ಕನ್ನಡ ನಾಮಫಲಕ ಹಾಕದವ ವಿರುದ್ಧ ಕ್ರಮಕ್ಕೆ ಆಗ್ರಹ

| Published : Mar 05 2024, 01:31 AM IST

ಕನ್ನಡ ನಾಮಫಲಕ ಹಾಕದವ ವಿರುದ್ಧ ಕ್ರಮಕ್ಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಅಂಗಡಿ ಮುಗ್ಗಟ್ಟು ಸಂಘ, ಸಂಸ್ಥೆ ಹಾಗೂ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳ ಇಂಗ್ಲಿಷ್, ಹಿಂದಿ ಇತರ ಭಾಷೆಗಳಲ್ಲಿ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ನಾಮಫಲಕ ಅಳವಡಿಕೆಗೆ ಕ್ರಮವಹಿಸಬೇಕೆಂದು ಆಗ್ರಹಿಸಿ ಕರವೇ ತಹಸೀಲ್ದಾರಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಕನ್ನಡಪ್ರಭವಾರ್ತೆ ಗುಳೇದಗುಡ್ಡ

ಪಟ್ಟಣದಲ್ಲಿ ಅಂಗಡಿ ಮುಗ್ಗಟ್ಟು ಸಂಘ, ಸಂಸ್ಥೆ ಹಾಗೂ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳ ಇಂಗ್ಲಿಷ್, ಹಿಂದಿ ಇತರ ಭಾಷೆಗಳಲ್ಲಿ ನಾಮಫಲಕಗಳಿವೆ. ಸರ್ಕಾರದ ನಿರ್ದೇಶನದಂತೆ ಶೇ.60ರಷ್ಟು ಕನ್ನಡ ನಾಮಫಲಕ ಇರಬೇಕೆಂಬ ನಿಯಮವಿದ್ದರೂ ಅದನ್ನು ಕೆಲವರು ಅಳವಡಿಸಿಕೊಂಡಿಲ್ಲ. ಎಲ್ಲ ಅಂಗಡಿ, ಕಚೇರಿಗಳ, ಸಂಘ-ಸಂಸ್ಥೆಗಳ ಕನ್ನಡ ನಾಮಫಲಕದಲ್ಲಿ ಕನ್ನಡ ಅಳವಡಿಕೆಗೆ ಕ್ರಮವಹಿಸಬೇಕೆಂದು ಕರವೇ ಅಧ್ಯಕ್ಷ ರವಿ ಅಂಗಡಿ ಆಗ್ರಹಿಸಿದರು.

ಕರವೇ ವತಿಯಿಂದ ಸೋಮವಾರ ತಹಸೀಲ್ದಾರ್‌ ಮನವಿ ಸಲ್ಲಿಸಿ ಮಾತನಾಡಿದ ಅವರು, ಸರ್ಕಾರ ಶೇ.60ರಷ್ಟಾದರೂ ಕನ್ನಡ ನಾಮಫಲಕಗಳು ಇರಬೇಕೆಂದು ಆದೇಶಿಸಿದೆ. ಅದರಂತೆ ಪಟ್ಟಣದಲ್ಲಿ ಕನ್ನಡ ನಾಮಫಲಕ ಹಾಕದವರ ವಿರುದ್ಧ ಕ್ರಮವಹಿಸಿ ಕನ್ನಡದಲ್ಲಿ ನಾಮಫಲಕ ಹಾಕಿಸಬೇಕೆಂದು ಆಗ್ರಹಿಸಿದರು.

ನಗರ ಘಟಕ ಕರವೇ ಅಧ್ಯಕ್ಷ ಶ್ರೀಕಾಂತ ಹುನಗುಂದ ಮಾತನಾಡಿದರು. ಪುರಸಭೆ ಸದಸ್ಯ ವಿನೋದ ಮದ್ದಾನಿ, ಮಲ್ಲು ಹಡಗಲಿ, ಸೋಮು ಕಲಬುರ್ಗಿ,ನಿಂಗರಾಜ್ ಎಣ್ಣಿ, ಸಂಗಪ್ಪ ಚೆಟ್ಟೇರ, ತುಕಾರಾಮ ಮಲಜಿ, ಭೀಮನಗೌಡ ಗೌಡರ ಇದ್ದರು.