ಸಾರಾಂಶ
ನೂರಾರು ವರ್ಷಗಳಿಂದ ಆ ಜಮೀನಿನಲ್ಲೇ ಅಂತ್ಯಕ್ರಿಯೆಗಳು ನಡೆಯುತ್ತಿವೆ. ಈಗ ಪಂಚಾಯಿತಿಯ ನಿರ್ಧಾರದಿಂದ ಏನು ಮಾಡಬೇಕು ಎಂಬುದು ತೋಚುತ್ತಿಲ್ಲ
ಗದಗ: ರೋಣ ತಾಲೂಕಿನ ಯಾವಗಲ್ಲ ಗ್ರಾಮದ ಹಿಂದು ಲಿಂಗಾಯತ ಸಮಾಜಕ್ಕೆ ಸ್ಮಶಾನ ಭೂಮಿ ಮಂಜೂರು ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.
ಗ್ರಾಮದ ಸರ್ವೆ ನಂ. 283/1 ರಲ್ಲಿ ನೂರಾರು ವರ್ಷಗಳಿಂದ ಶವಸಂಸ್ಕಾರ ಮಾಡುತ್ತಿದ್ದೇವೆ. ಆ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡದಂತೆ ಗ್ರಾಪಂ ಏಕಾಏಕಿ ನೋಟಿಸ್ ಅಂಟಿಸಿದೆ. ಇದರಿಂದ ಹಿಂದು ಲಿಂಗಾಯತ ಸಮಾಜದ ಜನರಿಗೆ ತೊಂದರೆಯಾಗಿದೆ. ಅಧಿಕಾರಿಗಳ ಈ ಕುರಿತು ಸ್ಥಳ ಪರಿಶೀಲನೆ ಮಾಡಿ ಯಥಾ ಸ್ಥಿತಿ ಕಾಪಾಡಬೇಕು. ನಿಯಮಾನುಸಾರ ಜಮೀನನ್ನು ರುದ್ರಭೂಮಿ ಎಂದು ದಾಖಲು ಮಾಡಿ ಎಂದು ಮನವಿಯಲ್ಲಿ ಕೋರಿದ್ದಾರೆ.ನೂರಾರು ವರ್ಷಗಳಿಂದ ಆ ಜಮೀನಿನಲ್ಲೇ ಅಂತ್ಯಕ್ರಿಯೆಗಳು ನಡೆಯುತ್ತಿವೆ. ಈಗ ಪಂಚಾಯಿತಿಯ ನಿರ್ಧಾರದಿಂದ ಏನು ಮಾಡಬೇಕು ಎಂಬುದು ತೋಚುತ್ತಿಲ್ಲ. ಜಿಲ್ಲಾಧಿಕಾರಿ, ತಹಸೀಲ್ದಾರ್ ಇಬ್ಬರಿಗೂ ಮನವಿ ಸಲ್ಲಿಸಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದರು.