ಸಿ‌ಎಂ ವಿರುದ್ಧ ಜಯಮೃತ್ಯುಂಜಯ ಸ್ವಾಮೀಜಿ ಕಿಡಿ

| Published : Mar 07 2024, 01:50 AM IST

ಸಿ‌ಎಂ ವಿರುದ್ಧ ಜಯಮೃತ್ಯುಂಜಯ ಸ್ವಾಮೀಜಿ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ಲಿಂಗಾಯತರ ವಿಚಾರದಲ್ಲಿ ಕಾಂಗ್ರೇಸ್ ಸರ್ಕಾರಕ್ಕೆ ಕಿಂಚಿತ್ತು‌ ಸೌಜನ್ಯ ಇಲ್ಲವೆಂದು ಸಿ‌ಎಂ ಸಿದ್ದರಾಮಯ್ಯ ವಿರುದ್ಧ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಕಿಡಿ ಕಾರಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಲಿಂಗಾಯತರ ವಿಚಾರದಲ್ಲಿ ಕಾಂಗ್ರೇಸ್ ಸರ್ಕಾರಕ್ಕೆ ಕಿಂಚಿತ್ತು‌ ಸೌಜನ್ಯ ಇಲ್ಲವೆಂದು ಸಿ‌ಎಂ ಸಿದ್ದರಾಮಯ್ಯ ವಿರುದ್ಧ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಕಿಡಿ ಕಾರಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು ಸರ್ಕಾರದ ವಿರುದ್ಧ ಪಂಚಮಸಾಲಿಯ ಜಯಮೃತ್ಯುಂಜಯ ಸ್ವಾಮೀಜಿ ವಾಗ್ದಾಳಿ ನಡೆಸಿದರು.

ಸಿಎಂ ಸಿದ್ದರಾಮಯ್ಯ ಅವರ ಮೇಲೆ ಸಾಕಷ್ಟು ನಂಬಿಕೆ ಇತ್ತು, ಕೊನೆ ಪಕ್ಷ ಕರೆದು ಮಾತನಾಡುತ್ತೆನೆ ಎಂದು ಭರವಸೆಯನ್ನು ಕೊಟ್ಟಿದ್ದರು, ಆದ್ರು ಕರೆಯಲಿಲ್ಲ. ಲಿಂಗಾಯತ ದಿಕ್ಷ ಪಂಚಮಸಾಲಿ‌ 2ಎ ಮೀಸಲಾತಿ ಗೆ ಹಿಂದೇಟು‌ ಹಾಕ್ತಿದೆ ಯಾಕೆಂದು ಖಾರವಾಗಿ ಪ್ರಶ್ನಿಸಿದರು.

ನಡು ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ‌ ತಡೆದು ಲಿಂಗಪೂಜೆ‌ ಮಾಡಿಕೊಂಡು ಪ್ರತಿಭಟನೆ‌ ಮಾಡಿದ್ರು ಕ್ಯಾರೆ ಎನ್ನಲಿಲ್ಲ ಎಂದು ಅಸಮಾಧಾನ ಹೊರಹಾಕಿದ ಗುರುಗಳು ಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯ ಕಾಂಗ್ರೇಸ್ ಸರ್ಕಾರಕ್ಕೆ ಪಾಠ ಕಲಿಸುವ ಎಚ್ಚರಿಕೆ ಕೂಡಾ ನೀಡಿದರು.

ಲಿಂಗಾಯತ ಶಾಸಕರುಗಳು ಮಾತನಾಡಿದ್ರು‌ ಮನವಿ ಮಾಡಿದರು‌ ಸ್ಪಂದನೆ‌ ಇಲ್ಲ. ಸಿದ್ದರಾಮಯ್ಯ ಸರ್ಕಾರಕ್ಕೆ ಸೌಜನ್ಯತೆ ಇಲ್ಲಾ . ಬಸವಣ್ಣ ಅವರಿಗೆ ಸಾಂಸ್ಕ್ರತಿಕ ನಾಯಕ ಎಂದು ಘೋಷಣೆ ಮಾಡಿದ್ರಿ, ಆದ್ರೆ ಮಿಸಲಾತಿಗೆ ಸ್ಪಂದನೆ ನೀಡ್ತಿಲ್ಲ. ಇದು ನಮ್ಮಲ್ಲಿ‌ ಅಸಮಾಧಾನ‌ ಇದೆ, ಈಗಲೇ ಎಚ್ಚತ್ತುಕೊಳ್ಳಿ ಎಂದು ರಾಜ್ಯ ಸರ್ಕಾರಕ್ಕೆ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಕಲಬುರಗಿಯಲ್ಲಿ ಪಂಚಮಸಾಲಿ ದೀಕ್ಷಾ ಲಿಂಗಾತಿಯರ ಸಮಾವೇಶ: 2ಎ ಹಾಗೂ ಓಬಿಸಿ ಮೀಸಲಾತಿ ಶಫಾರಸು ಮಾಡುವಂತೆ ರಾಜ್ಯ ಸರಕಾರಕ್ಕೆ ಹಕ್ಕೊತ್ತಾಯ ಮಾಡಲು ಮಾ.12ರಂದು ಶರಣರ ನಾಡು ಕಲಬುರಗಿಯಲ್ಲಿ ಕಲ್ಯಾಣ ನಾಡಿನ ರಾಜ್ಯ ಮಟ್ಟದ ಪ್ರಥಮ ಪಂಚಮಸಾಲಿ ದೀಕ್ಷಾ ಲೀಂಗಾಯಿತರ ಬೃಹತ್‌ ಸಮಾವೇಶ ನಡೆಸಲಾಗುತ್ತದೆ. ಜಯ ಮೃತ್ಯಂಜಯ ಸ್ವಾಮೀಜಿ ನೇತೃತ್ವದ ಸಮಾವೇಶದಲ್ಲಿ ರಾಜಕೀಯ ನಾಯಟಕು, ಸಮಾಜ ಮುಖಂಡರು ಪಾಲ್ಗೊಳ್ಳುತ್ತಿದ್ದಾರೆ. ಲೋಕಸಮರಕ್ಕೂ ಮುನ್ನವೇ ಮೀಸಲಾತಿ ಶಿಫಾರಸಿಗೆ ಆಗ್ರಹಿಸಿಯೇ ಈ ಸಮಾವೇಶ ಕಲಬುರಗಿಯಲ್ಲಿ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ನಡೆಸಲಾಗುತ್ತಿದೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಅರುಣ ಕುಮಾರ್‌ ಪಾಟೀಲ್‌ ಕೊಡ್ಲಹಂಗರಗಾ, ಶರಣು ಪಪ್ಪಾ, ಉಪ ಮಹಾಪೌರ ಶಿವಾನಂದ ಪಿಸ್ತಿ ಸುದ್ದಿಗೋಷ್ಠಿಯಲ್ಲಿ ಸ್ವಾಮೀಜಿಗಳ ಜೊತೆಗಿದ್ದರು.