ವಿಪತ್ತು ನಿರ್ವಹಣಾ ಘಟಕದಿಂದ ನಿರ್ಗತಿಕ ಮಹಿಳೆ ಮನೆ ದುರಸ್ತಿ

| Published : May 28 2024, 01:09 AM IST

ವಿಪತ್ತು ನಿರ್ವಹಣಾ ಘಟಕದಿಂದ ನಿರ್ಗತಿಕ ಮಹಿಳೆ ಮನೆ ದುರಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ: ಧ.ಗ್ರಾ.ಯೋಜನೆಯ ಬಿ.ಎಚ್‌.ಕೈಮರದ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಬಿಂತ್ರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಟೇಸರದ ಕಿಟ್ಟಮ್ಮ ಎಂಬ ನಿರ್ಗತಿಕ ಮಹಿಳೆ ಮನೆಯನ್ನು ಶ್ರಮದಾನದ ಮೂಲಕ ಭಾನುವಾರ ದುರಸ್ತಿ ಗೊಳಿಸಿ ಮಾನವೀಯತೆ ಮೆರೆದಿದ್ದಾರೆ.

ಈ ಸಂದರ್ಭದಲ್ಲಿ ಬಿ.ಎಚ್‌.ಕೈಮರದ ವಿಪತ್ತು ನಿರ್ವಹಣಾ ಘಟಕದ ಕ್ಯಾಪ್ಟನ್‌ ಸಾಜು ಮಾತನಾಡಿ, ಧ.ಗ್ರಾ.ಯೋಜನೆಯ ವಿಪತ್ತು ನಿರ್ವಹಣಾ ಘಟಕ ಅನೇಕ ಸಂದರ್ಭದಲ್ಲಿ ವಿಪತ್ತು ಬಂದಾಗ ಕಾರ್ಯಾಚರಣೆ ನಡೆಸುತ್ತೇವೆ. ಅನೇಕ ಸಾಮಾಜಿಕ ಕಾರ್ಯ ನಡೆಸಿಕೊಂಡು ಬರುತ್ತಿದ್ದೇವೆ. ವಾಟೇಸರದಲ್ಲಿ ಕಿಟ್ಟಮ್ಮ ಎಂಬ ನಿರ್ಗತಿಕ ಮಹಿಳೆಯ ಮನೆ ಬೀಳುವ ಹಂತ ತಲುಪಿದೆ ಎಂದು ಗ್ರಾಮಸ್ಥರು ತಿಳಿಸಿದ್ದರು. ಆದ್ದರಿಂದ ಇಂದು ಶ್ರಮದಾನದ ಮೂಲಕ ಮನೆಯನ್ನು ಸಂಪೂರ್ಣವಾಗಿ ದುರಸ್ತಿ ಮಾಡಿಸಿಕೊಟ್ಟಿದ್ದೇವೆ ಎಂದರು.

ಧ.ಗ್ರಾ.ಯೋಜನೆಯ ಬಿ.ಎಚ್‌.ಕೈಮರ ವಲಯ ಮೇಲ್ವೀಚರಕ ತೀರ್ಥರಾಜ್‌ ಮಾತನಾಡಿ, ವಾಟೇಸರದಲ್ಲಿ ಕಿಟ್ಟಮ್ಮ ಎಂಬ ಮಹಿಳೆ ಒಬ್ಬರೇ ಇದ್ದು ದುಡಿಯಲು ಅಶಕ್ತರಾಗಿದ್ದಾರೆ. ಇವರನ್ನು ನೋಡಿಕೊಳ್ಳಲು ಸಹ ಯಾರು ಇಲ್ಲ. ಮಳೆಗಾಲದಲ್ಲಿ ಮನೆ ಬೀಳುವ ಸ್ಥಿತಿಯಲ್ಲಿತ್ತು. ಈಗ ವಿಪತ್ತು ನಿರ್ವಹಣಾ ತಂಡದವರು ಮನೆ ರಿಪೇರಿ ಮಾಡಿಕೊಟ್ಟಿ ರುವುದರಿಂದ ಕಿಟ್ಟಮ್ಮ ಈಗ ನಿರಾಳರಾಗಿದ್ದಾರೆ ಎಂದರು.

ಮನೆ ರಿಪೇರಿ ಕಾರ್ಯಕ್ರಮದಲ್ಲಿ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಸಾಜು,ಚಂದ್ರ, ಡಿ.ಆರ್‌.ಕೃಷ್ಣಮೂರ್ತಿ, ಶಿಬಿ, ಪ್ರಭಾಕರ, ಅಣ್ಣಪ್ಪ, ಮ್ಯಾಥ್ಯೂ, ಎಸ್‌.ಟಿ.ಕೃಷ್ಣಮೂರ್ತಿ, ಚೈತ್ರ, ಶೈನಿ, ಜಯನ್‌, ಇಂಧೂದರ, ಲಕ್ಷ್ಮಣ, ಅರ್ಚನಾ ಶೆಟ್ಟಿ ಭಾಗವಹಿಸಿದ್ದರು.