ಸಾರಾಂಶ
ಶೃಂಗೇರಿ, ಸಕಲ ಜೀವರಾಶಿಗೂ ಪ್ರಕೃತಿಯೇ ಮೂಲಾಧಾರ. ಜೀವ ಸಂಕುಲದ ಅಳಿವು ಉಳಿವು ಪ್ರಕೃತಿ ಮೇಲೆ ಅವಲಂಬಿಸಿದೆ. ಪ್ರಕೃತಿ ಮುನಿದರೆ ಜೀವಸಂಕುಲ ವಿನಾಶ ಖಚಿತ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಸುದೀಪ್ ಹೇಳಿದರು.
ಅಂತಾರಾಷ್ಟ್ರೀಯ ಜೈವಿಕ ದಿನಾಚರಣೆ
ಕನ್ನಡಪ್ರಭ ವಾರ್ತೆ, ಶೃಂಗೇರಿಸಕಲ ಜೀವರಾಶಿಗೂ ಪ್ರಕೃತಿಯೇ ಮೂಲಾಧಾರ. ಜೀವ ಸಂಕುಲದ ಅಳಿವು ಉಳಿವು ಪ್ರಕೃತಿ ಮೇಲೆ ಅವಲಂಬಿಸಿದೆ. ಪ್ರಕೃತಿ ಮುನಿದರೆ ಜೀವಸಂಕುಲ ವಿನಾಶ ಖಚಿತ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಸುದೀಪ್ ಹೇಳಿದರು.
ತಾಲೂಕಿನ ಕೂತಗೋಡು ಪಂಚಾಯಿತಿ ವೈಕುಂಠಪುರ ಸರ್ಕಾರಿ ಪ್ರೌಡಶಾಲಾವರಣದಲ್ಲಿ ಅರಣ್ಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಜೈವಿಕ ದಿನಾಚಾರಣೆಯಲ್ಲಿ ಮಾತನಾಡಿದರು. ಪ್ರಕೃತಿ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯದಿಂದ ಭೂಮಿ, ಗುಡ್ಡ ಕುಸಿತ, ನೆರೆ, ಪ್ರವಾಹ, ಬರಗಾಲ, ಅತಿವೃಷ್ಠಿ, ಅನಾವೃಷ್ಠಿ ಯಂತಹ ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ.ಅರಣ್ಯ, ಪರಿಸರ ನಾಶ ಇವೆಲ್ಲದರ ಪರಿಣಾಮ ಇಂದು ಕಾಣುತ್ತಿದ್ದೇವೆ. ಕಳೆದ ಕೆಲವರ್ಷಗಳ ಹಿಂದೆ ಕೊಡಗಿನ ಭಾಗಗಳಲ್ಲಿ ಉಂಟಾದ ಭೂಕುಸಿತ, ಗುಡ್ಡ ಕುಸಿದ ನಮ್ಮೆಲ್ಲರ ಕಣ್ಮುಂದೆ ಇದೆ. ಈಗ ವಯನಾಡು ಭೂಕುಸಿತದಿಂದ ಗ್ರಾಮಗಳೇ ಕಣ್ಮರೆ ಯಾದವು. ಶಿರೂರು ಘಟನೆ ಇವೆಲ್ಲವೂ ಪ್ರಕೃತಿ ಮೇಲೆ ಉಂಟಾದ ದೌರ್ಜನ್ಯಗಳೇ ಕಾರಣಗಳಾಗಿವೆ.
ಮಾನವನ ದುರಾಸೆಯೇ ಪ್ರಕೃತಿ ನಾಶಕ್ಕೆ ಮೂಲಕಾರಣ. ಪರಿಸರ ಉಳಿಸಬೇಕು. ಪ್ರತಿಯೊಬ್ಬರೂ ಒಂದೊಂದು ಸಸಿ ನೆಟ್ಟು ಬೆಳೆಸಬೇಕು. ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಬೇಕು. ಅರಣ್ಯ ಪ್ರದೇಶಗಳಲ್ಲಿ ಶಾಲಾ ಕಾಲೇಜು ಆವರಣಗಳಲ್ಲಿ ಗಿಡಮರಗಳನ್ನು ನೆಟ್ಟು ಬೆಳೆಸಬೇಕು ಎಂದರು.ಅರಣ್ಯ ಇಲಾಖೆ ಶಿವರಾತ್ರೇಶ್ವರ ಸ್ವಾಮಿ, ಮುತ್ತಣ್ಣ,ರಮೇಶ್,ತೋಟಗಾರಿಕಾ ಇಲಾಖೆಯ ಶ್ರೀ ಕೃಷ್ಣ ಮತ್ತಿತರರು ಇದ್ದರು.