ಸಾರಾಂಶ
ಪಿಂಜಾರ್ ಅಭಿವೃದ್ಧಿ ನಿಗಮಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಪಿಂಜಾರ್ ಸಮುದಾಯದ ಮುಖಂಡರು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಪಿಂಜಾರ್ ಅಭಿವೃದ್ಧಿ ನಿಗಮಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪಿಂಜಾರ್/ನದಾಫ್ ಸಮುದಾಯದ ಮುಖಂಡರು ಆಗ್ರಹಿಸಿದರು.ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಅವರು, ರಾಜ್ಯದಲ್ಲಿ 25ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಪಿಂಜಾರ್ ಸಮುದಾಯವು ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಔದ್ಯೋಗಿಕ, ರಾಜಕೀಯ ಸೇರಿ ಹಲವು ರಂಗಗಳಲ್ಲಿ ಅತ್ಯಂತ ಹಿಂದುಳಿದಿದೆ. ಈ ಸಮುದಾಯ ಇಸ್ಲಾಂ ಧರ್ಮದ ಮುಸ್ಲಿಂ ಪಂಗಡದಲ್ಲಿದ್ದು, ಹಿಂದುಳಿದ ವರ್ಗಗಗಳ ಉಪಜಾತಿಯ ಪ್ರವರ್ಗ-1ರ ಮೀಸಲಾತಿ ಹೊಂದಿದೆ.
ಹೊಸ ಸರ್ಕಾರ ಬಂದ ನಂತರ ಸಮಾಜದ ಹಿತದೃಷ್ಟಿಯಿಂದ ಅನುದಾನ ನೀಡಲು ಮುಖ್ಯಮಂತ್ರಿಗಳಿಗೆ, ಸಂಬಂಧಿಸಿದ ಸಚಿವರುಗಳಿಗೆ ಮನವಿ ಸಲ್ಲಿಸಿದರೂ ಸ್ಪಂದನೆ ಸಿಗುತ್ತಿಲ್ಲ. ರಾಜ್ಯದ ಬಡ ಸಮುದಾಯದ, ಶೋಷಿತ ವರ್ಗದ ಆಶಾಕಿರಣವಾಗಿರುವ ಸಿಎಂ ಸಿದ್ದರಾಮಯ್ಯ ಅವರು ಪರಿಶೀಲಿಸಿ ನಮ್ಮ ಬೇಡಿಕೆಗೆ ಶೀಘ್ರ ಸ್ಪಂದನೆ ನೀಡಬೇಕೆಂದು ಒತ್ತಾಯಿಸಿದರು.ಈ ವೇಳೆ ಸಮುದಾಯದ ವಿಭಾಗೀಯ ಉಪಾಧ್ಯಕ್ಷ ಅಲ್ ಹಾಜ್ ಮಾಹೇಬೂಬ ಸಾಬ, ತಾಲೂಕು ಅಧ್ಯಕ್ಷ ಅಮೀನುದ್ದೀನ್ ಜಾಂತಾಪೂರ, ಜಿಲ್ಲಾ ಸಮಿತಿ ಸದಸ್ಯ, ಮಹಮದ್ ಖಾಜಾಹುಸೇನ್, ನಗರ ಘಟಕ ಅಧ್ಯಕ್ಷ ಶಾಮಿದಲಿ ಕರಡಕಲ್, ಹಿರಿಯರಾದ ಮಹಮದ್ ಖಾಜಾಹುಸೇನ್ ಪ್ರಿನ್ಸಿಪಾಲ್, ಅಮಿನುದ್ದೀನ್ ಬಿ ಹಟ್ಟಿ, ಸೈಫುಲ್ಲಾ, ಬಂದೇನವಾಜ್, ಖಾಜಾಹುಸೇನ್, ಮಹಮ್ಮದ್ ಫಾರೂಕ್, ಇಮಾಮುದ್ದೀನ್, ಅನ್ವರ್ ಸೇರಿ ಇತರರು ಇದ್ದರು.