ಅಣ್ಣೂರಿನಲ್ಲಿ ಮಂಚಮ್ಮದೇವಿ ದೇವಾಲಯ ಲೋಕಾರ್ಪಣೆ

| Published : Nov 28 2024, 12:36 AM IST

ಸಾರಾಂಶ

ನರಸಿಂಹ ಅಯ್ಯಂಗಾರ್ ನೇತೃತ್ವದ ಪುರೋಹಿತರ ತಂಡ ಗಂಗೆ ಪೂಜೆ, ವೀರಗಾಸೆಯ ಸಮೇತ ಗ್ರಾಮದ ಪ್ರದಕ್ಷಿಣೆ ಮತ್ತು ಗಣಪತಿ ಹೋಮ, ಪುಣ್ಯ ಪಂಚಗವ್ಯ, ರಕ್ಷಾಬಂಧನ, ಅಂಕುರರ್ಪಣೆ, ವಾಸ್ತುಹೋಮ, ದಿಕ್ಷುಪಾಲಕರ ಪೂಜೆ, ಆದಿವಾಸಗಳ ಪೂಜೆ, ಪೂರ್ಣಾವುತಿ ನಡೆಸಿ ಭಕ್ತಾದಿಗಳಿಗೆ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ಮಾಡಿದ್ದರು.

ಕನ್ನಡಪ್ರಭ ವಾರ್ತೆ ಭಾರತೀನಗರ

ಅಣ್ಣೂರು ಗ್ರಾಮದಲ್ಲಿ ಶ್ರೀಮಂಚಮ್ಮದೇವಿ ದೇವಸ್ಥಾನದ ಕರಗ ಪ್ರತಿಷ್ಠಾಪನೆ ಹಾಗೂ ದೇವಿ ದೇವಸ್ಥಾನ ಲೋಕಾರ್ಪಣೆಗೊಂಡಿತು.

ನರಸಿಂಹ ಅಯ್ಯಂಗಾರ್ ನೇತೃತ್ವದ ಪುರೋಹಿತರ ತಂಡ ಗಂಗೆ ಪೂಜೆ, ವೀರಗಾಸೆಯ ಸಮೇತ ಗ್ರಾಮದ ಪ್ರದಕ್ಷಿಣೆ ಮತ್ತು ಗಣಪತಿ ಹೋಮ, ಪುಣ್ಯ ಪಂಚಗವ್ಯ, ರಕ್ಷಾಬಂಧನ, ಅಂಕುರರ್ಪಣೆ, ವಾಸ್ತುಹೋಮ, ದಿಕ್ಷುಪಾಲಕರ ಪೂಜೆ, ಆದಿವಾಸಗಳ ಪೂಜೆ, ಪೂರ್ಣಾವುತಿ ನಡೆಸಿ ಭಕ್ತಾದಿಗಳಿಗೆ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ಮಾಡಿದ್ದರು.

ಮಂಗಳವಾರ ಬೆಳಗ್ಗೆ ಮಂಚಮ್ಮ ದೇವಿವಿಗ್ರಹ ಪ್ರತಿಷ್ಠಾಪನೆ ಮತ್ತು ಪ್ರಧಾನ ಕಳಸ ಆರಾಧನೆ, ಗಣಪತಿ ಹೋಮ, ನವಗ್ರಹ ಹೋಮ, ಚಂಡಿಕಾಹೋಮ, ಪಾರ್ವತಿ ಪಾರಾಯಾಣ ಹೋಮ ನಡೆಸಿ, ಮಹಾಮಂಗಳಾರತಿ ನೆರವೇರಿಸಿದರು.

ಕಾಂಗ್ರೆಸ್ ಮುಖಂಡ ಆಶಯ್‌ ಮಧು ಮಾತನಾಡಿ, ಮಂಚಮ್ಮ ದೇವಿ ದೇವಸ್ಥಾನ ಅಭಿವೃದ್ದಿಗೊಂಡು ಲೋಕಾರ್ಪಣೆಯಾಗಿದೆ. ಗ್ರಾಮಕ್ಕೆ ದೇವಿ ಒಳಿತು ಉಂಟುಮಾಡಲಿ ಎಂದರು.

ಗ್ರಾಮದ ಪ್ರಮುಖ ದೇವರುಗಳಾದ ವೆಂಕಟೇಶ್ವರ (ತಿಮ್ಮಪ್ಪನ ವಾಹನ), ಅಮೃತೇಶ್ವರನ ವಾಹನ, ಮಹಾಕಾಳಮ್ಮ, ಮಾರಮ್ಮ, ಹಟ್ಟಿಮಾರಮ್ನ ಪೂಜೆ, ಸಿದ್ದೇಶ್ವರಸ್ವಾಮಿ ಸತ್ತಿಗೆಯೊಂದಿಗೆ ಗ್ರಾಮದ ಹೊರ ವಲಯದಲ್ಲಿರುವ ಬೊಮ್ಮಲಿಂಗೇಶ್ವರಸ್ವಾಮಿ ದೇವಾಲಯದ ಬಳಿಯ ದೊಡ್ಡ ಹಳ್ಳದಲ್ಲಿ ಗಂಗಾಪೂಜಾ ನಡೆಸಲಾಯಿತು.

ತದ ನಂತರ ಎಲ್ಲಾ ದೇವರುಗಳು ಮೆರವಣಿಗೆ ಮೂಲಕ ಮಂಚಮ್ಮ ದೇವಿ ದೇವಾಲಯ ತಲುಪಿದವು. ಆರತಿ ಪಡೆದ ನಂತರ ಎಲ್ಲಾ ದೇವರುಗಳನ್ನು ದೇವಾಲಯದಲ್ಲಿ ಇಳಿಸಲಾಯಿತು. ಸಂಜೆ ಮಾರಿಗುಡಿ ರಂಗದಲ್ಲಿ ಚರ್ಮವಾದ್ಯಗಳೊಂದಿಗೆ ಎಲ್ಲಾ ದೇವರುಗಳು ಮೆರವಣಿಗೆ ನಡೆಸಿ ನಂತರ ಗ್ರಾಮದ ಪ್ರಮುಖ ಬೀದಿಗಳಿಗೆ ತೆರಳಿ ಪ್ರತೀ ಮನೆಯಿಂದ ಆರತಿ ಪಡೆದವು.

ಮಂಚಮ್ಮ ದೇವಿ ಕುಲಬಾಂಧವರು ದೇವಿಯ ದರ್ಶನ ಪಡೆದರು. ಪೂಜಾ ಕಾರ್ಯದಲ್ಲಿ 10 ಸಾವಿರಕ್ಕೂ ಹೆಚ್ಚು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಮನ್ಮುಲ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಕಾರ್ಕಹಳ್ಳಿ ಬಸವೇಗೌಡ, ಮದ್ದೂರು ಅವಿನಾಶ್, ತಾಪಂ ಮಾಜಿ ಸದಸ್ಯ ಬಿ.ಗಿರೀಶ್, ಜೊತೆಗೆ ದೇವಸ್ಥಾನದ ಅಭಿವೃದ್ದಿಗೆ ಸಹಕರಿಸಿದ ದಾನಿಗಳನ್ನು ಮತ್ತು ಸೇವಾಕರ್ತರನ್ನು ಅಭಿನಂದಿಸಿ ಗೌರವಿಸಲಾಯಿತು. ಪೂಜಾ ಕಾರ್ಯಕ್ರಮದಲ್ಲಿ ಗ್ರಾಮದ ನಾಡಗೌಡರು, ತೆಂಡೆ ಯಜಮಾನರು, ಮುಖಂಡರು ಉಪಸ್ಥಿತರಿದ್ದರು.