ಜಾನುವಾರುಗಳಿಗೆ ಉಚಿತ ಮೇವು ನೀಡಲು ಆಗ್ರಹ

| Published : Mar 07 2024, 01:50 AM IST

ಸಾರಾಂಶ

ಬರಗಾಲ, ಉರಿ ಬಿಸಿಲಿ ಹೊಡೆತ ಜನರ ಮೇಲಷ್ಟೇ ಅಲ್ಲದೆ ಜಾನುವಾರಗಳ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಮೇವಿನ ಕೊರತೆಯ ಭೀತಿ ಒಂದು ಕಡೆಯಾದರೆ ಮತ್ತೊಂದೆಡೆ ಖರೀದಿಸೋಣವೆಂದರೆ ದುಬಾರಿ ಹಣ ನೀಡಿದರು ಮೇವು ಸಿಗುತ್ತಿಲ್ಲ. ಹಾಗಾಗಿ ಅನಿವಾರ್ಯವಾಗಿ ರಾಸುಗಳಿಗೆ ಮೇವು ಒದಗಿಸುವಂತೆ ಅಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ತುಮಕೂರು

ಬರಗಾಲ, ಉರಿ ಬಿಸಿಲಿ ಹೊಡೆತ ಜನರ ಮೇಲಷ್ಟೇ ಅಲ್ಲದೆ ಜಾನುವಾರಗಳ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಮೇವಿನ ಕೊರತೆಯ ಭೀತಿ ಒಂದು ಕಡೆಯಾದರೆ ಮತ್ತೊಂದೆಡೆ ಖರೀದಿಸೋಣವೆಂದರೆ ದುಬಾರಿ ಹಣ ನೀಡಿದರು ಮೇವು ಸಿಗುತ್ತಿಲ್ಲ. ಹಾಗಾಗಿ ಅನಿವಾರ್ಯವಾಗಿ ರಾಸುಗಳಿಗೆ ಮೇವು ಒದಗಿಸುವಂತೆ ಅಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಬೆಳ್ಳಾವಿ ಗ್ರಾಮ ಪಂಚಾಯಿತಿ ಮೂಲಕ ತಹಸೀಲ್ದಾರ್ ಮತ್ತು ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ನೀಡಿದ್ದರೂ ಇದುವರೆಗೂ ರಾಸುಗಳಿಗೆ ಮೇವು ಸಿಕಿಲ್ಲ. ಹಾಗಾಗಿ ಬೆಳ್ಳಾವಿ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಗ್ರಾಮಗಳಲ್ಲಿ ಜಾನವಾರುಗಳಿಗೆ ಮೇವಿನ ಕೊರತೆಯು ಅಭಾವವಿದೆ. ಆದ್ದರಿಂದ ತುರ್ತಗಾಗಿ ಜಿಲ್ಲಾಡಳಿತ ಉಚಿತವಾಗಿ ಮೇವು ಒದಗಿಸುವಂತೆ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಒತ್ತಾಯಿಸಲಾ ಯಿತು.

ಜಿಲ್ಲಾಧಿಕಾರಿಗಳ ಕಚೇರಿ ಎದರು ಪ್ರತಿಭಟನೆಯಲ್ಲಿ ಮತನಾಡಿದ ಬೆಳ್ಳಾವಿಯ ರೈತಮುಖಂಡ ಪ್ರಕಾಶ್, ಜಾನುವಾರಗಳಿಗೆ ಮೇವಿಲ್ಲದೆ ಅಡಿಕೆ ಪಟ್ಟೆ ಸಿಗಿದು ಹಾಕಿ ಫೋಷಣೆ ಮಾಡುತ್ತಿದ್ದೇವೆ. ಅದರೆ ಬರದ ಬಗೆಗೆ, ಪರಿಹಾರ, ಪ್ಯಾಕೇಜುಗಳ ಬವಣೆಗಳ ಬಗ್ಗೆ ಮಾತುಗಳಿಗೇನು ಬರವಿಲ್ಲ. ಮೇವಿನ ಅಭಾವಕ್ಕೆ ಪರಿಹಾರ ಎಲ್ಲಿ ಎಂದು ಪ್ರಶ್ನಿಸಿದರು.

ಕೆ.ಪಿ.ಆರ್.ಎಸ್ ನ ಕಾರ್ಯದರ್ಶಿ ಬಸವರಾಜು ಮಾತನಾಡಿ, ಮೇವಿನ ದರ ದುಬಾರಿಯಾಗಿದೆ ಮೇವು ಉತ್ಪನ್ನ ಬೇಳೆ ಇಲ್ಲದೆ ರೈತು ದುಬಾರಿ ದರಕ್ಕೆ ಕಂಗೆಟ್ಟು ಹೋಗಿದ್ದು, ಸರ್ಕಾರ ಕೂಡಲೆ ಉಚಿತವಾಗಿ ಮೇವು ವಿತರಣೆಗೆ ಕ್ರಮವಹಿಸಬೇಕೆಂದು ಅಗ್ರಹಿಸಿದರು.

ಕೆ.ಪಿ.ಆರ್.ಎಸ್‌ಜಿಲ್ಲಾ ಉಪಾಧ್ಯಕ್ಷ ಬಿ.ಉಮೇಶ್ ಮತನಾಡಿ, ಚುನಾವಣೆಗಳು ಬರುತ್ತಿವೆ ಹಣ, ಜಾತಿ, ಮತಧರ್ಮದ ಅಮಲನ್ನೇರಿಸಿ ಬಡವರ ಬದುಕನ್ನು ಕಿತು ತಿನ್ನುವ ಕೇಂದ್ರ ಸರ್ಕಾರ ರೈತರ ಆದಾಯ ದುಪ್ಪಟು ಮಾಡುತೇವೆ ಎಂದು ಹೇಳಿತ್ತು. ಅಧಿಕಾರಕ್ಕೆ ಬಂದ ಮೇಲೆ ಎಂ.ಎಸ್. ಸ್ವಾಮಿನಾಥನ್ ರವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಅವರು ವರದಿ ಮೂಲೆಗುಂಪು ಮಾಡಿತು. ಕೇಂದ್ರ ಸರ್ಕಾರಕ್ಕೆ ರೈತರ ಮೇಲೆ ಎಷ್ಟು ಕಾಳಜಿ ಇದೆ ಎಂದು ಈಗ ರೈತರ ನ್ಯಾಯುತವಾಗಿ ಪ್ರತಿಭಟನೆ ನಡೆಸುವವರ ಮೇಲೆ ಮೊಳೆ ,ಟಿಯರ್ ಗ್ಯಾಸ್‌ ಬಳಸುವ ಮೂಲಕ ದಾಳಿ ಮಾಡುತ್ತದೆ ಎಂದರು.

ಸಿಪಿಐ(ಎಂ)ನ ರಾಜ್ಯ ಕಾರ್ಯದರ್ಶಿ ಸೈಯದ್‌ಮುಜೀಬ್, ಮತನಾಡಿ ಬರಪರಿಹಾಕ್ಕೆ ಕೇಂದ್ರ ತಂಡ ಬಂದು ಸಮಿಕ್ಷೆ ನಡೆಸಿ ರಾಜ್ಯದಲ್ಲಿ 196 ತಾಲೂಕುಗಳು ತೀವ್ರ ಬರಗಾಲ ತಾಲೂಕುಗಳೆಂದು ತಿಳಿಸಿದೆ. ಕೇಂದ್ರರ ಸರ್ಕಾರ ರಾಜಕೀಯ ಕಾರಣಕ್ಕೆ ರಾಜ್ಯಕ್ಕೆ ಅನುದಾನ ನೀಡದೆ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದರು.

ಅಪರ ಜಿಲ್ಲಾಧಿಕಾರಿಗಳು ಮನವಿ ಸ್ವೀಕರಿಸಿ ನಾಳೆಯೆ ಕೇಂದ್ರ ತಂಡವನ್ನು ಕಳಿಸಿ ಸಮಸ್ಯೆ ಬಗೆಹರಿಸುವಾಗಿ ತಿಳಿಸಿದರು. ಪ್ರತಿಭಟನೆಯಲ್ಲಿ ಸಿ.ಅಜ್ಜಪ್ಪ ಗೌರಮ್ಮ ಪವಿತ್ರ ಮಾತನಾಡಿದರು. ದ್ರಾಕ್ಷಯಣಮ್ಮ,ರಾಮಣ್ಣ, ,ದೇವರಜು, ಜಯಮ್ಮ, ಗುರುಸಿದ್ದಯ್ಯಂಜಿನಪ್ಪ, ರಾಜೇಶ್ ಲಕ್ಷ್ಮಯ್ಯ, ,ನಾಗರಾಜು ಮುಂತಾದವರು ಭಾಗವಹಿಸಿದ್ದರು.