ಸಾರಾಂಶ
ಮುದಗಲ್‌ನ ಕೆಕೆಆರ್‌ಟಿಸಿ ಸಂಘಟನೆ ಮತ್ತು ಸ್ಥಳೀಯ ಯುವಕರು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ವಿಶೇಷ ಕಾರ್ಯದರ್ಶಿ ಚಂದ್ರಶೇಖರ ಎಂ. ಗಂಗಣ್ಣಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಮುದಗಲ್
ಮುದಗಲ್ ಪಟ್ಟಣಕ್ಕೆ ಹೈಟೆಕ್ ಬಸ್‌ನಿಲ್ದಾಣ ಮತ್ತು ಬಸ್ ಡಿಪೋ ಮಂಜೂರಾತಿ ಮಾಡಿಸಬೇಕೆಂದು ಕೆಕೆಆರ್‌ಟಿಸಿ ಸಂಘಟನೆ ಮತ್ತು ಸ್ಥಳೀಯ ಯುವಕರು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರಿಗೆ ಬರೆದ ಮನವಿಯನ್ನು ಇಲಾಖೆಯ ವಿಶೇಷ ಕಾರ್ಯದರ್ಶಿ ಚಂದ್ರಶೇಖರ ಎಂ. ಗಂಗಣ್ಣ ಅವರಿಗೆ ಸಲ್ಲಿಸಿದರು.ಸ್ವಗ್ರಾಮಕ್ಕೆ ಆಗಮಿಸಿದ್ದ ಅವರನ್ನು ಭೇಟಿಯಾದ ಸ್ಥಳೀಯರು, ಪಟ್ಟಣದ ಸರ್ವತೋಮುಖ ಅಭಿವೃದ್ದಿಗಾಗಿ ಪಟ್ಟಣದಲ್ಲಿರುವ ಬಸ್ ನಿಲ್ದಾಣವನ್ನು ಹೈಟೆಕ್ ಪರಿವರ್ತಿಸಬೇಕು ಮತ್ತು ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ, ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವದರಿಂದ ಬಸ್ ಡಿಪೋ ಮಂಜೂರಾತಿ ಮಾಡಿಸಬೇಕೆಂದು ಮನವಿ ಮಾಡಿದರು. ನಿಮ್ಮ ತಂದೆಯವರು ಕೂಡ ಈ ಕ್ಷೇತ್ರದ ಮಾಜಿ ಶಾಸಕರಾಗಿ ಕಾರ್ಯನಿರ್ವಹಿಸಿದ್ದು, ನಾವೆಲ್ಲಾ ಅವರ ಅಭಿಮಾನಿಗಳು. ಅದರಂತೆ ತಮ್ಮ ಕೊಡುಗೆಯೂ ತಮ್ಮ ಪಟ್ಟಣಕ್ಕೆ ತಲುಪಲಿ ಎನ್ನುವದೇ ನಮ್ಮ ಅಭಿಲಾಷೆ ಎಂದರು.
ಮನವಿ ಸ್ವೀಕರಿಸಿದ ಚಂದ್ರಶೇಖರ ಎಂ ಗಂಗಣ್ಣನವರು ಸಾರಿಗೆ ಸಚಿವರು ನನಗೆ ನಮ್ಮ ತಂದೆಯ ಮೂಲಕ ಬೇಕಾದವರು. ಅವರೊಂದಿಗೆ ಚರ್ಚಿಸಿ ಮಂಜೂರಾತಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಕೆಕೆಆರ್‌ಟಿಸಿ ಸಂಘಟನೆ ಅಧ್ಯಕ್ಷ ಕರೀಮಸಾಬ ದಫೆದಾರ, ಚಾಲಕ ನ್ಯಾಮತ್ ಖಾನ್, ಜಿಲಾನಿಪಾಷಾ, ಜಾವೀದ್ ಕಿಲ್ಲಾ, ಮಂಜು ಬನ್ನಿಗೋಳ್ಕರ, ಹುಸೇನ್ಸಾಬ, ಜಗತ್ಸಿಂಗ್, ಗಂಗನಗೌಡ, ಅಮರೇಗೌಡ, ಮಂಜೂರ, ಫರೀದ್, ಯಾಸೀನ್, ಸಲಿಂಪಾಷಾ, ಸೈಯದ ಮಹೆಬೂಬ್ ಖಾದ್ರಿ ಸೇರಿದಂತೆ ಮುಂತಾದವರಿದ್ದರು.