ಸಾಲಬಾಧೆ: ವಿಷಸೇವಿಸಿ ವೃದ್ಧ ರೈತ ಮಹಿಳೆ ಆತ್ಮಹತ್ಯೆ

| Published : Jul 03 2025, 11:48 PM IST

ಸಾರಾಂಶ

ಸುಮಾರು 9 ಲಕ್ಷ ರು. ಸಾಲ ಮಾಡಿಕೊಂಡಿದ್ದ ಅವರು, ಸಾಲಬಾಧೆ ತಾಳಲಾರದೇ ಗುರುವಾರ ಬೆಳಗ್ಗೆ ತಮ್ಮ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಳವಳ್ಳಿ: ಸಾಲಬಾಧೆಯಿಂದ ವೃದ್ಧೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕಿರುಗಾವಲು ಹೋಬಳಿಯ ದೇವಿಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಲೇ.ಚನ್ನಣ್ಣನ ಚೌಡಯ್ಯರ ಪತ್ನಿ ರೈತ ಮಹಿಳೆ ಜವನಮ್ಮ(75) ಆತ್ಮಹತ್ಯೆ ಮಾಡಿಕೊಂಡವರು.

ಗ್ರಾಮದಲ್ಲಿ 3 ಎಕರೆ ಜಮೀನು ಹೊಂದಿದ್ದ ಜವನಮ್ಮ ವ್ಯವಸಾಯಕ್ಕಾಗಿ ಸಹಕಾರ ಸಂಘ, ಮಹಿಳಾ ಸ್ವಸಹಾಯ ಸಂಘ, ಖಾಸಗಿ ಬ್ಯಾಂಕ್, ಕೈಸಾಲ ಸೇರಿದಂತೆ ಸುಮಾರು 9 ಲಕ್ಷ ರು. ಸಾಲ ಮಾಡಿಕೊಂಡಿದ್ದ ಅವರು, ಸಾಲಬಾಧೆ ತಾಳಲಾರದೇ ಗುರುವಾರ ಬೆಳಗ್ಗೆ ತಮ್ಮ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು.

ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.