ್ಫಿನ್ ಕಾಸರಕೋಡ ಟೊಂಕಾದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದೆ.
ಸ್ಥಳೀಯರು ವಿಷಯವನ್ನು ಅರಣ್ಯ ಇಲಾಖೆಗೆ ತಿಳಿಸಿದ್ದು, ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿ, ವೈದ್ಯರು ಡಾಲ್ಫಿನ್‌ನ ಮರಣೋತ್ತರ ಪರೀಕ್ಷೆ ಮಾಡಿದರು. ಸ್ಥಳೀಯ ಮೀನುಗಾರ ರಾಜೇಶ ಗೋವಿಂದ ತಾಂಡೇಲ್ ಇತರರು ಇದ್ದರು.ಬರ್ಗಿಯಲ್ಲಿ ಬಿರುಕು ಬಿಟ್ಟ ಗುಡ್ಡ
ಗೋಕರ್ಣ: ಬರ್ಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರಿಗದ್ದೆಯ ಜನವಸತಿ ಪ್ರದೇಶದ ಸಮೀಪದ ಗುಡ್ಡದಲ್ಲಿ ಭಾರಿ ಪ್ರಮಾಣದ ಬಿರುಕು ಕಾಣಿಸಿಕೊಂಡಿದ್ದು, ನಿವಾಸಿಗಳು ಆತಂಕಗೊಂಡಿದ್ದಾರೆ.ಗ್ರಾಮದ ಕೃಷ್ಣಪ್ಪ ರಾಮಯ್ಯ ಪಟಗಾರ ಎಂಬವರ ಮನೆ ಸಮೀಪದಲ್ಲಿರುವ ಅರಣ್ಯ ಪ್ರದೇಶದಲ್ಲಿ ಸುಮಾರು ಅರ್ಧ ಕಿಮೀ ಜಾಗದಲ್ಲಿ ಭಾರೀ ಪ್ರಮಾಣದಲ್ಲಿ ಭೂಮಿ ಬಾಯಿ ತೆರೆದುಕೊಂಡಿದೆ. ಗುಡ್ಡದಲ್ಲಿ ಬಿರುಕು ಭಯಾನಕವಾಗಿದ್ದು, ಯಾವುದೇ ಕ್ಷಣದಲ್ಲಾದ್ದರೂ ಗುಡ್ಡ ಕುಸಿಯುವ ಸಾಧ್ಯತೆ ಹೆಚ್ಚಾಗಿದೆ. ಶುಕ್ರವಾರ ರಾತ್ರಿಯಿಂದ ಮಳೆ ಜೋರಾಗಿದ್ದು, ಶನಿವಾರ ಅಬ್ಬರ ಮುಂದುವರಿದಿದೆ. ಇದೇ ಮಳೆ ಮುಂದುವರಿದರೆ ಅನಾಹುತ ಸಂಭವಿಸುವ ಭೀತಿ ಉಂಟಾಗಿದೆ.ಅಧಿಕಾರಿಗಳ ಭೇಟಿ: ಗುಡ್ಡ ಬಿರುಕು ಬಿಟ್ಟಿರುವ ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗುಡ್ಡ ಕುಸಿಯುವ ಆತಂಕ ಇರುವ ಕಾರಣ ಇಲ್ಲಿನ ನಿವಾಸಿಗಳಿಗೆ ವಾಸ್ತವ್ಯ ಮಾಡದಂತೆ ಸೂಚನೆ ನೀಡಿದ್ದಾರೆ. ಗೋಕರ್ಣ ಪೊಲೀಸರು ಸಹ ಭೇಟಿ ನೀಡಿ ಜನರಿಗೆ ತಿಳಿವಳಿಕೆ ನೀಡಿದ್ದಾರೆ.