ಕಾಡುಪ್ರಾಣಿಗಳ ಹಾವಳಿಗೆ ಜೋಳ ನಾಶ

| Published : Nov 24 2023, 01:30 AM IST

ಸಾರಾಂಶ

ಹನೂರು: ತಾಲೂಕಿನ ಕೆ.ವಿ.ಎನ್‌. ದೊಡ್ಡಿ ಗ್ರಾಮದ ರೈತ ರಂಗಯ್ಯನವರ ಜಮೀನಿನಲ್ಲಿ ಮಂಗಳವಾರ ರಾತ್ರಿ ಕಾಡು ಹಂದಿಗಳು ನುಗ್ಗಿ ಮುಸುಕಿನ ಜೋಳದ ಫಸಲನ್ನು ತಿಂದು ನಾಶಗೊಳಿಸಿವೆ. ಜೋಳದ ಫಸಲನ್ನು ನಾಶಗೊಳಿಸಿರುವ ಬಗ್ಗೆ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಫಸಲಿನ ನಷ್ಟದ ಅಂದಾಜು ಪಟ್ಟಿ ತಯಾರಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಸಂಘಟನೆ ಅರಣ್ಯ ಅಧಿಕಾರಿಗಳನ್ನು ಒತ್ತಾಯಿಸಿದೆ. ಅರಣ್ಯದಂಚಿನ ರೈತರ ಜಮೀನುಗಳಿಗೆ ಕಾಡುಪ್ರಾಣಿಗಳು ಬಂದು ಜೋಳದ ಫಸಲನ್ನು ನಾಶಗೊಳಿಸುತ್ತಿದ್ದು, ಈ ಬಗ್ಗೆ ಹಲವು ಬಾರಿ ಅರಣ್ಯ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಸಂಬಂಧಪಟ್ಟ ಇಲಾಖೆ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

----

22ಸಿಎಚ್‌ಎನ್‌15

ಹನೂರು ತಾಲೂಕಿನ ಕೆ ವಿ ಎನ್ ದೊಡ್ಡಿ ಗ್ರಾಮದ ರೈತ ರಂಗಯ್ಯನ ಜಮೀನಿನಲ್ಲಿ ಬೆಳೆಯಲಾಗಿರುವ ಜೋಳದ ಫಸಲನ್ನು ಕಾಡು ಹಂದಿಗಳು ತಿಂದು ನಾಶಗೊಳಿಸಿರುವುದು.