ರಾಜ್ಯದಲ್ಲಿ ಮುಂಗಾರು ಮಳೆ ಕ್ಷೀಣಿಸಿದ್ದು, 3 ತಿಂಗಾಳಾದರೂ ಹನಿ ಮಳೆಯೂ ಭೂಮಿಗೆ ಬಿದ್ದಿಲ್ಲ. ಮಳೆ ಬರುತ್ತದೆ ಎಂಬ ನೀರಿಕ್ಷೆಯಲ್ಲಿ ರೈತ ಸಾಲ ಮಾಡಿ ಬಿತ್ತನೆ ಬೀಜ ಖರೀದಿ ಮಾಡಿ ಭೂಮಿಯನ್ನು ಹದ ಮಾಡಿಕೊಂಡು ಮಳೆ ಬರುತ್ತದೆ.
5 ಲಕ್ಷ ರು.ವರೆಗೆ ಸಾಲ ಮನ್ನಾ ಮಾಡಬೇಕೆಂದು ಖಾಲಿ ಬಿಂದಿಗೆಯೊಂದಿಗೆ ರೈತ ಸಂಘ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಬಂಗಾರಪೇಟೆರಾಜ್ಯದ ಬರ ತಾಂಡವಾಡುತ್ತಿರುವುದರಿಂದ ಸಹಕಾರ ಬ್ಯಾಂಕುಗಳಲ್ಲಿ ಪಡೆದಿರುವ 5 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡಬೇಕೆಂದು ರೈತ ಸಂಘದಿಂದ ಖಾಲಿ ಬಿಂದಿಗೆ, ಒಣ ಮೇವು ಸಮೇತ ರೈಲ್ವೆ ನಿಲ್ದಾಣದ ಬಳಿ ಪ್ರತಿಭಟನೆ ಮಾಡಿದರು.
ರಾಜ್ಯದಲ್ಲಿ ಮುಂಗಾರು ಮಳೆ ಕ್ಷೀಣಿಸಿದ್ದು, 3 ತಿಂಗಾಳಾದರೂ ಹನಿ ಮಳೆಯೂ ಭೂಮಿಗೆ ಬಿದ್ದಿಲ್ಲ. ಮಳೆ ಬರುತ್ತದೆ ಎಂಬ ನೀರಿಕ್ಷೆಯಲ್ಲಿ ರೈತ ಸಾಲ ಮಾಡಿ ಬಿತ್ತನೆ ಬೀಜ ಖರೀದಿ ಮಾಡಿ ಭೂಮಿಯನ್ನು ಹದ ಮಾಡಿಕೊಂಡು ಮಳೆ ಬರುತ್ತದೆ. ಬಿತ್ತನೆ ಆಗುತ್ತದೆ, ವರ್ಷದ ಗಂಜಿ ಪಾತ್ರ ತುಂಬುತ್ತದೆ ಎಂಬ ಆಸೆಯಲ್ಲಿದ್ದ ರೈತನ ಬಾಯಿಗೆ ಬರ ಎಂಬ ಹೊಡೆತ ಮಣ್ಣು ಹಾಕಿದ್ದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಾದ ರಾಜ್ಯ ಸರ್ಕಾರ ಬರ ನಿರ್ವಹಣೆಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪ ಮಾಡಿಕೊಂಡು ರೈತರ ಸ್ವಾಭಿಮಾನದ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.ಬರ ಹಾಗೂ ಬೆಳೆ ನಷ್ಟದಿಂದ ತತ್ತರಿಸಿರುವ ರೈತರ ನೆರವಿಗೆ ಸರ್ಕಾರಗಳು ಸ್ಪಂದಿಸಿ 5 ಲಕ್ಷದವರೆಗಿನ ರೈತರ ಸಂಪೂರ್ಣ ಬೆಳೆ ಸಾಲ ಮನ್ನಾ ಮಾಡಬೇಕು. ಬರ ನಿಯಂತ್ರಣಕ್ಕೆ ಬರುವವರೆಗೂ ವಿಬಿ-ರಾಮ್ ಜಿ ಯೋಜನೆಯಲ್ಲಿ ದುಡಿಯುವ ಕೈಗೆ ಕೆಲಸ ನೀಡಿ ಹಳ್ಳಿ ಬಿಟ್ಟು ಗೂಳೆ ತಪ್ಪಿಸಬೇಕು. ಪ್ರತಿ ಹಳ್ಳಿಯಲ್ಲೂ ಕುಡಿಯುವ ನೀರು ಜಾನುವಾರುಗಳಿಗೆ ಮೇವು ಒದಗಿಸಬೇಕು ರೈತರ ಬೆಳೆ ವಿಮೆ ಶೀಘ್ರವಾಗಿ ಬಿಡುಗಡೆ ಮಾಡಬೇಕೆಂದು ಅಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮರಗಲ್ ಶ್ರೀನಿವಾಸ್, ಗಿರೀಶ್, ತಾಲೂಕು ಅಧ್ಯಕ್ಷ ಕದರಿನತ್ತ ಅಪ್ಪೋಜಿರಾವ್, ಮುನಿಕೃಷ್ಣ, ಮುನಿರಾಜು, ವಿಶ್ವ, ಕಿರಣ್, ನಾಗರಾಜ್, ಚಾಂದ್‌ಪಾಷ, ಸಂತೋಷ್ ಗೋವಿಂದಪ್ಪ, ಶೈಲಜ, ರತ್ನಮ್ಮ, ಶೋಭ, ಸುನಿತ, ಚೌಡಮ್ಮ, ಚಂದ್ರಪ್ಪ ಇದ್ದರು.