ಬೆಳ್ಳುಬ್ಬಿಗೆ ಎಂಎಲ್‌ಸಿ ಟಿಕೆಟ್ ನೀಡಲು ಆಗ್ರಹ

| Published : May 22 2024, 12:51 AM IST

ಸಾರಾಂಶ

ಶಾಸಕರ ಮೂಲಕ ನೇಮಕವಾಗುವ ವಿಧಾನ ಪರಿಷತ್ ಸದಸ್ಯರ 11 ಸ್ಥಾನಗಳಿಗೆ ಚುನಾವಣಾ ಆಯೋಗ ಜೂ.13ರಂದು ಚುನಾವಣೆ ಘೋಷಿಸಿದ್ದು, ಬಿಜೆಪಿಯಿಂದ ಮಾಜಿ ಸಚಿವ, ರಾಜ್ಯ ಗಾಣಿಗ ಸಮುದಾಯದ ಪ್ರಭಾವಿ ನಾಯಕ ಎಸ್.ಕೆ.ಬೆಳ್ಳುಬ್ಬಿ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕೆಂದು ಕೊಲ್ಹಾರ ದಿಗಂಬರೇಶ್ವರ ಸಂಸ್ಥಾನ ಮಠದ ಕಲ್ಲಿನಾಥ ಮಹಾಸ್ವಾಮೀಜಿ ಬಿಜೆಪಿ ವರಿಷ್ಠರಿಗೆ ಒತ್ತಾಯಿಸಿದರು.

ವಿಜಯಪುರ: ಶಾಸಕರ ಮೂಲಕ ನೇಮಕವಾಗುವ ವಿಧಾನ ಪರಿಷತ್ ಸದಸ್ಯರ 11 ಸ್ಥಾನಗಳಿಗೆ ಚುನಾವಣಾ ಆಯೋಗ ಜೂ.13ರಂದು ಚುನಾವಣೆ ಘೋಷಿಸಿದ್ದು, ಬಿಜೆಪಿಯಿಂದ ಮಾಜಿ ಸಚಿವ, ರಾಜ್ಯ ಗಾಣಿಗ ಸಮುದಾಯದ ಪ್ರಭಾವಿ ನಾಯಕ ಎಸ್.ಕೆ.ಬೆಳ್ಳುಬ್ಬಿ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕೆಂದು ಕೊಲ್ಹಾರ ದಿಗಂಬರೇಶ್ವರ ಸಂಸ್ಥಾನ ಮಠದ ಕಲ್ಲಿನಾಥ ಮಹಾಸ್ವಾಮೀಜಿ ಬಿಜೆಪಿ ವರಿಷ್ಠರಿಗೆ ಒತ್ತಾಯಿಸಿದರು.

ನಗರದಲ್ಲಿ ಮಂಗಳವಾರ ಗಾಣಿಗ ಸಮುದಾಯದ ಜಿಲ್ಲಾ ನಾಯಕರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಕಲ್ಲಿನಾಥ ಸ್ವಾಮೀಜಿ ಮಾತನಾಡಿದರು.ಗಾಣಿಗ ಸಮಾಜದ ಹಿರಿಯ ನಾಯಕ ಹೆಚ್.ಆರ್. ಉಟಗಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಗಾಣಿಗರು ನೂರಕ್ಕೆ ತೊಂಬತ್ತರಷ್ಟು ಬಿಜೆಪಿಗೆ ಬೆಂಬಲಿಸಿದ್ದಾರೆ. ಚುನಾವಣೆ ಘೋಷಣೆಯಾಗಿರುವ 11 ಎಂಎಲ್‌ಸಿ ಸ್ಥಾನಗಳಲ್ಲಿ ಬಿಜೆಪಿಗೆ ಸುಲಭವಾಗಿ ಮೂರು ಸ್ಥಾನಗಳು ಸಿಗಲಿದ್ದು, ಅದರಲ್ಲಿ ಒಂದು ಸ್ಥಾನಕ್ಕೆ ನಮ್ಮ‌ ನಾಯಕ ಎಸ್.ಕೆ.ಬೆಳ್ಳುಬ್ಬಿಯವರಗೆ ನೀಡಬೇಕೆಂದು ಹೆಚ್.ಆರ್.ಉಟಗಿ ಆಗ್ರಹಿಸಿದರು. ಈ ವೇಳೆ ಬಿಜೆಪಿ ಮುಖಂಡರಾದ ಪ್ರಕಾಶ ಹಿಟ್ನಳ್ಳಿ, ಶರಣು ಕಾಖಂಡಕಿ, ಬಸವರಾಜ ಹಳ್ಳಿ, ಆನಂದ ಬಿಸ್ತಗೊಂಡ, ಸಂತೋಷ ಕಕ್ಕಳಮೇಲಿ, ಹುಚ್ಚಪ್ಪ ಬಾಟಿ, ಶ್ರೀಮಂತ ಹಂಗರಗಿ, ಮಂಜುನಾಥ ತುಂಬರಮಟ್ಟಿ ಸೇರಿದಂತೆ ಹಲವು ಪ್ರಮುಖರಿದ್ದರು.