ಸ್ಮಶಾನಕ್ಕೆ ತೆರಳಲು ರಸ್ತೆ ಕಲ್ಪಿಸುವವಂತೆ ಆಗ್ರಹಿಸಿ ಶವವಿಟ್ಟು ಪ್ರತಿಭಟನೆ

| Published : Oct 17 2024, 12:53 AM IST

ಸ್ಮಶಾನಕ್ಕೆ ತೆರಳಲು ರಸ್ತೆ ಕಲ್ಪಿಸುವವಂತೆ ಆಗ್ರಹಿಸಿ ಶವವಿಟ್ಟು ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಯಾರ ಬಳಿ ಹೇಳಿದರು ನಲವತ್ತು ವರ್ಷದಿಂದ ಇದೆ ಪರಿಸ್ಥಿತಿ

ಕನ್ನಡಪ್ರಭ ವಾರ್ತೆ ಬನ್ನೂರು ಸ್ಮಶಾನಕ್ಕೆ ತೆರಳಲು ರಸ್ತೆ ಸೌಕಲ್ಯ ಕಲ್ಪಿಸುವಂತೆ ಆಗ್ರಹಿಸಿ ಮಾದಿಗ ಜನಾಂಗದ ವತಿಯಿಂದ ಕಾವೇರಿ ವೃತ್ತದಲ್ಲಿ ಶವವಿಟ್ಟು ಪ್ರತಿಭಟಿಸಿದರು.ಪುರಸಭಾ ಸದಸ್ಯ ಶಿವಣ್ಣ ಮಾತನಾಡಿ, ಮಾದಿಗ ಜನಾಂಗಕ್ಕೆ ಸರ್ಕಾರ ಹಲವಾರು ಸೌಲಭ್ಯ ನೀಡುತ್ತಿದೆ ಎಂದು ಓಲೈಸುವ ಮಾತನಾಡಿ, ನಮ್ಮ ಜನಾಂಗವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಾರೆ ವಿನಃ, ವಾಸ್ತವವಾಗಿ ನಮಗೆ ಶವ ಹೂಳಲು ಸ್ಮಶಾನಕ್ಕೆ ತೆರಳಲು ರಸ್ತೆ ಇಲ್ಲದೆ ಗದ್ದೆ ಬಯಲಲ್ಲಿ ಹೋಗಿ ಸಂಸ್ಕಾರ ಮಾಡಬೇಕಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಯಾರ ಬಳಿ ಹೇಳಿದರು ನಲವತ್ತು ವರ್ಷದಿಂದ ಇದೆ ಪರಿಸ್ಥಿತಿ ಆಗಿದೆ ಎಂದರು.ಪಟ್ಟಣದ ಕಾವೇರಿ ವೃತ್ತದಲ್ಲಿ ಮಾದಿಗ ಜನಾಂಗದ ವತಿಯಿಂದ ಸ್ಮಶಾನಕ್ಕೆ ತೆರಳಲು ರಸ್ತೆ ಸಂಪರ್ಕ ಕಲ್ಸಿಸುವಂತೆ ಆಗ್ರಹಿಸಿ ಶವ ಇಟ್ಟು ಪ್ರತಿಭಟನೆ ವೇಳೆ ಅವರು ಮಾತನಾಡಿದರು.ನಮ್ಮ ಜನಾಂಗದ ಮೇಲೆ ನಿರಂತರವಾಗಿ ಶೋಷಣೆ ನಡೆಯುತ್ತಲೆ ಇದ್ದು, ಹಲವಾರು ವರ್ಷದಿಂದ ಸ್ಮಶಾನಕ್ಕೆ ಹೋಗಲು ಜಾಗವಿಲ್ಲದೇ ಗದ್ದೆ ಬಯಲಲ್ಲಿ ಹೊತ್ತು ಸಾಗುತ್ತಿದ್ದೆವು. ಆದರೆ ಸ್ಥಳೀಯರು ಇದನ್ನು ಕಂಡು ರಸ್ತೆಗೆ ಜಾಗ ನೀಡಿದರು, ಆದರೆ ಜಿಲ್ಲಾಡಳಿತದಿಂದ ಆಗಬೇಕಾಗಿರುವಂತ ಕೆಲಸ ಆಗದೇ ನಮ್ಮ ಪರಿಸ್ಥಿತಿ ಶೋಚನೀಯವಾಗಿದೆ. ಈ ಹಿನ್ನೆಲೆ ಕಾವೇರಿ ವೃತ್ತದಲ್ಲಿ ಸಂಸ್ಕಾರ ಮಾಡೋಣ ಎಂದು ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.ನಿರಂತರವಾಗಿ 4 ಗಂಟೆಗಳ ಪ್ರತಿಭಟನೆಯಿಂದ ಸ್ಥಳಕ್ಕೆ ಆಗಮಿಸಿದ ಜಿಲ್ಲಾಡಳಿತದ ಅಧಿಕಾರಿಗಳು ಸ್ಮಶಾನ ರಸ್ತೆಯ ಸಮಸ್ಯೆಯನ್ನು ಶೀಘ್ರದಲ್ಲೆ ಪರಿಹರಿಸಿ ಕೊಡುವಂತೆ ಭರವಸೆ ನೀಡಿದ ಹಿನ್ನೆಲೆ ಪ್ರತಿಭಟನೆ ಹಿಂಪಡೆಯಲಾಯಿತು.ಪುರಸಭಾ ಸದಸ್ಯ ಶಿವಣ್ಣ, ಗಿರಿಯಪ್ಪ, ಮರಿಯಪ್ಪ, ಶಿವಪ್ರಕಾಶ್, ಚನ್ನಪ್ಪ, ರಮೇಶ್, ಕುಮಾರ್, ಜಯರಾಮು, ಶಿವಣ್ಣ, ಮಹದೇವ, ಪ್ರಕಾಶ್, ಸುರೇಶ್, ಸಂದೀಪ್, ನಿತಿನ್, ರಾಜು, ಚಂದನ್, ಕೃಷ್ಣ ಇದ್ದರು.