ಸಾರಾಂಶ
ಪ್ರೊ.ಭಗವಾನ್ ಅವರು ವಿಚಾರವಂತರಲ್ಲಿ ಪ್ರಮುಖ ಪ್ರಗತಿ ಪರ ಸಾಹಿತಿ. ಪ್ರಜ್ಞಾವಂತ ವಿಮರ್ಶಕ, ಅಪರೂಪದ ಅನುವಾದಕ, ಬುದ್ಧ, ಬಸವಣ್ಣ, ಸ್ವಾಮಿ ವಿವೇಕಾನಂದ, ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಕುವೆಂಪು ಮುಂತಾದವರ ದೃಷ್ಟಿಕೋನವನ್ನು ಸಾಮಾನ್ಯರ ಅರಿವಿಗೆ ನಿರಂತರವಾಗಿ ತಲುಪಿಸುತ್ತಿರುವ ಕನ್ನಡ ಭಾಷಾ ಸೇವಕರಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಭಾರತೀನಗರ
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನಾಗಿ ಪ್ರೊ.ಕೆ.ಎಸ್.ಭಗವಾನ್ ಅವರನ್ನು ಆಯ್ಕೆ ಮಾಡಬೇಕೆಂದು ಡಾ.ಜೈಭೀಮ್ ದಲಿತ ಜಾಗೃತಿ ಸಮಿತಿ ಒತ್ತಾಯಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಸಿ.ಶಿವಲಿಂಗಯ್ಯ, ಪ್ರೊ.ಭಗವಾನ್ ಅವರು ವಿಚಾರವಂತರಲ್ಲಿ ಪ್ರಮುಖ ಪ್ರಗತಿ ಪರ ಸಾಹಿತಿ. ಪ್ರಜ್ಞಾವಂತ ವಿಮರ್ಶಕ, ಅಪರೂಪದ ಅನುವಾದಕ, ಬುದ್ಧ, ಬಸವಣ್ಣ, ಸ್ವಾಮಿ ವಿವೇಕಾನಂದ, ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಕುವೆಂಪು ಮುಂತಾದವರ ದೃಷ್ಟಿಕೋನವನ್ನು ಸಾಮಾನ್ಯರ ಅರಿವಿಗೆ ನಿರಂತರವಾಗಿ ತಲುಪಿಸುತ್ತಿರುವ ಕನ್ನಡ ಭಾಷಾ ಸೇವಕರಾಗಿದ್ದಾರೆ ಎಂದರು.
ಷೇಕ್ಸ್ ಪೀಯರ್ ಕೃತಿಗಳನ್ನು ಯಾರೂ ಅನುವಾದಿಸಿಲ್ಲ. 11 ಕೃತಿಗಳು ಕನ್ನಡಕ್ಕೆ ಭಾಷಾಂತರಗೊಳಿಸಿದ್ದಾರೆ. ಹಲವು ವಿಶ್ವ ವಿದ್ಯಾನಿಲಯಗಳಲ್ಲಿ ಪಠ್ಯ ಪುಸ್ತಕಗಳಾಗಿವೆ. ಇವರ ಅನೇಕ ಕೃತಿಗಳು ಬೇರೆ ಬೇರೆ ಭಾಷೆಗಳಿಗೆ ತರ್ಜುಮೆಗೊಂಡಿದೆ ಎಂದರು.ದಕ್ಷಿಣ ಭಾರತದ ಕೇರಳ, ತಮಿಳುನಾಡು ಇನ್ನಿತರ ರಾಜ್ಯಗಳಲ್ಲಿ ಪರಿಚಿತರಷ್ಟೇ ಅಲ್ಲದೇ, ಪ್ರಗತಿಪರ ಒಡನಾಡ ಉಳ್ಳವರಾಗಿದ್ದಾರೆ. ಕನ್ನಡ - ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಗಳಲ್ಲಿ ಪ್ರಭುತ್ವತೆ ಸಾಧಿಸಿದ್ದಾರೆ. ಜೊತೆಗೆ 50 ಕೃತಿಗಳನ್ನು ರಚಿಸಿದ್ದಾರೆ ಎಂದರು.
ಸಾಹಿತ್ಯ ಲೋಕದಲ್ಲಿ ಬಹಳಷ್ಟು ಪರಿಣಿತಿ ಹೊಂದಿರುವ ಪ್ರೊ.ಕೆ.ಎಸ್.ಭಗವಾನ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷರನ್ನಾಗಿ ಮಾಡಬೇಕೆಂದು ಶಿಫಾರಸ್ಸು ಮಾಡಿದ್ದಾರೆ. ಹಾಗಾಗಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಗೌರವಿಸಬೇಕೆಂದು ಒತ್ತಾಯಿಸಿದ್ದಾರೆ.