ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಲು ಒತ್ತಾಯ

| Published : Apr 21 2024, 02:15 AM IST

ಸಾರಾಂಶ

ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಬೇಕು. ದುರ್ಘಟನೆಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ.

ಸಂಡೂರು:

ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಬರ್ಬರವಾಗಿ ಹತ್ಯೆ ಮಾಡಿವ ದುಷ್ಕರ್ಮಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಆಗ್ರಹಿಸಿರುವ ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಸ್ಥೆಯ ಮುಖಂಡರು ಶನಿವಾರ ಪಟ್ಟಣದಲ್ಲಿ ತಹಶೀಲ್ದಾರ್ ಜಿ. ಅನಿಲ್‌ಕುಮಾರ್ ಅವರ ಮೂಲಕ ರಾಜ್ಯಪಾಲರು, ಮುಖ್ಯಮಂತ್ರಿಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗೃಹ ಮಂತ್ರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಸಂಸ್ಥೆಯ ಮುಖಂಡ ಎ.ಎಂ. ಸಂತೋಷ್, ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಬೇಕು. ದುರ್ಘಟನೆಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಶೀಘ್ರ ತನಿಖೆ ಮಾಡಿ, ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.

ಸಂಸ್ಥೆಯ ಮುಖಂಡರಾದ ಎಂ. ಚರಂತಯ್ಯ, ಬಿ.ಎಂ. ಮಹಾಂತೇಶ್, ಬಿ.ಎಂ. ನಾಗರಾಜ, ವಿ.ಎಂ. ನಾಗಭೂಷಣ, ಎಚ್.ಎಂ. ರವಿಸ್ವಾಮಿ, ವಿ.ಜೆ. ಶ್ರೀಪಾದಸ್ವಾಮಿ, ಎಚ್. ಗುರುಬಸವರಾಜ, ಎ.ಎಂ. ಗುರುಪ್ರಸಾದ್, ಕೆ.ಎಂ. ವಿನಾಯಕ, ಬಿ.ಎಂ. ಕುಮಾರಸ್ವಾಮಿ, ಎಂ. ಸಿದ್ದಲಿಂಗಸ್ವಾಮಿ, ಜೆ.ಎಂ. ಪರಮೇಶ್ವರಯ್ಯ, ಎ.ಎಂ.ಪಿ ಕೊಟ್ರೇಶ್, ಕೆ.ಎಂ. ನಾಗಭೂಷಣ, ಕಮಲಾಕ್ಷಿ, ವಿಜಯಲಕ್ಷ್ಮಿ, ಕೆ.ಎಂ.ಕೊಟ್ರುಸ್ವಾಮಿ, ಹೆಚ್.ಎಂ. ಶಿವಮೂರ್ತಿ, ಎಂ.ಪಿ.ಎಂ. ಸುರೇಂದ್ರನಾಥ್ ಉಪಸ್ಥಿತರಿದ್ದರು.