ಚಿಕ್ಕಮಗಳೂರುಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂಘಟನೆ ಬಗ್ಗೆ ಪ್ರಚೋದಕಾರಿ ಹೇಳಿಕೆ ನೀಡಿರುವ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ಕಾನೂನು ಕ್ರಮ ಕೈಗೊಂಡು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಮುಖಂಡರು ಗುರುವಾರ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರಕುಮಾರ್ ದಯಾಮ ಅವರಿಗೆ ಮನವಿ ಸಲ್ಲಿಸಿದರು.
- ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರಕುಮಾರ್ ದಯಾಮಗೆ ಮನವಿ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂಘಟನೆ ಬಗ್ಗೆ ಪ್ರಚೋದಕಾರಿ ಹೇಳಿಕೆ ನೀಡಿರುವ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ಕಾನೂನು ಕ್ರಮ ಕೈಗೊಂಡು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಮುಖಂಡರು ಗುರುವಾರ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರಕುಮಾರ್ ದಯಾಮ ಅವರಿಗೆ ಮನವಿ ಸಲ್ಲಿಸಿದರು.
ಅಸ್ಸಾಂ ಚುನಾವಣಾ ಭಾಷಣದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ್ನು ವಿಷ ಸರ್ಪವೆಂದು ಹೇಳಿದ್ದಾರೆ. ಕುರಾನ್‌ನಲ್ಲಿ ಹೇಳಿದಂತೆ ನಮಾಜ್ ಮಾಡುವ ವೇಳೆ ವಿಷಸರ್ಪ ಕಂಡರೆ ಕೊಲ್ಲದಿದ್ದರೆ ಬದುಕು ವುದಿಲ್ಲ ಎಂಬ ಪ್ರಚೋದಕಾರಿ ಹೇಳಿಕೆ ನೀಡಿದ್ದಾರೆ ಎಂದು ಯುವಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ದೂರಿದರು.ಧಾರ್ಮಿಕ ಮತ್ತು ಸಮುದಾಯಗಳ ನಡುವಿನ ಸೌಹಾರ್ದತೆಗೆ ಸಂಬಂಧಿಸಿದ ಕಾನೂನಿನಲ್ಲಿ ವಿವಿಧ ಧರ್ಮ, ಜನಾಂಗ, ಭಾಷೆ, ಪ್ರಾದೇಶಿಕ ಗುಂಪುಗಳ ಅಥವಾ ಸಮುದಾಯಗಳ ನಡುವೆ ದ್ವೇಷ, ಹಗೆತನ, ಕೆಟ್ಟ ಭಾವನೆ ಉತ್ತೇಜಿಸುವುದನ್ನು ನಿಷೇಧಿಸುತ್ತದೆ. ಈ ಹಿಂಸಾಚಾರವನ್ನು ಪ್ರಚೋದಿಸುವ ಅಥವಾ ಸಾರ್ವಜನಿಕ ಶಾಂತಿಗೆ ಭಂಗ ತರುವ ಕೃತ್ಯವಾಗಿದೆ ಎಂದು ಆರೋಪಿಸಿದರು.ಮಲ್ಲಿಕಾರ್ಜುನ್ ಖರ್ಗೆಯವರು ಇಸ್ಲಾಂ ಪವಿತ್ರ ಗ್ರಂಥವಾದ ಕುರಾನ್ ಉಲ್ಲೇಖಿಸಿ ಹತ್ಯೆ ಮಾಡುವುದು ನ್ಯಾಯ ಎಂದಿರುವುದು ಸಮುದಾಯದ ಮೂಲಭೂತವಾದಿಗಳಿಗೆ ಇದರಿಂದ ಹತ್ಯೆ ಮಾಡಲು ಉತ್ತೇಜನ ನೀಡಿದಂತಾಗಿದೆ. ಈ ಪ್ರಚೋದನೆ ಹೇಳಿಕೆ ಪರಿಣಾಮ ಉಂಟಾಗಿರುವ ಸೂಕ್ಷ್ಮ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಂಘ-ಪರಿವಾರದ ಕಾರ್ಯಕರ್ತರನ್ನು ರಕ್ಷಿಸುವ ವ್ಯವಸ್ಥೆ ಪೊಲೀಸ್ ಇಲಾಖೆ ವಹಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಚಿನ್‌ಗೌಡ, ಉಪಾಧ್ಯಕ್ಷೆ ಅಂಕಿ ತಾ, ಕಾರ್ಯದರ್ಶಿ ಗಳಾದ ರಾಜೇಶ್, ಪುನೀತ್, ನಗರ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಗೌತ ಮ್, ಕಾರ್ತಿಕ್, ಉಪಾಧ್ಯಕ್ಷ ತಿಲಕ್, ಮುಖಂಡರುಗಳಾದ ಪಾರ್ತಿಬನ್, ನವೀನ್, ಮಧು, ಪ್ರಶಾಂತ್ ಹಾಜರಿದ್ದರು.