ಸಾರಾಂಶ
ಪತ್ರಕರ್ತರ ಸಂಘದ ಸದಸ್ಯ ಹಾಗೂ ಕನ್ನಡ ನ್ಯೂಸ್ ಈ-ಪತ್ರಿಕೆ ಸಂಪಾದಕ ವಸಂತ್ ಅವರ ಮೇಲೆ ಹಾವೇರಿ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಸೋಮವಾರ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸಾಗರ ಶಾಖೆ ವತಿಯಿಂದ ಪೊಲೀಸ್ ಉಪಾಕ್ಷಕರ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಸಾಗರ
ಪತ್ರಕರ್ತರ ಸಂಘದ ಸದಸ್ಯ ಹಾಗೂ ಕನ್ನಡ ನ್ಯೂಸ್ ಈ-ಪತ್ರಿಕೆ ಸಂಪಾದಕ ವಸಂತ್ ಅವರ ಮೇಲೆ ಹಾವೇರಿ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಸೋಮವಾರ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸಾಗರ ಶಾಖೆ ವತಿಯಿಂದ ಪೊಲೀಸ್ ಉಪಾಕ್ಷಕರ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.ಹಾವೇರಿಯಲ್ಲಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ರೈತನ ತಂದೆ ನೀಡಿದ ಮನವಿ ಆಧರಿಸಿ ಇತ್ತೀಚೆಗೆ ಹಾವೇರಿ ಪೊಲೀಸ್ ಠಾಣೆಯಲ್ಲಿ ವಸಂತ್ ವಿರುದ್ಧ ಸುಮೋಟೋ ಪ್ರಕರಣ ದಾಖಲಾಗಿತ್ತು. ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ನೊಂದಾಯಿಸಿದ್ದಕ್ಕೆ ತನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ರೈತರೊಬ್ಬರು ನೊಂದು ಮನವಿ ನೀಡಿದ್ದರು. ಈ ಮಾಹಿತಿ ಆಧರಿಸಿ ಕನ್ನಡ ನ್ಯೂಸ್ ಇ-ಪತ್ರಿಕೆ ಸುದ್ದಿ ಪ್ರಕಟಿಸಿತ್ತೇ ವಿನಃ ವೈಯಕ್ತಿಕ ಕಾರಣವಿರಲಿಲ್ಲ ಎಂದು ಸಂಘದಿಂದ ಸ್ಪಷ್ಟನೆ ನೀಡಲಾಯಿತು.ಹೀಗಾಗಿ ಕೂಡಲೇ ವಸಂತ ಅವರ ಮೇಲಿನ ಪ್ರಕರಣವನ್ನು ಹಿಂಪಡೆಯಬೇಕು. ವಿವಿಧ ಪ್ರಕರಣದಲ್ಲಿ ಪತ್ರಕರ್ತರ ಮೇಲೆ ಪೊಲೀಸರು ಸುಮೋಟೋ ಕೇಸ್ ಹಾಕುವ ಮೊದಲು ಸ್ಥಳೀಯರನ್ನು ಸಂಪರ್ಕಿಸಿ ಸತ್ಯಾಸತ್ಯತೆ ಅರಿಯಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.ಸಂಘದ ಅಧ್ಯಕ್ಷ ಜಿ.ನಾಗೇಶ್, ಪ್ರಧಾನ ಕಾರ್ಯದರ್ಶಿ ಮಹೇಶ್ ಹೆಗಡೆ, ಉಪಾಧ್ಯಕ್ಷ ಲೋಕೇಶ ಕುಮಾರ್, ಖಜಾಂಚಿ ಎಂ.ಜಿ. ರಾಘವನ್, ಜಿಲ್ಲಾ ಕಾರ್ಯದರ್ಶಿ ದೀಪಕ್ ಸಾಗರ್, ಸದಸ್ಯರಾದ ಗಿರೀಶ್ ರಾಯ್ಕರ್, ವಸಂತ ನೀಚಡಿ, ಜಮೀಲ್ ಸಾಗರ್, ವಸಂತ್ ಈಶ್ವರಗೆರೆ, ರಫೀಕ್ ಕೊಪ್ಪ, ಮಾ.ವೆಂ.ಸ. ಪ್ರಸಾದ್, ವಿ. ಶಂಕರ್, ನಾಗರಾಜ್, ಉಮೇಶ್ ಮೊಗವೀರ ಮೊದಲಾದವರಿದ್ದರು.