ಸಾರಾಂಶ
ನಮ್ಮ ಸಣ್ಣಪುಟ್ಟ ಸಮಸ್ಯೆಗಳನ್ನು ಬದಿಗಿಟ್ಟು ರಾಜ್ಯಾದ್ಯಂತ ಸಂಘಟಿತರಾಗಿ ಹೋರಾಡಿದರೆ ಮಾತ್ರ ಸರ್ಕಾರ ನಮ್ಮನ್ನು ಪರಿಗಣಿಸುತ್ತದೆ ಎಂದು ರಾಜ್ಯ ಫೋಟೋಗ್ರಾಫರ್, ವಿಡಿಯೋ ಗ್ರಾಫರ್‌ಗಳ ಸಂಘದ ಅಧ್ಯಕ್ಷ ನಾಗೇಶ್ ಹೇಳಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ ನಮ್ಮ ಸಣ್ಣಪುಟ್ಟ ಸಮಸ್ಯೆಗಳನ್ನು ಬದಿಗಿಟ್ಟು ರಾಜ್ಯಾದ್ಯಂತ ಸಂಘಟಿತರಾಗಿ ಹೋರಾಡಿದರೆ ಮಾತ್ರ ಸರ್ಕಾರ ನಮ್ಮನ್ನು ಪರಿಗಣಿಸುತ್ತದೆ ಎಂದು ರಾಜ್ಯ ಫೋಟೋಗ್ರಾಫರ್, ವಿಡಿಯೋ ಗ್ರಾಫರ್‌ಗಳ ಸಂಘದ ಅಧ್ಯಕ್ಷ ನಾಗೇಶ್ ಹೇಳಿದರು.
ನಗರದ ಸೂರ್ಯೋದಯ ಕಲ್ಯಾಣ ಮಂಟಪದಲ್ಲಿ ನಡೆದ ಜಿಲ್ಲಾ ಫೋಟೋಗ್ರಾಫರ್, ವಿಡಿಯೋ ಗ್ರಾಫರ್‌ಗಳ ನೂತನ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಮತ್ತು ರಾಜ್ಯ ಮಟ್ಟದಲ್ಲಿ ಮಂದಿನ ದಿನಗಳಲ್ಲಿ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳ ಕುರಿತ ಸಭೆಯಲ್ಲಿ ಮಾತನಾಡಿದರು.ಸರ್ಕಾರ ನಮ್ಮನ್ನು ಪ್ರವರ್ಗ ೪೨ರ ಅಡಿಯಲ್ಲಿ ಸೇರಿಸಿದೆ ಆದರೆ ಯಾವ ಸೌಲಭ್ಯಗಳನ್ನು ನೀಡಿಲ್ಲ. ಈ ಬಗ್ಗೆ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿದರು ಪ್ರಯೋಜನವಾಗಿಲ್ಲ, ಎಂದರು.
ರಾಜ್ಯಾದ್ಯಂತ ಸಂಘದ ಸದಸ್ಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಕೊರೋನಾ ಸಂಧರ್ಭದಲ್ಲಂತೂ ನಾವು ಜೀವನ ನಡೆಸುವುದೇ ಕಷ್ಟವಾಗಿತ್ತು, ಆ ಸಮಯದಲ್ಲೂ ಸರ್ಕಾರ ನಮ್ಮನ್ನು ಪರಿಗಣಿಸಲಿಲ್ಲ, ಸರ್ಕಾರದ ಅನೇಕ ಯೋಜನೆಗಳು ಮತ್ತು ಕಾರ್ಯಕ್ರಮಗಳಿಗೆ ಫೋಟೋ ಮತ್ತು ವಿಡಿಯೋಗಳಿಗಾಗಿ ಸಂಘವನ್ನು ಪರಿಗಣಿಸದೇ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ತಮ್ಮ ಮೊಬೈಲ್‌ಗಳನ್ನೇ ಉಪಯೋಗಿಸಿ ಕಾರ್ಯಕ್ರಮ ಮಾಡುತ್ತಾರೆ ಈ ಬಗ್ಗೆ ನಾವು ತಾಲೂಕು ಮಟ್ಟದಿಂದ ಹಿಡಿದು ರಾಜ್ಯ ಮಟ್ಟದವರೆಗೆ ಸಭೆ ನಡೆಸಿ, ಸರ್ಕಾರದ ಗಮನಕ್ಕೆ ತರಬೇಕಾಗಿದೆ ಎಂದರು.ಸೆಪ್ಟೆಂಬರ್‌ನಲ್ಲಿ ತುಮಕೂರಿನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಬೇಕಾಗಿದೆ, ಸುಮಾರು ೨ವರೆ ಲಕ್ಷ ಮಂದಿ ಈ ಸಮಾವೇಶದಲ್ಲಿ ಭಾಗವಹಿಸಬೇಕಾಗಿದೆ. ಇದರ ಪೂರ್ವ ಸಭೆ ಮತ್ತು ಮುಂದಿನ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲು ಮಾ. ೧೧ ರಂದು ಬೆಂಗಳೂರಿನಲ್ಲಿ ಎಲ್ಲಾ ಜಿಲ್ಲಾಧ್ಯಕ್ಷರ ಮತ್ತು ಪದಾಧಿಕಾರಿಗಳ ಸಭೆಯನ್ನು ಕರೆಯಲಾಗಿದೆ, ಯಾರು ತಪ್ಪಿಸಿಕೊಳ್ಳದೆ ಸಭೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ನೂತನ ಜಿಲ್ಲಾಧ್ಯಕ್ಷ ಮೂಡ್ಲುಪುರ ಮಂಜೇಶ್ ಮಾತನಾಡಿ, ಸಂಘವನ್ನು ಸಕ್ರೀಯಗೊಳಿಸಬೇಕಾಗಿದೆ, ಜಿಲ್ಲೆಯಲ್ಲೂ ಸದಸ್ಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ರಾಜ್ಯ ಸಂಘದ ಸಲಹೆ ಸೂಚನೆಗಳನ್ನು ಪಡೆದು, ಹೋರಾಟಗಳನ್ನು ರೂಪಿಸಿ ಸರ್ಕಾರದ ಸೌಲಭ್ಯಗಳನ್ನು ಪಡೆಯುವತ್ತ ಚಿಂತನೆ ನಡೆಸೋಣ ಎಂದರು.ನೂತನ ಪದಾಧಿಕಾರಿಗಳು
ಗೌರವಾಧ್ಯಕ್ಷರಾಗಿ ಹಿರಿಯ ಗಣೇಶ್‌ದೀಕ್ಷಿತ್, ಅಧ್ಯಕ್ಷರಾಗಿ ಮೂಡ್ಲುಪುರ ಮಂಜೇಶ್ ಉಪಾಧ್ಯಕ್ಷರಾಗಿ ಕೊಳ್ಳೇಗಾಲದ ಷಣ್ಮುಗಸ್ವಾಮಿ, ಗುಂಡ್ಲುಪೇಟೆಯ ಕೆಂಡಗಣ್ಣಸ್ವಾಮಿ, ಹನೂರಿನ ವೆಂಕಟಚಲಾ, ಕಾರ್ಯದರ್ಶಿ ಪ್ರವೀಣ್, ಸಹಕಾರ್ಯದರ್ಶಿಗಳಾಗಿ ಕುಮಾರ್ ಮಾಂಬಳ್ಳಿ, ರಂಗಸ್ವಾಮಿ ಯಳಂದೂರು, ಮಹದೇವಶೆಟ್ಟಿ ಗುಂಡ್ಲುಪೇಟೆ, ಖಜಾಂಚಿ ಶಿವಕುಮಾರ್, ಸಂಘಟನಾ ಕಾರ್ಯದರ್ಶಿಯಾಗಿ ಹನೂರು ಗುರುಪ್ರಸಾದ್, ಚಾಮರಾಜನಗರ ಎಂ.ಸಿ.ಸ್ವಾಮಿ, ಲೆಕ್ಕಪರಿಶೋಧಕರಾಗಿ ಉಮ್ಮತ್ತೂರು ಚಂದ್ರು, ನಿರ್ದೇಶಕರಾಗಿ ಶ್ರೀಕಾಂತ್, ಸ್ಟಾಲಿನ್ ಕುಮಾರ್, ಚಂದ್ರು, ಬಸವ, ಶಂಕರ್, ಮಹೇಶ್, ರೋಷನ್‌ಕುಮಾರ್, ರಮೇಶ್, ಪದಗ್ರಹಣ ಮಾಡಿದರು. ಈ ವೇಳೆ ಪಳನಿಸ್ವಾಮಿ, ರಾಜ್ಯ ಸಂಘದ ರವಿಶಂಕರ್, ಸುಂದರ್, ಫಾರೂಕ್, ಸುರೇಶ್, ನಾಗೇಂದ್ರ, ಯಳಂದೂರು ಕೃಷ್ಣ ಉಪಸ್ಥಿತರಿದ್ದರು. ಚಾಮರಾಜನಗರ ತಾಲೂಕು ಅಧ್ಯಕ್ಷ ಡಿ. ಸ್ವಾಮಿ, ಕಾರ್ಯದರ್ಶಿ ಲೋಕೇಶ್ ಮೂರ್ತಿ, ತಾಲೂಕು ಘಟಕಗಳ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ್ದರು.