ದೇಶದಲ್ಲಿ ಪಿಎಂ ಅವಾಸ ಯೋಜನೆ ಅಡಿಯಲ್ಲಿ 6 ಕೋಟಿ ಹೆಚ್ಚು ಮನೆಗಳ ನಿರ್ಮಾಣ ಆಗಿದ್ದು, ಪಕ್ಷದ ಕಾರ್ಯಕರ್ತರಿಗೆ ಹೆಚ್ಚಿನ ಜವಾಬ್ದಾರಿಯಿದ್ದು, ಪ್ರತಿ ಮನೆಗೆ ಸರ್ಕಾರದ ಸಾಧನೆಗಳ ತಿಳಿಸುವ ಕೆಲಸ ಆಗಬೇಕು.

ಲಕ್ಷ್ಮೇಶ್ವರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳನ್ನು ದೇಶದ ಕಟ್ಟ ಕಡೆಯ ವ್ಯಕ್ತಿಗೆ ಮುಟ್ಟಿಸುವ ಕೆಲಸ ಬಿಜೆಪಿ ಕಾರ್ಯಕರ್ತರು ಮಾಡಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ತಿಳಿಸಿದರು.ಗುರುವಾರ ಸಂಜೆ ಪಟ್ಟಣದ ಜಗದ್ಗುರು ವೀರಗಂಗಾಧರ ಕಲ್ಯಾಣ ಮಂಟಪದಲ್ಲಿ ಪಂ. ದೀನದಯಾಳ ಉಪಾದ್ಯಾಯ ಪ್ರಶಿಕ್ಷಣ ಮಹಾಭಿಯಾನ 2026, ಶಿರಹಟ್ಟಿ ಬಿಜೆಪಿ ಮಂಡಳದ 2 ದಿನಗಳ ಕಾಲ ನಡೆಯುವ ಪ್ರಶಿಕ್ಷಣ ವರ್ಗವನ್ನು ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಸರ್ಕಾರದ ಸಾಧನೆಯನ್ನು ಮೂರು ರೀತಿಯಾಗಿ ವರ್ಗಿಕರಣ ಮಾಡಿದ್ದು, ಮೂಲ ಸೌಲಭ್ಯ, ಸುರಕ್ಷಿತ ಗೌರವ ಆದಾಯ ಆತ್ಮನಿರ್ಭರ, ಜೀವನ ಮಟ್ಟ ಸುಧಾರಣೆಗೆ ಜಲಜೀವನ ಯೋಜನೆ, ಸುರಕ್ಷಿತ ಗೌರವ ₹5 ಲಕ್ಷದವರೆಗೂ ಆಯುಷ್ಮಾನ, ಕಾರ್ಡನಿಂದ ಉಚಿತ ಚಿಕಿತ್ಸೆ, ಗರ್ಭಿಣಿಯರಿಗೆ ಉಚಿತ ಮತ್ತು ಗುಣಮಟ್ಟದ ಆರೈಕೆ, ಪಿಎಂ ಸುರಕ್ಷಿತ ಮಾತೃತ್ವ ಯೋಜನೆ ದೇಶದ ಪ್ರತಿಯೊಬ್ಬರಿಗೂ ಅತ್ಯಂತ ಕಡಿಮೆ ಖರ್ಚಿನಲ್ಲಿ ಜೀವ ವಿಮೆ ಪಿಎಂ ಜೀವನ ಜ್ಯೋತಿ ಬಿಮಾ ಯೋಜನೆ ಹೀಗೆ ಅನೇಕ ಜನಪರ ಯೋಜನೆಗಳನ್ನು ಕೇಂದ್ರ ಎನ್ಡಿಎ ಸರ್ಕಾರ ಜಾರಿಗೆ ತಂದಿದೆ. ದೇಶದಲ್ಲಿ ಪಿಎಂ ಅವಾಸ ಯೋಜನೆ ಅಡಿಯಲ್ಲಿ 6 ಕೋಟಿ ಹೆಚ್ಚು ಮನೆಗಳ ನಿರ್ಮಾಣ ಆಗಿದ್ದು, ಪಕ್ಷದ ಕಾರ್ಯಕರ್ತರಿಗೆ ಹೆಚ್ಚಿನ ಜವಾಬ್ದಾರಿಯಿದ್ದು, ಪ್ರತಿ ಮನೆಗೆ ಸರ್ಕಾರದ ಸಾಧನೆಗಳ ತಿಳಿಸುವ ಕೆಲಸ ಆಗಬೇಕು ಎಂದರು.

ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಬಸವರಾಜ ಕುಂದಗೋಳಮಠ ಮಾತನಾಡಿ, ಪಕ್ಷದ ಕಾರ್ಯಕರ್ತರು ಬೂತ್ ನಿರ್ವಹಣೆ ಅಚ್ಚುಕಟ್ಟಾಗಿ ಮಾಡಬೇಕು. ಜನರ ಸಮಸ್ಯೆಗೆ ಸ್ಪಂದಿಸಿ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ಖೊಟ್ಟಿ ಮತದಾರರನ್ನು ಪತ್ತೆ ಹಚ್ಚುವ ಕಾರ್ಯ ಮಾಡಬೇಕು ಎಂದರು.ಈ ವೇಳೆ ಶಿರಹಟ್ಟಿ ಮಂಡಳದ ಬಿಜೆಪಿ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ ಪ್ರಾಸ್ತಾವಿಕ ಮಾತನಾಡಿ, ಬಿಜೆಪಿ ಯುವಕರಿಗೆ ಶಕ್ತಿ ನೀಡುವ ಪ್ರಶಿಕ್ಷಣ ವರ್ಗ ಪಕ್ಷದ ತತ್ವ ಸಿದ್ಧಾಂತವನ್ನು ತಿಳಿಸಿ ಕೊಡುತ್ತದೆ. ಕೆಳಮಟ್ಟದ ಕಾರ್ಯಕರ್ತರನ್ನು ಗುರುತಿಸುವ ಕೆಲಸ ಬಿಜೆಪಿ ಮಾಡುತ್ತದೆ. ದೇಶ ಮೊದಲ ಅತಿ ದೊಡ್ಡ ಪಕ್ಷ ಬಿಜೆಪಿ ಎಂದರು.

ಜಿಪಂ ಮಾಜಿ ಸದಸ್ಯ ಎಂ.ಎಸ್. ದೊಡ್ಡಗೌಡ್ರ, ವಿಜಯ ಹತ್ತಿಕಾಳ, ಸೋಮೇಶ ಉಪನಾಳ, ನಿಂಗಪ್ಪ ಬನ್ನಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಬಸವರಾಜ ಇಟಗಿ, ಗಂಗಾಧರ ಮೆಣಸಿನಕಾಯಿ, ಸಂಗಮೇಶ ಬೆಳವಲಕೊಪ್ಪ, ಅಶೋಕ ಶಿರಹಟ್ಟಿ, ಭೀಮಣ್ಣ ಯಂಗಾಡಿ, ಬಸವರಾಜ ಚಕ್ರಸಾಲಿ, ನವೀನ ಹಿರೇಮಠ, ವಿಜಯ ಮೆಕ್ಕಿ, ಸಂತೋಷ ಜಾವೂರ, ಗಿರೀಶ ಚೌರಡ್ಡಿ, ಪ್ರವೀಣ ಬೋಮಲೆ, ವಿಜಯ ಕುಂಬಾರ, ಎನ್.ಬಿ. ಮಡಿವಾಳರ, ರವಿ ಕೋರಿ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು ಇದ್ದರು. ಗಂಗಾಧರ ಮೆಣಸಿನಕಾಯಿ, ಅನೀಲ ಮುಳಗುಂದ ಹಾಗೂ ರೋಹನ ಕುಂದನಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು.