ಸಾರಾಂಶ
ತಾಲೂಕಿನ ಇಟ್ಟಿಗೆ ಗ್ರಾಮ ಪಂಚಾಯಿತಿಯಲ್ಲಿ ಪರಿಶಿಷ್ಟ ಜಾತಿ (ಭೋವಿ) ಎಂದು ನಕಲಿ ಜಾತಿ ಪ್ರಮಾಣ ಪತ್ರ ನೀಡಿ 2020ರಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಸದಸ್ಯನಾಗಿರುವ ಲಿಂಗರಾಜ ಎಂಬವರ ಸದಸ್ಯ ಸ್ಥಾನ ವಜಾಗೊಳಿಸಬೇಕು ಎಂದು ತಾಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ಕಗತೂರು ಆನಂದ್ ಹೇಳಿದರು.
ಚನ್ನಗಿರಿ: ತಾಲೂಕಿನ ಇಟ್ಟಿಗೆ ಗ್ರಾಮ ಪಂಚಾಯಿತಿಯಲ್ಲಿ ಪರಿಶಿಷ್ಟ ಜಾತಿ (ಭೋವಿ) ಎಂದು ನಕಲಿ ಜಾತಿ ಪ್ರಮಾಣ ಪತ್ರ ನೀಡಿ 2020ರಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಸದಸ್ಯನಾಗಿರುವ ಲಿಂಗರಾಜ ಎಂಬವರ ಸದಸ್ಯ ಸ್ಥಾನ ವಜಾಗೊಳಿಸಬೇಕು ಎಂದು ತಾಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ಕಗತೂರು ಆನಂದ್ ಹೇಳಿದರು.
ಲಿಂಗರಾಜ ಮೂಲ ದಾಖಲೆಗಳ ಪ್ರಕಾರ ಹಿಂದೂ ಬೆಸ್ತ ಜನಾಂಗದವರಾಗಿದ್ದಾರೆ. ನಕಲಿ ದಾಖಲೆಗಳನ್ನು ಪ್ರಮಾಣ ಪತ್ರ ಪಡೆದಿದ್ದಾರೆ. ಈ ಬಗ್ಗೆ ಹೊನ್ನಾಳಿಯ ಉಪವಿಭಾಗಾಧಿಕಾರಿ ಸೆ.4ರಂದು ಲಿಂಗರಾಜ ಪಡೆದ ಪರಿಶಿಷ್ಟ ಜಾತಿ ಪ್ರಮಾಣವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ. ಚುನಾವಣೆಗೂ ಸ್ಪರ್ಧಿಸಿ ಗೆದ್ದು ಈಗ ಮೀಸಲಾತಿ ಬಳಸಿ ಹಾಲಿ ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿರುವ ಲಿಂಗರಾಜ ಅವರನ್ನು ಕೂಡಲೇ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದರು.35ರಿಂದ 40 ಕುಟುಂಬಗಳು ಗದಗ ಜಿಲ್ಲೆ ಮತ್ತು ಗದಗ ತಾಲೂಕು ಮುಳುಗುಂದ ಗ್ರಾಮದಿಂದ ವಲಸೆ ಬಂದು ಇಲ್ಲಿ ನೆಲೆಸಿವೆ. ಅವರ ಕುಟುಂಬದ ಮಕ್ಕಳನ್ನು ಭೋವಿ ಜನಾಂಗವೆಂದು ದಾಖಲಿಸುತ್ತಿರುವುದನ್ನು ಪರಿಶೀಲಿಸಿ ರದ್ದುಪಡಿಸಬೇಕು. ಸರ್ಕಾರಕ್ಕೆ ಮತ್ತು ಪರಿಶಿಷ್ಟ ಜನಾಂಗಕ್ಕೆ ಮೋಸ ಮಾಡಿರುವ ಬಗ್ಗೆ ತನಿಖೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಇತ್ತೀಚೆಗೆ ಪತ್ತಿಕಾಗೋಷ್ಠಿ ನಡೆಸಿ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘಟನೆ ಪ್ರಮುಖರಾದ ಪ್ರಬಾಕರ್, ಮೂರ್ತಿ, ರಂಗಪ್ಪ, ಸಿ.ರಂಗಪ್ಪ, ರುದ್ರೇಶ್, ಅಣ್ಣಪ್ಪ ಹಾಜರಿದ್ದರು.- - -
-22ಕೆಸಿಎನ್‌ಜಿ2: ಪತ್ರಿಕಾಗೋಷ್ಠಿಯಲ್ಲಿ ಡಿಎಸ್‌ಎಸ್ ಸಂಚಾಲಕ ಕಗತೂರು ಆನಂದ್ ಮಾತನಾಡಿದರು.