- ಸಮುದಾಯದ ನಿಯೋಗದಿಂದ ಜಿಲ್ಲಾಡಳಿತ, ಸರ್ಕಾರಗಳಿಗೆ ಮನವಿ
ಕನ್ನಡಪ್ರಭ ವಾರ್ತೆ ರಾಯಚೂರುಜಿಲ್ಲೆ ಸಿಂಧನೂರು ತಾಲೂಕಿನ ಪುನರ್ವಸತಿ (ಆರ್ ಎಚ್)ಕ್ಯಾಂಪ್ ಗಳಲ್ಲಿ ನೆಲೆಸಿರುವ ಬಂಗಾಳಿ ಸಮುದಾಯದವರು ಅನೇಕ ದಶಕಗಳಿಂದ ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ಸಮುದಾಯದ ನಿಯೋಗವು ಜಿಲ್ಲಾಡಳಿತ,ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಮನವಿ ಮಾಡಿದೆ.
ಸ್ಥಳೀಯ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ನಿಯೋಗದ ಸದಸ್ಯರು ಜಿಲ್ಲಾಧಿಕಾರಿ ಮುಖಾಂತರ ರಾಷ್ಟ್ರಪತಿ, ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ರವಾನಿಸಿದ್ದಾರೆ. ಏಳು ದಶಕಗಳ ಹಿಂದೆ ಅಂದಿನ ಕೇಂದ್ರ ಸರ್ಕಾರವು ವಲಸೆ ಬಾಂಗ್ಲಿಗರಿಗೆ ಸಿಂಧನೂರು ಸಮೀಪದ ಆರ್ ಎಚ್ ಕ್ಯಾಂಪ್ ನಲ್ಲಿ ಪುನರ್ವಸತಿ ಕಲ್ಪಿಸಿಕೊಟ್ಟಿದ್ದು, ಅಂದಿನಿಂದ ಇಲ್ಲಿ ತನಕ ಅಗತ್ಯ ಸವಲತ್ತುಗಳನ್ನು ಪಡೆಯಲು ಪರದಾಡು ವಂತಾಗಿದೆ. ಸಿಸಿಐ ಅಡಿಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಪೌರತ್ವ, ಜಾತಿ, ಆದಾಯ ಪ್ರಮಾಣ ಪತ್ರದ ಜೊತೆಗೆ ಮತದಾರರ ಗುರುತಿನಯನ್ನು ನೀಡುತ್ತಿಲ್ಲ ಅಷ್ಟೇ ಅಲ್ಲದೇ ಹಿಂದೆ ನಿವಾಸಿಗಳಿಗೆ ಕೃಷಿ ಹಾಗೂ ವಸತಿ ಉದ್ದೇಶ ಕ್ಕಾಗಿ ಭೂಮಿಯನ್ನು ಹಂಚಿಕೆ ಮಾಡಿದ್ದು, ಆದರೆ ಫಾರಂ ನಂ.10 ನೀಡದ ಕಾರಣಕ್ಕೆ ಕಂದಾಯ ಇಲಾಖೆಯಲ್ಲಿ ಹೆಸರು ದಾಖಲು, ಸರ್ಕಾರಿ ಯೋಜನೆಗಳ ಪ್ರಯೋಜನೆ, ಬ್ಯಾಂಕ್ ನಲ್ಲಿ ಸಾಲ ಸಿದಗಂತಾಗಿದ್ದು, ಇದರ ಜೊತೆಗೆ ಕಾನೂನು ಬದ್ಧ ವ್ಯವಹಾರ ನಡೆಸಲು ಕಷ್ಟವಾಗುತ್ತಿದೆ ಎಂದು ಸಮಸ್ಯೆಗಳನ್ನು ಹೇಳಿಕೊಂಡರು.ಬಂಗಾಳಿಗಳಿಗೆ ಸಾಮಾಜಿಕ ಮತ್ತು ಜಾತಿ ಗುರುತಿನ ಸಮಸ್ಯೆಯೂ ಸಹ ಎದುರಾಗಿದ್ದು ಆರ್ ಎಚ್ ಕ್ಯಾಂಪ್ ನಲ್ಲಿ ವಾಸವಿರುವವರನ್ನು ಅರ್ಹ ಮೀಸಲು ಸೇರಿಸಬೇಕು ಅದರ ಬದಲಾಗಿ ಸಾಮಾನ್ಯ ವರ್ಗಕ್ಕೆ ಪರಿಗಣಿಸಿರು ವುದರಿಂದ ಉನ್ನತ ಶಿಕ್ಷಣ, ಉದ್ಯೋಗದಲ್ಲಿ ಅನ್ಯಾಯವಾಗುತ್ತಿದೆ. ಇದರ ಜೊತೆಗೆ ಬಂಗಾಳಿ ಸಮುದಾಯದ ಅನೇಕ ಕುಟುಂಬಗಳು "ಸರ್ಕಾರ್ " ಎಂಬ ಉಪನಾಮವನ್ನು ಬಳಸುತ್ತವೆ. ಸ್ಥಳೀಯ ಆಡಳಿತವು ಈ ಉಪನಾಮವನ್ನು ಕೆಲವೊಮ್ಮೆ ಸರ್ಕಾರಿ ಹುದ್ದೆ ಅಥವಾ ಪದವಿಯಂತೆ ತಪ್ಪಾಗಿ ಅರ್ಥೈಸಿ ಜಮೀನಿನ ಪಹಣಿ ಸೇರಿ ಇತರ ದಾಖಲೆಗಳನ್ನು ನೀಡುವಲ್ಲಿ ತೊಂದರೆ ಉಂಟುಮಾಡುತ್ತಿದ್ದಾರೆ, ನಿವಾಸಿಗಳ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಲ್ಲಿ ಬಂಗಾಳಿ ಭಾಷೆ ಕಲಿಸಬೇಕಾಗಿದ್ದು ಅದಕ್ಕಾಗಿ ಬಂಗಾಳಿ ಶಿಕ್ಷಕರನ್ನು ನೇಮಕ ಸೇರಿ ವಿವಿಧ ಬೇಡಿಕೆ ಗಳನ್ನು ಈಡೇರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮುಂದಾಗಬೇಕು ಇಲ್ಲವಾದಲ್ಲಿ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪ್ರಣಬ್ ಬಾಲಾ ವಕೀಲ್, ಸುನೀಲ್ ಮಿಸ್ತ್ರಿ,ಸುಭಾಷ್ ಮಂಡಲ, ಪ್ರಹ್ಲಾದ ಬಿಸ್ವಾಸ್, ಗುರುದಾಸ, ಧರ್ಮೇಂದರ್ ಬಿಸ್ವಾಸ್, ಸೂರಜ್ ಮಂಡಲ ಸೇರಿ ಅನೇಕರು ಇದ್ದರು.
---
06ಕೆಪಿಆರ್‌ಸಿಆರ್ 01: ರಾಯಚೂರು ಜಿಲ್ಲಾ ಸಿಂಧನೂರು ತಾಲೂಕಿನ ಆರ್‌ಎಚ್ ಕ್ಯಾಂಪ್ ನಲ್ಲಿ ನೆಲೆಸಿರುವ ಬಂಗಾಳಿ ಸಮುದಾಯದವರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ನಿಯೋಗವು ಜಿಲ್ಲಾಡಳಿತದ ಮುಖಾಂತರ ರಾಷ್ಟ್ರಪತಿ,ಪಿಎಂ ಹಾಗೂ ಸಿಎಂಗೆ ಮನವಿ ಸಲ್ಲಿಸಿತು.