ಸಾರಾಂಶ
ಕಾಡ್ಗಿಚ್ಚು ಹಾಗೂ ಬೆಂಕಿಯಿಂದಾಗುವ ಅವಘಡಗಳನ್ನು ಪರಿಣಾಮಕಾರಿಯಾಗಿ ನಂದಿಸುವಪ್ರಾತ್ಯಕ್ಷಿಕೆ ಇತ್ತೀಚೆಗೆ ನಡೆಯಿತು. ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಮುನ್ನೆಚ್ಚರಿಕೆಯ ಬಗ್ಗೆ ಮಾಹಿತಿ ನೀಡಿದರು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಅರಣ್ಯ ಇಲಾಖೆ, ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ ಹಾಗೂ ಕುಶಾಲನಗರದ ಅಗ್ನಿ ಶಾಮಕ ಠಾಣೆ ವತಿಯಿಂದ ಸಾರ್ವಜನಿಕರಿಗೆ ಕಾಡ್ಗಿಚ್ಚು ಹಾಗೂ ಬೆಂಕಿಯಿಂದಾಗುವ ಅವಘಡಗಳನ್ನು ಪರಿಣಾಮಕಾರಿಯಾಗಿ ನಂದಿಸುವ ಪ್ರಾತ್ಯಕ್ಷಿಕೆ ಯಡವನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.ಅಗ್ನಿಶಾಮಕ ಠಾಣೆಯ ಸಿಬ್ಬಂದಿ, ಸ್ಥಳದಲ್ಲಿ ಮುಂಜಾಗ್ರತೆ ಹಾಗೂ ಬೆಂಕಿ ಅವಘಡ ಸಂಭವಿಸಿದಾಗ ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆಯ ಬಗ್ಗೆ ಮಾಹಿತಿ ನೀಡಿದರು.
ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಶೈಲೇಂದ್ರಕುಮಾರ್, ವಲಯ ಅರಣ್ಯ ಅಧಿಕಾರಿ ಚಂದ್ರೇಶ್, ಕುಶಾಲನಗರ ಅಗ್ನಿಶಾಮಕ ಠಾಣೆಯ ಶೋಬಿತ್, ಲತೇಶ್ ಕುಮಾರ್, ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಬಸವರಾಜು, ಆಶ್ರಮ ಶಾಲಾ ಮುಖ್ಯ ಶಿಕ್ಷಕ ರಜನಿಕಾಂತ್ ಹಾಗೂ ಇಲಾಖಾ ಸಿಬ್ಬಂದಿ ಇದ್ದರು.ಯಡವನಾಡು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಆಶ್ರಮ ವಸತಿ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.