ರಸ್ತೆಗೆ ಪುನೀತ್‌ ಹೆಸರು ನಾಮಕರಣಕ್ಕೆ ಒತ್ತಾಯ: ಬೂದಿಬೆಟ್ಟ ವೀರಾಂಜನೆಯ

| Published : Nov 20 2024, 12:32 AM IST

ರಸ್ತೆಗೆ ಪುನೀತ್‌ ಹೆಸರು ನಾಮಕರಣಕ್ಕೆ ಒತ್ತಾಯ: ಬೂದಿಬೆಟ್ಟ ವೀರಾಂಜನೆಯ
Share this Article
  • FB
  • TW
  • Linkdin
  • Email

ಸಾರಾಂಶ

ಶಾಸಕರಾದ ಎಚ್‌.ವಿ. ವೆಂಕಟೇಶ್ ಹಾಗೂ ಮಾಜಿ ಸಚಿವ ಶ್ರೀ ವೆಂಕಟರಮಣಪ್ಪ ಅವರನ್ನು ಪಾವಗಡ ತಾಲೂಕು ಆರ್ಯ ಈಡಿಗ ಸಮಾಜದ ಮುಖಂಡರು ಸನ್ಮಾನಿಸಿದರು.

ಕನ್ನಡಪ್ರಭ ವಾರ್ತೆ ಪಾವಗಡ

ಶಾಸಕರಾದ ಎಚ್‌.ವಿ. ವೆಂಕಟೇಶ್ ಹಾಗೂ ಮಾಜಿ ಸಚಿವ ಶ್ರೀ ವೆಂಕಟರಮಣಪ್ಪ ಅವರನ್ನು ತಾಲೂಕು ಆರ್ಯ ಈಡಿಗ ಸಮಾಜದ ಮುಖಂಡರು ಸನ್ಮಾನಿಸಿದರು. ಈ ವೇಳೆ ಮಾತನಾಡಿದ ಮುಖಂಡರು. ಜನಸಂಖ್ಯೆಯಲ್ಲಿ ಕಡಿಮೆ ಇರುವ ಆರ್ಯ ಈಡಿಗ ಸಮಾಜವನ್ನು ಗುರುತಿಸಿ ಪುರಸಭೆಗೆ ಸಮಾಜದ ಮುಖಂಡ ಎಸ್.ಎ.ಗಂಗಾಧರ್ ಅವರನ್ನು ನಾಮಿನಿ ಸದಸ್ಯರನ್ನಾಗಿ ನೇಮಿಸಿದ್ದಕ್ಕೆ ಕೃತಜ್ಞತಾ ಪೂರ್ವಕವಾಗಿ ಈ ಸನ್ಮಾನ ಮಾಡಲಾಗಿದೆ ಎಂದರು.

ಈ ವೇಳೆ ತಾಲೂಕು ಆರ್ಯ ಈಡಿಗ ಸಂಘದ ಅಧ್ಯಕ್ಷರಾದ ಬೂದಿಬೆಟ್ಟ ವೀರಾಂಜನೆಯ ಮಾತನಾಡಿ, ಆರ್ಯ ಈಡಿಗ ಸಮಾದವನ್ನು ಗಂಭೀರವಾಗಿ ಪರಿಗಣಿಸಿ, ಪಟ್ಟಣದಲ್ಲಿರುವ ಸಮುದಾಯ ಭವನದ ಬಳಿ ವಸತಿ ಗೃಹದ ನಿರ್ಮಾಣಕ್ಕೆ 10 ಲಕ್ಷ ಅನುದಾನ ಕಲ್ಪಿಸಿದ ಶಾಸಕರಿಗೆ ಧನ್ಯವಾದ ಅರ್ಪಿಸಲಿದ್ದೇವೆ, ಆರ್ಯ ಈಡಿಗ ಸಮಾಜದ ವತಿಯಿಂದ ಪಟ್ಟಣದ ಚಳ್ಳಕರೆ ಕ್ರಾಸ್‌ ಬಳಿಯ ರಸ್ತೆಗೆ ಪುನೀತ್‌ ರಾಜ್‌ಕುಮಾರ್‌ ಹೆಸರು ನಾಮಕರಣ ಹಾಗೂ ವೃತ್ತದಲ್ಲಿ ಪುನೀತ್‌ ಅವರ ಪುತ್ಥಳಿ ಅನಾವರಣಕ್ಕೆ ಜಾಗ ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದೇವೆ. ಕೂಡಲೇ ಚಳ್ಳಕರೆ ವೃತ್ತದಲ್ಲಿ ಪುನೀತ್‌ ರಾಜ್‌ಕುಮಾರ್‌ ಹೆಸರು ನಾಮಕರಣ ಹಾಗೂ ಪುತ್ಥಳಿ ಅನಾವರಣಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಶಾಸಕ ಎಚ್‌.ವಿ.ವೆಂಕಟೇಶ್‌ ಅವರಲ್ಲಿ ಮನವಿ ಮಾಡಿದರು.

ತಾಲೂಕು ಆರ್ಯ ಈಡಿಗ ಸಮಾಜದ ಹಿರಿಯ ಮುಖಂಡರಾದ ರಾಮಪ್ಪ, ರಾಮಾಂಜನೇಯಲು, ಅಶೋಕ್‌,ಅಂಜನೇಯಲು,ಮೂರ್ತಿ ರವಿಕುಮಾರ್‌ ಅಂಜಿಗೌಡ,ನಾರಾಯಣಪ್ಪ ಸದಸ್ಯ ಥಿಯೇಟರ್‌ ಗಂಗಾಧರ್‌,ಅಶ್ವತ್ಥಪ್ಪ,ನಾಗಭೂಷಣಪ್ಪ,ಮಂಜುನಾಥ್‌ ಪಾಂಡುರಂಗಪ್ಪ ಹಾಗೂ ಇತರೆ ಅನೇಕ ಮಂದಿ ಆರ್ಯ ಈಡಿಗ ಸಮಾಜದ ಮುಖಂಡರು,ಕಾರ್ಯಕರ್ತರು ಇದ್ದರು.