ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳ ದುರಸ್ತಿ ಹಾಗೂ ಸ್ವಚ್ಛತೆ ಮಾಡುವುದು, ಬಸವನಗರ ಮಹಾದ್ವಾರದಿಂದ ಒಳಗಿನ ಓಣಿಗೆ, ಸ್ಮಶಾನ ರಸ್ತೆಗೆ, ಕೆಂಗೇರಿಮಡ್ಡಿಗೆ ಮತ್ತು ಚೆನ್ನಮ್ಮ ವೃತ್ತದಿಂದ ರೇವಡಿಗಿಡದ ಮಹಾಲಿಂಗೇಶ್ವರ ದೇವಸ್ಥಾನದವರೆಗೆ ಬೀದಿ ದೀಪ ಅಳವಡಿಸುವುದು ಸೇರಿದಂತೆ ಇತರೆ ಕಾರ್ಯಗಳು ತುರ್ತು ಆಗಬೇಕು ಎಂದು ಸದಸ್ಯರು ನಿರ್ಣಯ ಮಾಡಿದರು.ಸ್ಥಳೀಯ ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಅಧ್ಯಕ್ಷತೆಯಲ್ಲಿ ಪುರಸಭೆ ಸಾಮಾನ್ಯ ಸಭೆಯಲ್ಲಿ ಮಹಾಲಿಂಗೇಶ್ವರ ಜಾತ್ರೆ ನಿಮಿತ್ತ ನಗರದ ನಾನಾ ವಾರ್ಡ್‌ಗಳಲ್ಲಿ ತುರ್ತು ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಬಗ್ಗೆ ಚರ್ಚಿಸಲಾಯಿತು.
ನಂತರ ದೀಡನಮಸ್ಕಾರ ಹಾಕುವ ಭಕ್ತರಿಗೆ ಶವರ್ ಮತ್ತು ಬಟ್ಟೆ ಬದಲಿಸಲು ಕೊಠಡಿ ವ್ಯವಸ್ಥೆ ಮಾಡುವುದು, ಬಸವೇಶ್ವರ ವೃತ್ತದಿಂದ ಎಪಿಎಂಸಿ ಮಹಾದ್ವಾರದವರೆಗಿನ ರಸ್ತೆ ಕಾಮಗಾರಿಯಲ್ಲಿ ತಾರತಮ್ಯವಾಗದೇ ಅಚ್ಚುಕಟ್ಟಾಗಿ ನಿರ್ಮಾಣವಾಗುವಂತೆ ಎಚ್ಚರಿಕೆ ನೀಡುವುದು, ಅನಧಿಕೃತ ಶೆಡ್ ತೆರವು, ಕಲ್ಪಾಡ್ ಬಡಾವಣೆಯಲ್ಲಿ ಶೌಚಾಲಯ ವ್ಯವಸ್ಥೆ ಮಾಡುವುದು, ಸೇರಿದಂತೆ ನಾನಾ ಅಗತ್ಯಗಳ ಪೂರೈಕೆ ಬಗ್ಗೆ ನಿರ್ಣಯಿಸಲಾಯಿತು.ನೂತನ ಸ್ಥಾಯಿಸಮಿತಿ ಅಧ್ಯಕ್ಷರಾಗಿ ಅಬ್ದುಲ್ ಭಾಗವಾನ ಅವರನ್ನು ಆಯ್ಕೆ ಮಾಡಲಾಯಿತು. ಪುರಸಭೆ ಅಧ್ಯಕ್ಷ ವೈ.ಬಿ.ಪಾಟೀಲ, ಉಪಾಧ್ಯಕ್ಷೆ ಶೀಲಾ ಭಾವಿಕಟ್ಟಿ, ಸದಸ್ಯರಾದ ಶೇಖರ ಅಂಗಡಿ, ಪ್ರಹ್ಲಾದ ಸಣ್ಣಕ್ಕಿ, ರಾಜು ಚಮಕೇರಿ, ರವಿ ಜವಳಗಿ, ಸವಿತಾ ಹುರಕಡ್ಲಿ, ಸ್ನೇಹಲ ಅಂಗಡಿ, ಸಜನಸಾಬ ಪೆಂಡಾರಿ, ಸವಿತಾ ಕೋಳಿಗುಡ್ಡ, ಬಲವಂತಗೌಡ ಪಾಟೀಲ, ಮುಸ್ತಕ ಚಿಕ್ಕೋಡಿ, ಭಾವನಾ ಪಾಟೀಲ, ಗೋದಾವರಿ ಭಾಟ್, ಸುಜಾತಾ ಮಾಂಗ, ಚಾಂದನಿ ನಾಯಕ, ಚನ್ನಬಸು ಯರಗಟ್ಟಿ, ಸುಜಾತಾ ಮಾಂಗ, ಬಸವರಾಜ ಬುರುಡ, ಅಬ್ದುಲ್ ಭಾಗವಾನ, ಮುಖ್ಯಧಿಕಾರಿ ಈರಣ್ಣ ದಡ್ಡಿ, ಎಸ್.ಎನ್.ಪಾಟೀಲ, ಮಹಾಲಿಂಗ ಮುಗಳಖೋಡ, ಎಸ್.ಎಂ.ಕಲಬುರ್ಗಿ, ಸಿ.ಎಸ್.ಮಠಪತಿ, ಸಿದ್ದು ಅಳ್ಳಿಮಟ್ಟಿ, ರಾಜು ಹೂಗಾರ, ಪಿ.ವೈ.ಸೊನ್ನದ, ಸುರೇಶ ಹರಿಜನ, ಆರ್.ವಿ.ಸೋರಗಾಂವಿ, ರಾಮು ಮಾಂಗ, ಲಕ್ಷ್ಮೀ ಪರೀಟ, ಮಹಾಲಿಂಗ ಮಾಂಗ ಇದ್ದರು.