ಆಗಸ್ಟ್ ಅಂತ್ಯದ ವೇಳೆಗೆ ಎಲ್ಲ ಜಿಲ್ಲಾಧಿಕಾರಿಗಳಿಂದ ಮಳೆ, ಬೆಳೆ ಪ್ರಮಾಣದ ಬಗ್ಗೆ ಪರಿಷ್ಕೃತ ವರದಿ ಪಡೆದು ಪರಿಶೀಲಿಸಿ ಬರ ಘೋಷಣೆ ಬಗ್ಗೆ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಆಗಸ್ಟ್ ಅಂತ್ಯದ ವೇಳೆಗೆ ಎಲ್ಲ ಜಿಲ್ಲಾಧಿಕಾರಿಗಳಿಂದ ಮಳೆ, ಬೆಳೆ ಪ್ರಮಾಣದ ಬಗ್ಗೆ ಪರಿಷ್ಕೃತ ವರದಿ ಪಡೆದು ಪರಿಶೀಲಿಸಿ ಬರ ಘೋಷಣೆ ಬಗ್ಗೆ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.ಕಾವೇರಿ ನೀರು ವಿಚಾರವಾಗಿ ಚರ್ಚಿಸಲು ಭಾನುವಾರ ನಡೆದ ಸರ್ವಪಕ್ಷ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಬರದ ಘೋಷಣೆ ವಿಚಾರವಾಗಿ ಈಗಲೇ ತೀರ್ಮಾನ ಮಾಡಿಲ್ಲ. ಆಗಸ್ಟ್ ಅಂತ್ಯದ ವೇಳೆಗೆ ಎಲ್ಲ ಜಿಲ್ಲಾಧಿಕಾರಿಗಳಿಂದ ಪರಿಷ್ಕೃತ ಮಾಹಿತಿ ಪಡೆಯಲಾಗುವುದು. ಬಳಿಕ ಕಂದಾಯ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪರಿಶೀಲಿಸಿದ ನಂತರ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಚರ್ಚೆ ನಡೆಸಿ ಎಷ್ಟು ತಾಲೂಕುಗಳಲ್ಲಿ ಬರ ಘೋಷಣೆ ಮಾಡಬೇಕೆಂದು ತೀರ್ಮಾನಿಸಲಾಗುವುದು ಎಂದರು.
ಮಳೆ ಬಾರದೆ ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದೆ. ಈವರೆಗೆ ಕೇವಲ ಶೇ.30 ರಿಂದ 35ರಷ್ಟು ಮಾತ್ರ ಮಳೆಯಾಗಿದೆ. ನಾವು ಮಾರ್ಗದರ್ಶನ ನೀಡುವವರೆಗೆ ಬೆಳೆ ಹಾಕಿಕೊಳ್ಳಬೇಡಿ ಎಂದು ನಾವು ರೈತರಿಗೆ ಮನವಿ ಮಾಡಿದ್ದೇವೆ. ಆದರೆ, ಕೆಲ ದಿನಗಳಿಂದ ವಯನಾಡು, ಕರಾವಳಿ, ಮಲೆನಾಡು ಭಾಗಗಳಲ್ಲಿ ಮಳೆಯಾಗುತ್ತಿರುವುದರಿಂದ ಕೆಲ ಜಲಾಶಯಗಳು ತುಂಬಿವೆ, ಕೆಆರ್‌ಎಸ್ ಸೇರಿ ಇತರೆ ಜಲಾಶಗಳಿಗೆ ಒಳಹರಿವೂ ಹೆಚ್ಚಾಗಿದೆ. ಹಾಗಾಗಿ ಕುಡಿಯುವ ನೀರಿಗೆ ಆದ್ಯತೆ ಮೇಲೆ ಕೆರೆಗಳಿಗೆ, ಕಾಲುವೆಗಳಿಗೆ ನೀರು ಹರಿಸಲು ಆದೇಶಿಸಲಾಗಿದೆ. ಹಾಗಾಗಿ ಪರಿಷ್ಕೃತ ವರದಿ ಪಡೆದು ವಾಸ್ತವಾಂಶ ಗಮನದಲ್ಲಿಟ್ಟುಕೊಂಡು ಬರ ಘೋಷಣೆಗೆ ತೀರ್ಮಾನ ಮಾಡಲಾಗುವುದು ಎಂದರು.ಡಿಸಿಎಂಗೆ ಮುಕ್ತವಾಗಿ ಸಲಹೆ ನೀಡಿ:
ವಿರೋಧ ಪಕ್ಷದ ನಾಯಕರು ಬರ ಘೋಷಣೆ ಮಾಡಿ ಎಂದು ಹೇಳುತ್ತಿದ್ದರು. ಕಂದಾಯ ಸಚಿವರಾಗಿ ಅವರು ಅನುಭವ ಹೊಂದಿದ್ದಾರೆ. ಅವರು ರಾಜಕೀಯವಾಗಿ ಮಾತನಾಡಿದಾಗ ನಾವು ತಲೆ ಕೆಡಿಸಿಕೊಳ್ಳಲ್ಲ. ಈ ವಿಚಾರದಲ್ಲಿ ವಿರೋಧ ಪಕ್ಷದ ನಾಯಕರು ಸಲಹೆ ನೀಡಿದರೆ ಅದನ್ನು ಸ್ವೀಕರಿಸಲು ಸರ್ಕಾರ ಮುಕ್ತವಾಗಿದೆ. ಯಾರು ಏನೇ ಸಲಹೆ ಇದ್ದರೂ ಉಪಮುಖ್ಯಮಂತ್ರಿಗಳ ಬಳಿ ನೀಡಬಹುದು ಎಂದು ಹೇಳಿದರು.