ಸಾರಾಂಶ
ಚಾಲಕರಿಗೆ ಕನಿಷ್ಠ 10 ವರ್ಷಗಳವರೆಗೆ ಶಿಕ್ಷೆ ಮತ್ತು ₹ 7 ಲಕ್ಷ ದಂಡವನ್ನು ವಿಧಿಸುವ ಹೊಸ ಕಾನೂನು ಜಾರಿಗೊಳಿಸಿದ್ದು ಖಂಡನೀಯ
ದೇವರಹಿಪ್ಪರಗಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತ ಸಂಭವಿಸಿದರೆ ಅದಕ್ಕೆ ಸಂಬಂಧಿಸಿದ ಚಾಲಕರಿಗೆ ಕನಿಷ್ಠ 10 ವರ್ಷಗಳವರೆಗೆ ಶಿಕ್ಷೆ ಮತ್ತು ₹ 7 ಲಕ್ಷ ದಂಡವನ್ನು ವಿಧಿಸುವ ಹೊಸ ಕಾನೂನು ಜಾರಿಗೊಳಿಸಿದ್ದು ಖಂಡನೀಯ. ಇದರಿಂದ ಚಾಲಕರ ಬದುಕನ್ನೇ ಕಸಿದುಕೊಳ್ಳಲಿದೆ, ಬೇಕೆಂತಲೇ ಯಾರೂ ಅಪಘಾತ ಮಾಡುವುದಿಲ್ಲ ಎಂಬುದನ್ನು ಸರ್ಕಾರ ಅರಿಯಬೇಕು ಕೂಡಲೇ ಹಿಟ್ ಅಂಡ್ ರನ್ ಕಾನೂನು ಹಿಂಪಡೆಯಲು ತಾಲೂಕು ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ರೆಹಮಾನ್ ಕನಕಾಲ್ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.
ಕೇಂದ್ರ ಸರ್ಕಾರದಿಂದ ವಾಹನ ಚಾಲಕರಿಗೆ 10 ವರ್ಷ ಜೈಲು ₹ 7 ಲಕ್ಷ ದಂಡ ಎಂಬ ಹಿಟ್ ಅಂಡ್ ರನ್ ಎಂಬ ಹೊಸ ಕಾನೂನು ಈ ಕೂಡಲೇ ಹಿಂಪಡೆಯಬೇಕು. ಚಾಲಕರು ಎಲ್ಲ ಬಡವರಾಗಿದ್ದು, ಹೊಟ್ಟೆಪಾಡಿಗಾಗಿ ವೃತ್ತಿ ಮಾಡುತ್ತಿದ್ದಾರೆ. ಬಡವರಿಗೆ ಈ ನಿಯಮ ಕಠಿಣ ಪರಿಸ್ಥಿತಿಗೆ ತಲುಪುತ್ತಿದೆ. ಹಾಗಾಗಿ ಈ ಕೂಡಲೇ ಕಾನೂನು ಹಿಂಪಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೇವರ ಹಿಪ್ಪರಗಿಯ ತಾಲೂಕಿನ ಎಲ್ಲಾ ವಾಹನ ಚಾಲಕರು ಹಾಗೂ ಜಯ ಕರ್ನಾಟಕ ಸಂಘಟನೆ ದೊಡ್ಡ ಪ್ರಮಾಣದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.