ಸಚಿವ ಈಶ್ವರ ಖಂಡ್ರೆಗೆ ಸಿಎಂ ಮಾಡುವಂತೆ ಆಗ್ರಹ

| Published : Jul 20 2024, 12:46 AM IST

ಸಾರಾಂಶ

ಕಲ್ಯಾಣ ಕರ್ನಾಟಕದ ಭಾಗದ ಜನಪ್ರಿಯ ನಾಯಕರಾಗಿ ಕೆಲಸ ಮಾಡುತ್ತಿರುವ ಈಶ್ವರ ಖಂಡ್ರೆಗೆ ಮುಖ್ಯಮಂತ್ರಿ ಮಾಡಬೇಕೆಂದು ಕೂಡಲೇ ಘೋಷಣೆ ಮಾಡಬೇಕು

ಬೀದರ್‌: ಕಲ್ಯಾಣ ಕರ್ನಾಟಕ ಭಾಗದ ದೀನದಲಿತರ ಹಿಂದುಳಿದ ವರ್ಗದ ಹಾಗೂ ಶೋಷಿತರಿಗಾಗಿ ಹಗಲು ರಾತ್ರಿ ದುಡಿಯುತ್ತಿರುವ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಾಡಲು ಉತ್ಸುಕರಾಗಿದ್ದ ಈಶ್ವರ ಬಿ.ಖಂಡ್ರೆ ಅವರಿಗೆ ಮುಖ್ಯಮಂತ್ರಿ ಮಾಡಬೇಕೆಂದು ಮಾದಾರ ಚೆನ್ನಯ್ಯಾ ಸಮಾಜ ಅಭಿವೃದ್ಧಿ ವೇದಿಕೆ ಮನವಿ ಮಾಡಿದೆ.

ಈ ಕುರಿತು ಬಿದರ್‌ನಲ್ಲಿ ಮಾದಾರ ಚೆನ್ನಯ್ಯಾ ಸಮಾಜ ಅಭಿವೃದ್ಧಿ ವೇದಿಕೆಯಿಂದ ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆಗೆ ಬರೆದ ಮನವಿ ಜಿಲ್ಲಾಡಳಿತಕ್ಕೆ ಸಲ್ಲಿಸಿ, ಸುಮಾರು ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಿದ್ದು, ಕಲ್ಯಾಣ ಕರ್ನಾಟಕದ ಭಾಗದ ಜನಪ್ರಿಯ ನಾಯಕರಾಗಿ ಕೆಲಸ ಮಾಡುತ್ತಿರುವ ಈಶ್ವರ ಖಂಡ್ರೆಗೆ ಮುಖ್ಯಮಂತ್ರಿ ಮಾಡಬೇಕೆಂದು ಕೂಡಲೇ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ವೇದಿಕೆ ಜಿಲ್ಲಾ ಸಂಚಾಲಕರಾದ ಶಾಮಣ್ಣಾ ಬಾವಗಿ, ಗೌರವಾಧ್ಯಕ್ಷ ಮಾರುತಿ ಬಂಗಾರೆ, ಜಿಲ್ಲಾ ಕಾರ್ಯದರ್ಶಿ ಕಲ್ಲಪ್ಪಾ ಉಜ್ಜಣಿಗಿ, ಪ್ರಭುಲಿಂಗ ಅಷ್ಟೂರ, ಅಣ್ಣೆಪ್ಪಾ ಪಟವಾರಿ, ಲಕ್ಷ್ಮಣ ಮುರಾಳ, ಅಶೋಕ ಪಾಟೀಲ, ಗೌತಮ ಮಾಣಿಕ, ಹರೀಶ ಬಂಡೆಪ್ಪಾ, ಭೀಮರಾವ ಶರಣಪ್ಪಾ, ಆಕಾಶ ತುಕಾರಾಮ, ಅಮರ ಸುಭಾಷ, ಸಾಯಿಕುಮಾರ ಶಾಹ ಗಂಜ, ಅಮರ ಸುಭಾಷ ಉಪಸ್ಥಿತರಿದ್ದರು.