ಜಡ್ಜ್‌ ಮೇಲೆ ಶೂ ಎಸೆದವನನ್ನು ಗಡಿಪಾರು ಮಾಡಿ

| Published : Oct 09 2025, 02:00 AM IST

ಜಡ್ಜ್‌ ಮೇಲೆ ಶೂ ಎಸೆದವನನ್ನು ಗಡಿಪಾರು ಮಾಡಿ
Share this Article
  • FB
  • TW
  • Linkdin
  • Email

ಸಾರಾಂಶ

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರ ಮೇಲೆ ಶೂ ಎಸೆಯಲು ಮುಂದಾದ ವ್ಯಕ್ತಿಯನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿ.ರಾಜಣ್ಣ ಯರಿಯೂರು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರ ಮೇಲೆ ಶೂ ಎಸೆಯಲು ಮುಂದಾದ ವ್ಯಕ್ತಿಯನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿ.ರಾಜಣ್ಣ ಯರಿಯೂರು ಆಗ್ರಹಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮನುವಾದದ ಪ್ರವರ್ತಕರು, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಮೇಲೆ ತನ್ನ ಶೂ ಎಸೆಯಲು ಮುಂದಾಗಿರುವುದು ಇದು ವ್ಯಕ್ತಿಯೊಬ್ಬರ ಮೇಲೆ ನಡೆದ ದಾಳಿಯಲ್ಲ ನ್ಯಾಯದ ಮೇಲಿನ ದಾಳಿ. ಸಂವಿಧಾನದ ಮೇಲೆ ಮನುವಾದಿಗಳಿಗಿರುವ ಅಸಹನೆಗೆ ಹಾಗೂ ದೇಶದ ಅತ್ಯುನ್ನತ ಸ್ಥಾನದಲ್ಲಿದ್ದರೂ ಶೋಷಿತರ ಶೋಷಣೆ ತಪ್ಪಿದ್ದಲ್ಲ ಎನ್ನುವುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆ ಎಂದರು.

ಇತಿಹಾಸದಲ್ಲೇ ಎಂದೂ ನಡೆಯದ ಈ ಮಾದರಿಯ ಕೃತ್ಯ ನಡೆದಿದೆ. ಮನುವಾದಿಗಳ ಈ ಕಪ್ಪುಚುಕ್ಕಿಯನ್ನು ಎಂದಿಗೂ ಅಳಿಸಲು ಸಾಧ್ಯವಿಲ್ಲ. ಸ್ವಾತ್ರಂತ್ಯ ಸಿಕ್ಕ ನಂತರದಿಂದ ಹಿಡಿದು ಇವತ್ತೀನವರೆಗೂ ಏನು ಬದಲಾವಣೆ ಆಗಿಲ್ಲ. ಈ ಮನುವಾದಿ ಸನಾತನಿ ಮತಾಂಧ ಸಂಘ ಪರಿವಾರದ ವಿಕೃತ ಮನಸ್ಥಿತಿ ೧೨ ಡಿಸೆಂಬರ್ ೧೯೪೫ ಇದೇ ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಅಂಬೇಡ್ಕರ್ ಶವಯಾತ್ರೆ ಮಾಡಿದರು. ಮತ್ತೆ ಸಂವಿಧಾನದ ಪ್ರತಿಗಳನ್ನು ಸುಟ್ಟಿದರು. ಇದೇ ದೇಶದ್ರೋಹಿಗಳು ಸಂಘಟನಾ ಸಂಘ ಪರಿವಾರಗಳು ಎಂದರು.

ಸನಾತನಿ ಮನುವಾದಿ ಮತಾಂಧ ಭಯೋತ್ಪಾದಕ ಕಿಶೋರ್‌ ರಾಕೇಶ್ ಎಂಬವನು ಶೂ ಎಸೆತ ಮಾಡಿದ್ದಾನೆ. ಈ ಘಟನೆಗೆ ಹಿನ್ನೆಲೆ ಖಜುರಾಹೋದಲ್ಲಿರುವ ೭ ಅಡಿ ಉದ್ದದ ವಿಷ್ಣು ಮೂರ್ತಿಯ ಮಸ್ತಕವಿಚ್ಛೇದಿತ ವಿಗ್ರಹದ ಪುನರ್‌ಸ್ಥಾಪನೆ ಕುರಿತ ಹಳೆಯ ಪ್ರಕರಣಕ್ಕೆ ಸಂಬಂಧಿಸಿದೆ. ಆಗ ಗವಾಯಿ ಅವರು ಹಾಸ್ಯಾತ್ಮಕ ಶೈಲಿಯಲ್ಲಿ ನೀವು ಭಕ್ತರಾದರೆ ದೇವರನ್ನೇ ಕೇಳಿ. ಈಗ ದೇವರು ನಿಮಗೆ ಸಹಾಯ ಮಾಡಲಿ’ ಎಂದು ಹೇಳಿದ್ದರು. ಈ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದಾಗ ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ. ಇದು ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಚಿತ್ರಿತವಾಗಿದೆ ಎಂದು ಹೇಳಿದ್ದರು.

ಈ ಘಟನೆಯ ಹಿಂದೆ ಆರ್‌ಎಸ್‌ಎಸ್‌ನ ೧೦೦ ನೇ ವರ್ಷದ ಕಾರ್ಯಕ್ರಮಕ್ಕೆ ಸಿಜಿಐ ಗವಾಯಿರವರ ತಾಯಿಗೆ ಆಹ್ವಾನವಿತ್ತು. ಆದರೂ ಸಹ ಅವರು ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದರು. ನಾನೇನಾದರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೆ ಅಂಬೇಡ್ಕರ್ ಸಿದ್ಧಾಂತವನ್ನು ಮುಂದಿಡುತ್ತಿದ್ದೆ ಎಂದು ಕಮಲ ಗವಾಯಿ ಹೇಳಿರುವ ಹೇಳಿಕೆಯನ್ನು ಸಹಿಸಿಕೊಳ್ಳಲಾಗದ ಸನಾತನವಾದಿ ವಕೀಲ ಕಿಶೋರ್‌ ರಾಕೇಶ್‌ರವರನ್ನು ದೇಶದಿಂದ ಗಡಿಪಾರು ಮಾಡಬೇಕು. ಇಂತಹ ಮತಾಂದ ಸನಾತನಿಗಳಿಗೆ ಹುಚ್ಚು ಭ್ರಮೆ ಹಿಡಿಸುತ್ತಿರುವ ಆರ್‌ಎಸ್‌ಎಸ್ ಹಿಡನ್ ಅಜೆಂಡವನ್ನು ಸಂಪೂರ್ಣವಾಗಿ ದೇಶಾದ್ಯಂತ ಹರಡಲು ಮುಂದಾಗಿರುವ ಈ ದೇಶದ ಸಂವಿಧಾನದ ಹುದ್ದೆಯಲ್ಲಿರುವ ಸರ್ಕಾರವನ್ನು ಕೂಡಲೇ ವಜಾಗೊಳಿಸುವಂತೆ ಮನವಿ ಮಾಡಿದರು,

ಕರ್ನಾಟಕ ದಲಿತ ಸಂಘರ್ಷ ಸಮಿತಿ ಡಿ.ಜಿ.ಸಾಗರ್ ಬಣದ ಜಿಲ್ಲಾ ಸಂಚಾಲಕ ಸಿ.ಎಂ.ಶಿವಣ್ಣ , ಜನಹಿತಾಶಕ್ತಿ ಹೋರಾಟ ವೇದಿಕೆ ರಾಮಸಮುದ್ರ ಸುರೇಶ್ ಮಾತನಾಡಿದರು.

ಪತ್ರಿಕಾಗೋಷ್ಠಿಯಲಿ ಜಿಲ್ಲಾ ಸಂಯೋಜಕ ಬಸವರಾಜು ಕೆರೆಹಳ್ಳಿ, ಜಿಲ್ಲಾ ಸಂಘಟನಾ ಸಂಘಟಕರಾದ ನಂಜುಂಡಸ್ವಾಮಿ, ಶಿವಕುಮಾರ್, ತಾಲೂಕು ಅಧ್ಯಕ್ಷ ಅನಿಲ್ ಕುಮಾರ್ ಇದ್ದರು.