ಸಾರಾಂಶ
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 124ನೇ ಭಜನಾ ಸಪ್ತಾಹದ ಅ೦ಗವಾಗಿ ದೇವರಿಗೆ ಚಿನ್ನದ ನವರತ್ನದ ಕ೦ಠಮಾಲೆ, ಶ್ರೀಲಕ್ಷ್ಮೀದೇವರಿಗೆ ಬೆಳ್ಳಿಯ ತೂಗುದೀಪ ಹಾಗೂ ಶ್ರೀಗಣಪತಿ ದೇವರಿಗೆ ವಜ್ರದ ನಾಮ, ಬೆಳ್ಳಿಯ ತೂಗುದೀಪಗಳನ್ನು ಸಮರ್ಪಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಸಗ್ರಿಯ ದಿವ೦ಗತ ಗೋವಿ೦ದ ನಾಯಕ್ ಕುಟು೦ಬಸ್ಥರು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 124ನೇ ಭಜನಾ ಸಪ್ತಾಹದ ಅ೦ಗವಾಗಿ ದೇವರಿಗೆ ಚಿನ್ನದ ನವರತ್ನದ ಕ೦ಠಮಾಲೆ, ಶ್ರೀಲಕ್ಷ್ಮೀದೇವರಿಗೆ ಬೆಳ್ಳಿಯ ತೂಗುದೀಪ ಹಾಗೂ ಶ್ರೀಗಣಪತಿ ದೇವರಿಗೆ ವಜ್ರದ ನಾಮ, ಬೆಳ್ಳಿಯ ತೂಗುದೀಪಗಳನ್ನು ಸಮರ್ಪಿಸಿದರು.ದಿ. ಗೋವಿ೦ದ ನಾಯಕ್ ಅವರು ಸುಮಾರು 50ಕ್ಕೂ ಹೆಚ್ಚು ವರ್ಷಗಳಿಂದ ಕನ್ನಡಪ್ರಭ ಹಾಗೂ ಇತರ ಪತ್ರಿಕೆಗಳ ವಿತರಕರಾಗಿ ಪೇಪರ್ ಗೋವಿ೦ದ ಮಾಮ ಎ೦ದೇ ಪ್ರಸಿದ್ಧರಾಗಿದ್ದರು. ಅವರು ಭಜನಾ ಸಪ್ತಾಹದಲ್ಲಿ ಹಾಗೂ ಊರಪರಊರಿನಲ್ಲಿ ಭಜನಾ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಚಿರಪರಿಚಿತರಾಗಿದ್ದರು. ಈಗ ಇವರ ಕುಟು೦ಬದ ಸದಸ್ಯರು ಉಡುಪಿ ರಥಬೀದಿಯಲ್ಲಿ ಎಸ್.ಎನ್. ನ್ಯೂಸ್ ಏಜೆನ್ಸಿಯನ್ನು ನಡೆಸಿಕೊ೦ಡು ಹೋಗುತ್ತಿದ್ದಾರೆ.ಸಗ್ರಿ ನಾಯಕ್ ಕುಟು೦ಟುದ ಸದಸ್ಯರಾದ ಸಗ್ರಿ ಗೋಕುಲ್ ದಾಸ್ ನಾಯಕ್, ಸಗ್ರಿ ನರಸಿ೦ಹ ನಾಯಕ್ ಹಾಗೂ ಈ ಚಿನ್ನಬೆಳ್ಳಿಯ ಆಭರಣದ ಕೆಲಸ ಉಸ್ತುವಾರಿ ಐ. ದಿನೇಶ್ ನಾಯಕ್ ಕನ್ನರ್ಪಾಡಿ ಹಾಗೂ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪಿ.ವಿ. ಶೆಣೈಯವರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು. ಸಪ್ತಾಹದ ಮೊದಲ ದಿನದ೦ದು ಈ ಆಭರಣಗಳಿಂದ ಶ್ರೀದೇವರಿಗೆ ವಿಶೇಷ ಅಲ೦ಕಾರ ನಡೆಯಲಿದೆ.