ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಅಮೃತ ವಿಶ್ವವಿದ್ಯಾಪೀಠಂ ಮೈಸೂರು ಕ್ಯಾಂಪಸ್ ನ ವಿಜ್ಞಾನ ವಿಭಾಗದ ವತಿಯಿಂದ ಇತ್ತೀಚೆಗೆ ರಾಸಾಯನಿಕ ಮತ್ತು ಭೌತ ವಿಜ್ಞಾನಗಳಲ್ಲಿನ ಪ್ರಗತಿಗಳ ಕುರಿತಾದ 2ನೇ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಿತ್ತು.ನಗರದ ಡಿಫೆನ್ಸ್ ಇನ್‌ಸ್ಟಿಟ್ಯೂಟ್‌ಆಫ್ ಬಯೋಡಿಫೆನ್ಸ್ ಟೆಕ್ನಾಲಜೀಸ್ ನ (ಡಿಐಬಿಟಿ) ವಿಜ್ಞಾನಿ ಜಿ ಮತ್ತು ಅಸೋಸಿಯೇಟ್ ಸೆಂಟರ್ ಮುಖ್ಯಸ್ಥ ಡಾ.ವಿ.ಎ. ಸಜೀವಕುಮಾರ್ ಅವರು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ತಂತ್ರಜ್ಞಾನದ ಅಡಿಪಾಯ ಸ್ತಂಭಗಳಾಗಿ ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರ ಮುಖ್ಯ ಪಾತ್ರವಹಿಸುತ್ತವೆ. ನೈಜ- ಪ್ರಪಂಚದ ನಾವೀನ್ಯತೆಗಳಲ್ಲಿ ಈ ವಿಜ್ಞಾನಗಳು ಬಹುಮುಖ್ಯವಾದ ಕೊಡುಗೆ ನೀಡುತ್ತಿವೆ ಎಂದರು.ದೇಶದ ಅಭಿವೃದ್ಧಿಯಲ್ಲಿ ಮೂಲಭೂತ ವಿಜ್ಞಾನಗಳ ಪ್ರಭಾವ ಹೆಚ್ಚಿದೆ. ಭಾರತ ರಕ್ಷಣಾ ವಲಯ ಮತ್ತು ಇಸ್ರೋಗೆ ಡಿಐಬಿಟಿಯ ಕೊಡುಗೆ ಉಲ್ಲೇಖಿಸಿದರು.ಬೆಂಗಳೂರಿನ ಕ್ವಾಂಟಮ್ ಜೈಮ್ ಕಂಪನಿ ಮತ್ತು ಅಮೃತ ವಿಶ್ವವಿದ್ಯಾಪೀಠಂ ಕ್ಯಾಂಪಸ್ ನ ನಡುವೆ ಸಂಶೋಧನಾ ಸಹಯೋಗ ಬೆಳೆಸುವ ಗುರಿ ಹೊಂದಿರುವ ಒಡಂಬಡಿಕೆಗೆ ಸಹಿ ಹಾಕಲಾಯಿತು.ಈ ಕಾರ್ಯಕ್ರಮದಲ್ಲಿ ವಿಜ್ಞಾನ ವಿಭಾಗ, ವಾಣಿಜ್ಯ ಮತ್ತು ನಿರ್ವಹಣಾ ವಿಭಾಗ ಮತ್ತು ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್)ನ ಸಹಯೋಗದೊಂದಿಗೆ ಭಾರತ ಸರ್ಕಾರದ ಏಕ್ ಪೆಡ್ ಮಾ ಕೆ ನಾಮ್ ಯೋಜನೆಯ ಅಡಿಯಲ್ಲಿ ಸುಸ್ಥಿರತೆಗಾಗಿ ವಿಜ್ಞಾನ ಆಂದೋಲನ ಪ್ರಾರಂಭಿಸಿತು.ವಿಚಾರ ಸಂಕಿರಣದಲ್ಲಿ ಪ್ರೊ. ಸುರೇಶ್ ವಲಿಯವೀಟ್ಟಿಲ್, ಪ್ರೊ. ಉದಯ್ ಮೈತ್ರಾ, ಡಾ. ನವೀನ್ ಕುಲಕರ್ಣಿ, ಡಾ.ಟಿ.ಪಿ. ವಿನೋದ್, ಡಾ.ಬಿ.ಕೆ. ಬೆಟ್ಟದಯ್ಯ, ಡಾ. ದೇಬಾಶಿಶ್ ಮನ್ನಾ, ಡಾ. ಅಂಕಿತಾ ತ್ರಿಪಾಠಿ, ಡಾ.ಕೆ. ಸೂರಜ್ ಮೊದಲಾದವರು ಇದ್ದರು.